ಈ ಪುಟವನ್ನು ಪ್ರಕಟಿಸಲಾಗಿದೆ
೭೮
ಸತೀಹಿತೈಷಿಣೀ



ಮೂಲ೦ ಭಾಗ್ಯಂ ಪೂರ್ವದಿತಾಂ ಮಾಡಿದ ಕರ್ಮo |

ಕಾಲಕ್ಕಕ್ಕುಂ ಸತ್ಥಲಿತಂ ಭೂರಹದಂತೇ ||(ಛಂದಸಾರ)
( (ಕೆಲವು ಹೊತ್ತು ಚಿಂತಿಸುತ್ತಿದ್ದು ಬಳಿಕ ರಮಾನಂದನ ಕೈ ಹಿಡಿದು)- ಆಯುಷ್ಯಂತನಾದ ರಮಾನಂದನೆ { ಇಲ್ಲಿ ಕುಳಿತೇನು ಮಾಡುತಿರುವೆ?”

ರಮಾ:-( ಕಣ್ಣೆರೆದು ನೋಡಿ ಕುತೂಹಲದಿಂದ ) : ಸೌಮ್ಯನೇ ! ಸಕಾಲದಲ್ಲಿ ಬಂದ್ರೆ, ಬಾ ಕುಳಿತುಕೊ.'
ಸೌಮ್ಯ:-( ರಮಾನಂದನ ಬಳಿಯಲ್ಲಿ ಕುಳಿತು ) - ಕುಮಾರನೆ | ಇನ್ನೇನು ಮಾಡುವೆ? ?
ರಮ:-ಮನಸ್ಸು ವಿವಿಧ ವಿಚಾರಗಳಿಂದ ವ್ಯಸ್ತವಾಗಿದ್ದಿತು. ವಿಶ್ರಾಂತಿಗೆಂದು ಬಂದು ಇಲ್ಲಿ ಕುಳಿತೆನು; ನೀನೇಕೆ ಬಂದೆ?
ಸೌಮ್ಯ:-ನಾನು ಬರಲಿಲ್ಲ, ನಿನ್ನಲ್ಲಿರುವ ಆಕರ್ಷಣಾಯಂತ್ರವೇ ಎಳೆತಂದಿದೆ.
ರಮಾ:-(ನಿಟ್ಟುಸಿರಿಟ್ಟು) ಆಕರ್ಷಣಾಯಂತ್ರವು ನನ್ನಲ್ಲಿದ್ದರೆ, ನಾನು ಹೀಗೆ ಅಹಿತನಾಗಿ ತೋರುತ್ತಿರಲಿಲ್ಲ”
ಸೌಮ್ಯ:-ಕುಮಾರ ಕೋಪಿಸಬೇಡ, ಬೇವಿನ ಕಹಿಯನ್ನು ಹೋಗಲಾಡಿಸುವೆನೆ೦ಬ೦ತ, ವಿವೇಕಶೂನ್ಯರಾದ ಮೂರ್ಖರನ್ನು ಸನ್ಮಾರ್ಗಕ್ಕೆ ತರಬೇಕೆಂದು ಪ್ರಯತ್ನಿಸಿದರೆ ಸಾಧ್ಯವೇ?
ರವಾ:-ಆಯ್ಯ! ಕುಲಕ್ಕೆ ರಂಜನನೂ ಮಾತಾಪಿತೃಗಳ ಆನಂದಕ್ಕೆ ಉಕ್ಕಂದಸ್ವರೂಪನೂ ಆದವನೇ ಸತ್ಪುತ್ರನಲ್ಲ ವೆ ?
ಸೌಮ್ಯ:-ನಿಜ ! ಹಾಗೆ ಸತ್ಪುರುಷನಾಗಬೇಕೆಂಬುವವನು ಮೂರ್ಖರ ಸಹವಾಸಕ್ಕೆ ಹೋಗಬಾರದು.
ರಮಾ:-ಸನ್ಮಿತ್ರನೇ! ಸತ್ಯವೂ ಪಥ್ಯವೂ ಯಾರಿಗೂ ಎಂದಿಗೂ ವ್ಯಥೆಯನ್ನುಂಟು ಮಾಡುವುದಿಲ್ಲ. ಶೀಲವೂ ಸತ್ಯವೂ ನಮ್ಮಲ್ಲಿ ಸ್ಠಿರವಾಗಿದ್ದರೆ, ದುರ್ಜನರ ಕಿರುಕುಳದಿಂದ ನಮಗೆ ಕೀರ್ತಿಯೂ