೧೦೮ ರಾಜಾರಾಮಮೋಹನರಾಯರ ಜೀವಿತ ಚರಿತ್ರ ವರನ್ನು ಬೇಡಿ ತಂದ “ಫಿಜಿಕಲ್ ಹಿಸ್ಟರಿ ಆಫ್ ರ್ಮೆ” ಎಂಬ ಪುಸ್ತಕವನ್ನು ರಾಮಮೋಹನ ನಿಗೆ ಓದಿ ಕೊಡಲಿಕ್ಕಾಗಿ ಕೊಟ್ಟೆನು. ಸೆಪ್ಟೆಂಬರ್ 17ನೇ ಮಂಗಳವಾರ -ನನ್ನ ತಾಯಿಯು ರಾಮಮೋಹನನೊಂದಿಗೆ ಒಂದೆರಡು ದಿನಗಳ ತನಕ ಇರಬೇಕೆಂದು ಸ್ಟೀಪಲ್'ರ್ಟಗೊವಿಗೆ ಹೋದಳು. ಸೆಪ್ಟೆಂಬರ್ 19ನೇ ಗ.ರುವಾರ-ನಾನು ಕುದುರೆಯನ್ನು ಹತ್ತಿ ನನ್ನ ತಾಯಿಯ ನ್ಯೂ ಸ್ನೇಹಿತರನ್ನೂ ನೋಡಲಿಕ್ಕೆ ಸ್ಪೀಪಲ್'ರ್ಟಗೊವಿಗೆ ಹೊರಟೆನು, ರಾಜಾ ರಾಮ ಮೋಹನರಾಯನು ಜ್ವರದಿಂದ ಬಾಧೆಪಡುತ್ತಿದ್ದನು, ಆತನು ನನ್ನನ್ನು ನೋಡಿ ಬಹಳ ಸಂತೋಷಗೊಂಡನು. ನಾನು ಅವನಿಗೆ ಔಷಧವನ್ನು ಕೊಟ್ಟೆನು. ರಾತ್ರಿ 8 ಗಂಟೆಗಳ ಹೊತ್ತಿಗೆ ನನ್ನನ್ನು ಕರೆದೊಯ್ಯಲು ರಾಜಾ ರಾಮಮೋಹನರಾಯರ ಕಡೆಯಿಂದ ಗಾಡಿ ಬಂದಿತು. ನಾನು ಹೋಗಿ ನೋಡುವಲ್ಲಿ ಜ್ವರವಿನ್ನೂ ದೇಹವನ್ನು ಆಶ್ರಯಿಸಿದ್ದರೂ ಶರೀರ ಸ್ಥಿತಿ ಮಾತ್ರ ಮೊದಲಿಗಿಂತ ಸ್ವಲ್ಪ ಉತ್ತಮವಾಗಿದ್ದಿತು. ಗಾಜಾ ರಾಮಮೋಹನನನ್ನು ನೋಡಲಿಕ್ಕೆ ಬಂದ ಲಂಡ - ಸ್ನೇಹಿತನಾದ ಮಿಸ್ಟರ್' ಜಾಹೇ' (ಡೇವಿಡ'ಹೇರನ ಸಹೋ ದರನು) ಮತ್ತು ಅವನ ಮಗಳಾದ ಮಿಸ್ ಹೇರ್ ಇವರಿಬ್ಬರೂ ಅಲ್ಲಿಯೇ ಇದ್ದರು, ನಾನು ಅಲ್ಲಿಯೇ ಮಲಗಿದ್ದೆನು. ಸಪ್ಟಂಬರ್ 20ನೇ ಶುಕ್ರವಾರ -ರಾಜಾ ರಾಮಮೋಹನರಾಯನ ದೇಹಸ್ಥಿತಿಯು ಸ್ವಲ್ಪವೂ ನೆಟ್ಟಗಿರಲಿಲ್ಲ, ನಾನು 2 ಗಂಟೆಯ ವೇಳೆಗೆ ಅವರ ಗಾಡಿಯಿಂದಲೇ ಮನೆಗೆ ಬಂದನು. ರಾತ್ರಿಯ ಊಟಕ್ಕೆ ಮರಳಿ ಅಲ್ಲಿಗೇನೇ ಹೋದೆನು, ರಾಮಮೋಹನನಿಗೆ ತಲೆನೋವು ಹುಟ್ಟಿದ್ದು ಔಷಧದಿಂದ ಶಮನವಾಯಿತು, ಆಗ ಆತನು ಮಲಗಿದನು. ಆ ದರೂ ನಿದ್ರೆ ಹತ್ತಲಿಲ್ಲ. ರಾತ್ರಿ 11 ಗಂಟೆಗೇನೇ ಎಚ್ಚತ್ರನು. ಆಗ ಆತನ ಮೈ ತಣ್ಣ ಗಿತ್ತು. ತುಂಬ ಒಲಹೀನನಾಗಿ ಕಾಣುತ್ತಿದ್ದನು. ಉಷ್ಣದ್ರಾವಕದಿಂದ ಸ್ವಲ್ಪಮಟ್ಟಿಗೆ ಲಾಭ ಕಾಣಿಸಿತು, ಆದರೂ ತಾಪವು ಹೆಚ್ಚಾಗಿದ್ದಿತು. ಸ್ವಲ್ಪ ಹೊತ್ತು ನೆಲದಮೇಲೆ ಮಲಗುತ್ತ ಬಂದನು, ಹೇರ್ ಎಂಬುವರ ಮಗಳಾದ ಮಿಸ್ ಹೇರ್ ಎಂಬಾಕೆಯು ಹತ್ತಿರ ದಲ್ಲಿಯೇ ಕುಳಿತಿದ್ದು ಉಪಚರಿಸುತ್ತಿರಲಿಕ್ಕೆ ಅಂಗೀಕುಸಬೇಕೆಂದು ನಾನು ಪ್ರಾರ್ಥಿಸಿದೆನು ಆದರೆ ಇದು ಗೋವಾವಹವೆಂದು ಆತನು ಸಮ್ಮತಿಸದೆ ಹೋದನು, ನಮ್ಮ ದೇಶದಲ್ಲಿ ಹೀಗೆ ಪರಿಸರ ಮಾಡುವುದು ಸ್ವಲ್ಪವೂ ದೋಷಾವಹವಲ್ಲವೆಂದು ಮರಳ ನಾನು ಹಲವು ಬಗೆಗಳಿಂದ ಸಮ್ಮತಿ ಹೇಳಲು ಆತನು ಅದನ್ನೊಪ್ಪಿಕೊಂಡನು, ನಾನು ಆಗ ಮಿಸ್ ಹೇರ್ ಎಂಬಾಕೆಯನ್ನು ನಿದ್ರೆಯಿಂದ ಎಬ್ಬಿಸಿ ಕರೆದುಕೊಂಡು ಬಂದೆನು, ನನ್ನ ಶ್ರದ್ದೆಗೆ ಆತನು ತುಂಬ ಸಂತೋಷಿಸಿ, ನನ್ನನ್ನು ತನ್ನ ಹತ್ತಿರದಲ್ಲಿಯೇ ಮಲಗಿಸಿಕೊಂಡನು, ಆತನ ವಿಷ ಯದ ವಿಚಾರದಲ್ಲಿಯೇ ಆ ರಾತ್ರಿಯನ್ನೆಲ್ಲಾ ಕಳೆದೆನು, ಬೆಳಗಾಗುವವರೆಗೆ ಸ್ವಲ್ಪವೂ ಗುಣ ತೋರದಿದ್ದರೆ ಡಾಕ್ಟರ' ಪ್ರಬೆಟ್ ಎಂಬವರನ್ನು ಕರೆದು ತರುವೆನೆಂದು ನಮ್ಮ ತಾ ಯಿಯೊಂದಿಗೆ ಹೇಳಿದೆನು.
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.