ರಾಜಾ ರಾಮಮೋಹನರಾಯರೆ ಜೀವಿತ ಚ೦೨. (OVr ಸೆಪ್ಟೆಂಬರ್ 21 ನೇ ಶನಿವಾರ -ವಿಸ್ ಹೇರಳು ರಾಜಾ ರಾಮಮೋಹನನ ಬಳಿ ಯಲ್ಲಿ ಕುಳಿತುಕೊಂಡಿದ್ದಳು. ಆಕೆಯು ಹಿಂದಿನ ರಾತ್ರಿ ಆಗಾಗ್ಗೆ : ಈಗ ಹೇಗಿ 3, ಈಗ ಹೇಗಿದೆ, ಎಂದು ಕೇಳುತ್ತಲೇ ಇದ್ದಳು. ಈದಿನ ಪ್ರಾತಃಕಾಲದಲ್ಲಿ ನಾನು ಆತನ ನಾಡಿ ಗಳನ್ನು ಪರೀಕ್ಷಿಸಿದ್ದರಲ್ಲಿ ಸ್ವಲ್ಪ ಉತ್ತಮವಾಗಿರುವಂತೆ ಕಾಣಬಂದಿತು, ಆದರೂ ಆತನು ಮಾತನಾಡಲಾರದೆ ಇದ್ದನು. ನಾನು ಮಿಸ್ ಕೇಡಲೆ' ಮೊದಲಾದವರ ಅಭಿಪ್ರಾಯದಂತೆ ಡಾಕ್ಟರ್ ಪ್ರಿಬೆಟ'೯ ಎಂಬವರನ್ನು ಕರೆದು ತರಲು ಬ್ರಿಸ್ಟಲ್ಲಿಗೆ ಹೊರಟು, ಎರಡುಘಂಟೆಗಳ ತನಕ ಕೆಲವರು ರೋಗಿಗಳನ್ನು ಪರೀಕ್ಷಿಸಿ, ಸಾಯಂಕಾಲ ಐದು ಗಂಟೆಗಳ ಭೋಜನವೇಳೆಗೆ ಪ್ರೀಬೆರ್ಟರನ್ನು ಕರೆದುಕೊಂಡು ಸ್ಟೀಪಲ್ರ್ಟಗೋವಿಗೆ ಬಂದು ಸೇರಿದೆನು, ನಾನು ಅದುವರೆಗೆ ಈ ವಿಷಯವನ್ನು ರಾಜಾ ರಾಮಮೋಹನರೊಂದಿಗೆ ಹೇಳಲಿಲ್ಲ, ಆಗಲಾತನು ತುಂಬ ಸಂತೋಪಿಸಿ ನನ್ನನ್ನು ಹತ್ತಿರಕ್ಕೆ ಕರೆದು, ಡಾಕ್ಟರ್ ಪ್ರೀಪೆರ್ಟರ ಮುಖವು ತುಂಬ ಕಳೆಗೊಂಡಿದೆಯಲ್ಲವೇ ಎಂದನು. ಹೇರರೂ ಸೀಬೆರ್ಟರ ಆಗಮನಕ್ಕಾಗಿ ಸಂತೋಷಪ ಟೈರು, ರಾತ್ರಿ 11 ಗಂಟೆ ಹೊತ್ತಿಗೆ ನಾನು ಸ್ವಲ್ಪ ನಿದ್ರಿಸಿದೆನು, ಮಿಸ್ ಹೇರ್ ಎಂಬಾ ಕೆಯು ಹತ್ತಿರದಲ್ಲಿ ಕುಳಿತುಕೊಂಡೇ ಇದ್ದಳು. - ಸೆಪ್ಟೆಂಬರ್ 28 ನೆ ಭಾನುವಾರ ಬೆಳಗಾಗುವ ಹೊತ್ತಿಗೆ ರಾಮಮೋಹನರಾಯನು ಬಹಳ ಬಳಲಿದ್ದನು, ಆದರೆ ಆಮೇಲೆ ಆತನಿಗೆ ಸ್ವಲ್ಪ ನಿದ್ರೆ ಹತ್ತಿತು. ಅದಾದರೋ ಕನವರಿಕೆಯಿಂದ ಕೂಡಿದ ನಿದ್ರೆಯಾಗಿತ್ತು, ಹನ್ನೊಂದುಗಂಟೆ ಮೂವತ್ತು ನಿಮಿಷಗಳ ಹೊತ್ತಿಗೆ ಪ್ರೀಬೆರ್ಟ್ ಬಂದನು, ನಾನು ಆತನೊಂದಿಗೆ ಒಳಕ್ಕೆ ಹೋಗಿ ಮೂರುಗಂಟಿ ಹೊತ್ತಿಗೆ ಈಚೆಗೆ ಬಂದೆನು, ಹೇರರವರು ಕೂಡ ಹೊರಕ್ಕೆ ಬಂದರು, ಸಂಜೆಯವರೆಗೆ ರಾಮಮೋಹನರಾಯನ ಸ್ಥಿತಿಯು ಸ್ವಲ್ಪ ಸುಮುಖವಾಗಿ ಕಾಣಬಂದುದರಿಂದ ನನಗೆ ಸ್ವಲ್ಪ ನಂಬುಗೆಯುಂಟಾಯಿತು. ಆಗಲಾತನು “ ನೀವೂ, ಪ್ರೀಬೆರ್ಟರ, ಹೇರರೂ ನನ್ನ ಬಳಿಯ ಲ್ಲಿದ್ದರೆ ಮೃತ್ಯುವು ಬಂದು ತನ್ನ ಕೆಲಸವನ್ನು ನೆರವೇರಿಸಿಕೊಂಡು ಹೋದರೂ ನನಗೆ ಸಮ ತವಾಗಿದೆ, ಈ ಬ್ರಿಸ್ಟಲಿನಲ್ಲಿ ನನ್ನ ದೇಹರಕ್ಷಣೆಗಾಗಿ ಮಾಡಬೇಕಾದ ಉಪಚಾರಗಳಲ್ಲಿ ಯಾವುದೊಂದು ಕೊರತೆಯೂ ಉಂಟಾಗಿಲ್ಲವೆಂದು ನಾನು ಒಪ್ಪಿಕೊಳ್ಳುತ್ತೇನೆ ?” ಎಂದು ನನ್ನೊಂದಿಗೆ ಹೇಳಿದನು, ನನ್ನ ಹೆಂಡತಿಯ, ನನ್ನ ತಾಯಿಯ ಮಿಸ್ ಕೇಸಲ್ಲಳ ಬಂಡಿ ಯನ್ನು ಹತ್ತಿ ಸಭೆಗೆ ಹೊರಟುಹೋದರು. ಮಿಸ್ ಕೇರಳು ರಾಮಮೋಹನಸಿಗೆ ಬಹು ಜಾಗ್ರತೆಯಿಂದ ಉಪಚಾರಗಳನ್ನು ಮಾಡುತ್ತಲಿದ್ದಾಳೆ ; ಆಕೆಯು ಔಷಧಗಳನ್ನು ಕೊಡ ಬೇಕಾದ ವೇಳೆಯಲ್ಲಿ ತಪ್ಪದೆ ಕೊಡುತ್ತಾ ಹಲವು ಬಗೆಗಳಿಂದ ರೋಗಿಯನ್ನು ಕಾಪಾಡುತ್ತ ಲಿರುವಳು, ನಾನು ಸುದಾ ಅಷ್ಟರ ಮಟ್ಟಿಗೆ ಮಾಡಲಾರೆನು, ರಾಮಮೋಹನನು ಕೂಡ ಆಕೆಯನ್ನು ತನ್ನ ಮಗಳಂತೆಯೇ ಪ್ರೀತಿಸುತ್ತಿರುವನು. ಸೆಂಬರ್ 23 ನೆ ಸೋಮವಾರ-ನಾನು ಐದು ಗಂಟೆಗಳಿಗಿಂತ ಮುಂಚಿತವಾ ಗಿಯೇ ಎಸ್ಪತ್ರೆನು, ರಾತ್ರಿಯಲ್ಲೆಲ್ಲ ರಾಮಮೋಹನನು ತುಂಬ ತಾಪದಲ್ಲಿದ್ದನು, ಆತನು
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.