ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ሰስ ಹಾಸಿಗೆ ಹಾಸಲ್ಪಟ್ಟಿದ್ದರೂ ಹೊರಳಲಾರದೆ ಇದ್ದನು, ಆದರೂ ಒಂದೊಂದುಸಾರಿ ಹೀನ ಸ್ವರದಿಂದ ಮಾತನಾಡುತ್ತಲಿದ್ದನು, ಸೆಪ್ಟಂಬರ 26 ನೇ ಗುರುವಾರ-ಕಳೆದರಾತ್ರಿ ಬಹಳ ಹೊತ್ತಿನ ತನಕ ಹೇರರ ವರು ಆತನ ಬಳಿಯಲ್ಲಿಯೇ ಎಚ್ಚೆತ್ತು ಕುಳಿತಿದ್ದರು ಆತನು ನಿನ್ನಿನಂತೆಯೇ ಬೆಳಗಾಗ ಲಿಕ್ಕೆ ಮುಂಚೆ 3-4 ಗಂಟೆಗಳ ಮಧ್ಯದಲ್ಲಿ ನನ್ನ ಬಳಿಗೆ ಬಂದು ರಾಮಮೋಹನನ ನಾಡಿ ಯು ಅಷ್ಟಷ್ಟ ಕೈ ಬಲಹೀನವಾಗುತ್ತಲಿದೆಯೆಂತಲೂ, ರಾತ್ರಿಯೆಲ್ಲವೂ ನಿದ್ದೆಯಿಲ್ಲದೆ ತುಂಬ ಬಾಧೆಪಡುತ್ತಲಿದ್ದನೆಂತಲೂ ಚಿಂತೆಯಿಂದ ಹೇಳಿದನು, ಡಾಕ್ಟರ' ಕೀತ್೯ ಹನ್ನೊಂದು ಗಂಟೆಯ ವೇಳೆಗೆ ಬಂದನು, ಆಗ ಮಿಸ್ ಹೇರಳು ನನ್ನನ್ನು ಒಳಕ್ಕೆ ಕರೆದಳು, ನೋ ಡುವಲ್ಲಿ ರೋಗಿಗೆ ನಾಲಿಗೆ ಎಳೆದುಕೊಂಡುಹೋಗಿ ವಕ್ರವಾಗಿದ್ದಿತು. ಆಗ ತಲೆಯಮೇಲಣ ಕೂದಲುಗಳನ್ನೆಲ್ಲಾ ಕತ್ತರಿಸಿ ನೀರುಹಾಕಿಸಿದ್ದರಿಂದ ತಾಪವು ಶಾಂತವಾಯಿತು, ಈ ರಾ ತ್ರಿಗೆ ಬರ್ನಾರ್ಡ್‌ ಎಂಬ ವೈದ್ಯನನ್ನು ನೋಡಬೇಕೆಂದು ನಿಶ್ಚಯಿಸಿದೆವು. ಮಧ್ಯಾಹ್ನದ ಮೇಲೆ ಆತನ ಮೈಯಲ್ಲಿ ಉಷ್ಣವು ತುಂಬ ಹೆಚ್ಚಿ ನಾ.ತಿಯು ಬಹುವೇಗವಾಗಿ ಓಡುತ್ತಲಿ ದ್ವಿತು, ಸಾಯಂಕಾಲವಾದ ಕೂಡಲೇ ಮರಳ ತಾಸವೂ ದಾಹವೂ ಆರಂಭಿಸಿದವು. ಇಷ್ಟರಮೇಲೆ ತುಂಬ ಕಷ್ಟದಿಂದ ಸ್ವಲ್ಪ ಆಹಾರವನ್ನು ಆತನ ಗಂಟಲಲ್ಲಿ ಹೊಯ್ದೆವು. ಉದಯದಲ್ಲಿ ನನ್ನನ್ನು ನೋಡಿ ಕಣ್ಣುಗಳಿಂದ ತನ್ನ ಕೃತಜ್ಞತೆಯನ್ನು ತೋರ್ಪಡಿಸಿದನು. ತರುವಾಯ ಆತನಿಗೆ ಜ್ಞಾನವೇ ಇರಲ್ಲ, ಡಾಕ್ಟರ್ ಪ್ರೀಬರ್ಟ್, ಡಾಕ್ಟರ್ ಕೀರ್ತ್ ಇವರು ರೋಗಿಯನ್ನು ಅಂತ್ಯಗೆಸೆಯಲ್ಲಿಯೇ ಬಿಟ್ಟು ಹೊರಟು ಹೋದರು, ಇದರಿಂದಲೇ ಬರ್ನಾರ್ಡನು ಕೂಡ ಬಾರದೆಹೋದನು, ಹನ್ನೆರಡುಗಂಟೆಯ ರಾತ್ರಿಯ ತನಕ ನಾವು ಯಾರೂ ನಿದ್ದೆ ಮಾಡಲೇ ಇಲ್ಲ. ಮಿಸ್‌ ಕೇಸಲ್ಲಳು ಬಹಳ ಹೊತ್ತಿನವರೆಗೆ ಅಲ್ಲಿಯೇ ಕಾದುಕೊಂಡಿದ್ದಳು. ಮಿಸ್ ಕ್ಯಾಸಲ್ ಸುದಾ ಆಗಾಗ್ಗೆ ಹೋಗಿ ನೋಡಿ ಬರುತ್ತಲಿದ್ದ ಳು, ಮಿಸ' ಹೇರ್ಮಿಸ್ ರ್ಚಾ ಹೇರ್, ರಾಜಾರಾಂ-ಇವರು ರೋಗಿಯ ಕೋಣೆ ಯಿಂದ ಹೊರಕ್ಕೆ ಬಾರದೆ ಅಲ್ಲಿಯೇ ಇದ್ದರು. ನಮ್ಮ ತಾಯಿಯು ಸುದಾ ಹಲವು ಬಾರಿ ರೋಗಿಯನ್ನು ನೋಡಿ ಬರುತ್ತಿದ್ದಳು. ಸೆಪ್ಟಂಬರ್ 27ನೆ ಶುಕ್ರವಾರ--ರಾಮಮೋಹನನ ಸ್ಥಿತಿಯು ಪ್ರತಿನಿಮಿಷದಲ್ಲಿಯ ಕೆಡುತ್ತಲೇ ಇದ್ದಿತು, ಆತನ ಉಸಿರು ಒಂದುಸಾರಿ ತ್ವರಿತವಾಗಿಯೂ, ಮತ್ತೊಂದು ಸಾರಿ ಸಾಧಾರಣವಾಗಿಯೂ ಆಡುತ್ತಲಿದ್ದಿತು, ಸತ್ತು ಹೋಗುವುದಕ್ಕೆ ಕೆಲವು ಗಂಟೆಗಳ ಮುಂಚೆ ಬಲಗೈಯನ್ನು ಹೆಚ್ಚಾಗಿಯೂ, ಎಡಗೈಯನ್ನು ಕಡಿಮೆಯಾಗಿಯ ಅಲ್ಲಾಡಿಸುತ್ತಿದ್ದನು. ಆಗ ಬೆಳದಿಂಗಳು ಮನೋಹರವಾಗಿ ಹೊಳೆಯುತ್ತಿದ್ದಿತು, ಮಿಸ್‌ ಹೇರ್‌, ಮಿಸ್ ಕೇಡಲ್ ಮತ್ತು ನಾನು ಕಿಟಕಿಯ ಮೂಲಕ ಹೊರಗಡೆ ನೋಡು ವಲ್ಲಿ ಅರ್ಧರಾತ್ರಿಯಾಗಿ ನಿಶ್ಯಬ್ದವಾ ಗಿದ್ದಿತು. ಇತ್ತ ಕಡೆ ಈ ಅಸಾಧಾರಣ ಪುರುಷನು ಮರಣಾವಸ್ಥೆಯಲ್ಲಿ ವೇದನೆ ಹೊಂದುತ್ತಲಿ ದನು, ಆಗಿನ ಸ್ಥಿತಿಯನ್ನು ನಾನು ಎಂದಿಗೂ ಮರೆಯಲಾರೆನು, ಮಿಸ್‌ ಹೇರಳು ಆಗ