ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಿ೧೨ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ. ನಿರಾಶೆ ಹೊಂದಿ ಧೈರ್ಯದಿಂದ ರಾಮಮೋಹನನಿಗೆ ಪರಿಹಾರ ಮಾಡುತ್ತಲೇ ಇದ್ದಳು. ಬಾಲ ನಾದ ರಾಜಾರಾಮನು ರಾಮಮೋಹನನ ಕೈಯನ್ನು ಆತುಕೊಂಡನು. ನನ್ನಯ ಉದ ಯದಿಂದಲೂ ಆತನಿಗೆ ಈ ಲೋಕದ ಸ್ಮರಣೆಯೇ ಇಲ್ಲವೆಂದು ತಿಳಿಯುವೆನು. ರಾತ್ರಿ ಒಂದೂವರೆಗಂಟೆಗೆ ಆ ಮಹನೀಯನ ಪ್ರಾಣಗಳು ಹೊರಡುವುದಕಾರಂಭಿಸಿದುವು ಆಗ ಮಿಸ್ಟರ್‌ ಹೇರರು ನನ್ನ ಸಂಗಡ ಇನ್ನು ಅಂತ್ಯವು ಎಂದು ಹೇಳಿದರು, ಆ ವೇಳೆಯಲ್ಲಿ ಮಿಸ್ಟರ್‌ ಹೇರ್, ರಾಜಾರಾಂ, ಮಿಸ್ ಕೇಡಲ್, ಮಿಸ್‌ ಹೇರ್‌, ನನ್ನ ತಾಯಿ, ವಿಸ್ ಕೇಸಲ್‌, ರಾಂಕರಿ, ರಾಂರತ್ನ ; ನಾನು, ಇನ್ನಿಬ್ಬರು ಸೇವಕರು ಅಲ್ಲಿ ಇದ್ದೆವು. ತರುವಾಯ 2 ಗಂಟೆ 25 ನಿಮಿಷಗಳಿಗೆ ಆತನ ಪವಿತ್ರಾತ್ಮವು ಹೊರಟುಹೋಯಿತು ಪ್ರಾಣಗಳು ಹೋ ಗುವುದಕ್ಕೆ ಸ್ವಲ್ಪ ಹೊತ್ತಿನಮುಂಚೆ ಹೇರರವರು ಬೆಹ್ಮಣನಾದ ರಾಮರತ್ನನ ಸಂಗಡ ಬ್ರಾಹ್ಮಣರಲ್ಲಿ ಮರಣಕಾಲದಲ್ಲಿ ಆಚರಿಸತಕ್ಕ ಕೃತ್ಯಗಳು ಯಾವುವಾದರೂ ಇದ್ದಲ್ಲಿ ಅವುಗ ಳನ್ನು ಮಾಡತಕ್ಕದ್ದು, ಎಂದು ಹೇಳಿದರು. ಆತನು ಹಿಂದೂಗೇಶ ಭಾಷೆಯಲ್ಲಿ ಯಾವುದನ್ನೂ ಪ್ರಾರ್ಥನೆ ಮಾಡಿದನು. ಸ್ತ್ರೀಯರೆಲ್ಲರೂ ತುಂಬ ಚಿಂತೆಯಿಂದ ಹೊರಕ್ಕೆ ಹೊರಟುಹೋದ ಮೇಲೆ ನಾವೆಲ್ಲರೂ ಅಲ್ಲಿಯೇ ಇದ್ದೆವು. ಆದರೆ ದುಃಖದಿಂದ ಒಬ್ಬರಿಗೂ ನಿದ್ರೆ ಹತ್ತಲಿಲ್ಲ. ಮರುದಿನ ಇಟಲಿಗೇಶದವನಾದ ಒಬ್ಬ ಚಿತ್ರಗಾರನಿಂದ ಆತನ ಪ್ರತಿಬಿಂಬವನ್ನು ತೆಗೆಸಿದರು. ಹೇರರವರು ಬ್ರಿಸ್ಟಲ್ಲಿಗೆ ಹೋಗಿ ರಾಮ ಮೋಹನನ ದೇಹವನ್ನು ನಾಳೆದಿನ ಪರೀಕ್ಷಿಸಬೇಕೆಂದು ಏರ್ಪಾಡುಮಾಡಿಕೊಂಡರು. ಬೆಳಗಾಗುವುದಕ್ಕೆ ಮುಂಚೆಯೇ ಡಾಕ್ಟರ್ ಕಾರ್ಪೆಂಟರು ನಮ್ಮ ಬಳಿಗೆ ಬಂದರು. ನಾವೆಲ್ಲರೂ ಆ ದಿನ ಬಹಳ ಹೊತ್ತಿನ ತನಕ ಶವದ ಬಳಿಯಲ್ಲಿಯೇ ಕುಳಿತುಕೊಂಡು ಮಾತನಾಡಲಿಕ್ಕೆ ವು. ಈ ವಿಧವಾಗಿ ಈ ಮಹಾತ್ಮನ ಪವಿತ್ರ ಜೀವಿತವು ಸಮಾಪ್ತವಾಯಿತು. « ಅಗ ತ್ಯವಾದ ಕಾಲದಲ್ಲಿ ಜನ್ನಿಸಿ, ಅಗತ್ಯವಾದ ಕಾಲದಲ್ಲಿಯೇ ಈ ಲೋಕದಿಂದ ದಾಟಿ ಹೋದ ವನೇ ಮಹಾತ್ಮನು ಎಂದು ಗೋಮೇಧೀ ಎಂಬ ಮಹಾಕವಿಯು ಹೇಳಿದಂತೆ, ರಾಮ ಮೋಹನನು ಕೂಡ ಹಾಗೆಯೇ ತನ್ನ ಜೀವಿತಕ್ಕಾಗಿ ಏರ್ಪಟ್ಟಿದ್ದ ಕಾಕ್ಯಗಳನ್ನು ತಾನು ತೋರಿದ ರೀತಿಯಲ್ಲಿ ನೆರವೇರಿಸಿ ಯುಕ್ತವಾದ ಕಾಲದಲ್ಲಿ ಹೊರಟುಹೋದನು, ಆತನು ಅಸ್ವಸ್ಥನಾಗಿದ್ದಾಗ ಯಾರ ಸಂಗಡಲಾಗಲಿ ವಿಶೇಷವಾಗಿ ಮಾತನಾಡದೆ ಹೋದರೂ ತನ್ನಲ್ಲಿ ತಾನೇ ಯಾವುದನ್ನೂ ಪ್ರಾರ್ಥನೆ ಮಾಡುತ್ತಲಿದ್ದಂತೆ ನಿಶ್ಚಯವಾಗಿ ಕಾಣಬರುತ್ತಲಿ ನು, ಒಂದು ಸಾರಿ ಆತನು ರಾಜಾರಾಮ ಮತ್ತು ಸುತ್ತಲೂ ಇದ್ದವರ ಸಂಗಡ ನನ್ನ ಕೆಲಸ ಮುಗಿಯಿತು. ಇನ್ನು ನಾನು ಜೀವಿಸೆನು ' ಎಂದು ಹೇಳಿದನು, ಮತ್ತೊಂದು ವೇಳೆ ಕೇರರವರನ್ನು ನೋಡಿ ನನಗೆ ಯಾವ ವಿಧವಾದ ಕೊರತೆಯ ಉಂಟಾಗದಂತೆ ನಡೆ ಯಿಸಿದ ನಿಮ್ಮ ಕುಟುಂಬಕ್ಕೆ ಸ್ವಲ್ಪಮಟ್ಟಿಗೆ ತೊಂದರೆಯುಂಟಾಗಿರಬಹುದು, ಆದರೂ ನನಗೆ ಅನೇಕ ವಿಧವಾಗಿ ಸಹಾಯಮಾಡಿದ ನಿಮಗೂ, ನನಗಾಗಿ ಔಷಧವಿಷಯದಲ್ಲಿ ಶ್ರಮತೆಗೆದು ಕೊಂಡ ದೊಡ್ಡ ಮನುಷ್ಯರಿಗೂ, ಇಲ್ಲಿ ನನಗೆ ಹಲವು ಬಗೆಯಿಂದ ಸಹಾಯ ಮಾಡಿದ ಕಾರ್ಸೆ೦