ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೩ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಮುಂತಾದವುಗಳನ್ನು ನಿಲ್ಲಿಸಿಬಿಡುವುದು ಮೊದಲಾದ ದೈವಿಕಶಕ್ತಿಯನ್ನೂ ಮನುಷ್ಯನನ್ನಾ ತಂತ್ರವನ್ನೂ ತೋರಪಡಿಸುವ ಅನೇಕ ಶ್ರೇಷ್ಠ ಕಾಕ್ಯಗಳನ್ನೂ ಆತನ ಸ್ವದೇಸ್ವರು ತುಂಬ ಕೃತಟ ತೆಯಿಂದ ಸ್ಮರಿಸುತ್ತಿರುವರು, ಈ ಗೋಪುರವೂ ಆತನ ಸಂತತಿಯ ಜತೆ ಯಲ್ಲಿ ಆ ಮಹಾತ್ಮನನ್ನು ಕ.ರಿತ ಘನತೆಗೆ ಜ್ಞಾಪಕಕಿಹ್ನೆಯಾಗಿ ಕಟ್ಟಲ್ಪಟ್ಟಿರುವುದು. ಈತನು ಬಂಗಾಳಾದೇಶದ ರಾಧಾ ನಗರದಲ್ಲಿ 1774 ನೆಯ ಸಂವತ್ಸರದಲ್ಲಿ ಹುಟ್ಟಿ 1833 ನೆಯ ಸೆಪ್ಟಂಬರು 27 ನೆಯ ದಿನ ಬ್ರಿಸ್ಟಲ್ ನಗರದಲ್ಲಿ ಮೃಹೊಂದಿದನು. ವಚನರಚನಾ ಕೌಶಲ್ಯವುಳ್ಳ ಬಾಬೂ ಅಕ್ಷಯಕುಮಾರದತನಿಂದ ಬರೆಯ ಲ್ಪಟ್ಟ ವ್ಯಾಸದಲ್ಲಿನ ಕೆಲವು ವಾಕ್ಯಗಳನ್ನು ಪಾಲಕರಿಗೆ ನಿವೇದಿಸಿ ಈ ಪ್ರಕರಣವನ್ನು ಮುಗಿಸುವೆನು. 'ಹಾ ! ರಾಜಾರಾಮ ಮೋಹನರಾಯ ! ಆಗ ನಿನ್ನ ಸುಜ್ಞಾನಸೂ‌ನ ಪ್ರಭಾವಿಭ ವವು ದೇಶವನ್ನು ಆವರಿಸಿದ್ದ ಅಜ್ಞಾನಮೇಘವೆಂಬ ಕತ್ತಲೆಯನ್ನು ದಿಕ್ಕು ಪಾಲಾಗಿ ಓಡಿಸಿ ದಿವ್ಯವಾದ ತೇಜಃಪುಂಜವನ್ನು ಪ್ರಸಾದಿಸಿತು, ಅದರ ಸಹಾಯದಿಂದ ಈ ದೇಶದಲ್ಲಿ ಅಕಾಲದಲ್ಲಿ ಪ್ರಬಲಗೊಂಡಿ ದುರಾಚಾರಗಳನ್ನೆಲ್ಲಿ ಹುಡುಕಿ ಹುಡುಕಿ ರೂಪವನ್ನ ಡಗಿಸಿತು. ಧರ್ಮಸಮನ್ವಿತವಾದ ನಿನ್ನ ಮೆದೆಯೆಂಬ ನಿರ್ಮಲಪ್ರಭಾಕರ ಬಿಂಬದ ದೆಸೆಯಿಂದ ಮೂರ್ಖಾರಣ್ಯಮಯವಾಗಿದ್ದ ಈ ಭೂಭಾಗಕ್ಕೆ ಸ್ವಚ್ಛಜ್ಞಾನರೂಪವಾದ ಕಾಂತಿಕಿರಣ ಪುಂಜಗಳು ಹೊರಟುಬಂದು ಜಾಜ್ವಲ್ಯಮಾನಗಳಾಗಿ ಪ್ರಕಾಶಿಸಿದುವು, ಪ್ರಕೃತಿ ತತ್ವವನ್ನು ಪರೀಕ್ಷಿಸಿ ನಿನ್ನಿಂದ ಮೊಳಗಿಸಲ್ಪಟ್ಟ ಭೇಲನಿನಾದವು ಈಗಲೂ ನಮ್ಮೆಲ್ಲರ ಕರ್ಣಪಟಗಳ ಹತ್ತಿರ ಮೊರೆಯುತ್ತಲಿದೆ ಆ ಮಹತ್ತರವಾದ ಶಬ್ದವು ಪ್ರತಿಧ್ವನಿಕೊಡುತ್ತಾ ಈ ದೇಶ ದಲ್ಲಿ ನಿರಂತರ ವೂ ಜಯವನ್ನು ಹೊಂದತ್ತಾ ಬರುತ್ತಲಿದೆ. ಸ್ವದೇಶವಿದೇಶಗಳಲ್ಲಿಯ ಮೂರ್ಖಾಚಾರಗಳೆಂಬ ಶತ್ರುಸಮೂಹಗಳನ್ನು ನಿನ್ನ ಸುಜ್ಞಾನವೆಂಬ ಆಯುಧವು ತುಂಡು ತುಂಡಾಗಿ ಕತ್ತರಿಸಿ ಹಾಕಿತು, ನಿನಗೆ 'ರಾಜಾ' ಎಂಬ ಬಿರದು ಇರುವುದು, ಆದರೆ ಈ ನಶ್ವರ ಪ್ರಪಂಚಕ್ಕೆ ನೀನು ರಾಜನಲ್ಲವಾದರೂ ಪ್ರತಿಯೊಬ್ಬ ಜ್ಞಾನಶೀಲನ ಹೃದಯದಲ್ಲಿ ಯ, ನಿನ್ನ ಸಂಬಂಧವಾದ ಉತ್ತಷ್ಟಪ್ರಭುತ್ವವು ಸ್ಥಾಪಿತವಾಗಿರುವುದರಿಂದಲೂ, ಈಚೀ ಚಿಗೆ ಬುದ್ಧಿವಂತರಾದ ವಿದ್ಯಾ ಧಿಕರೆಲ್ಲರೂ ನಿನ್ನ ತಲೆಯ ಮೇಲೆ ರಾಜಕಿರೀಟವನ್ನು ಇಟ್ಟು ನಿನ್ನ ಜಯಧ್ವನಿಗಳನ್ನು ಕೋಲಾಹಲವಾಗಿ ಪ್ರಕಟಿಸುತ್ತಲಿರುವುದರಿಂದಲೂ, ಬಹುಕಾಲ ದಿಂದ ಹಿಂದೂಜನರ ಹೃದಯಸೇವೆಗಳಲ್ಲಿ ರಾಜ್ಯವನ್ನಾಳುತ್ತಿರುವವರು ನಿನ್ನಿಂದ ಪರಾಜಿತ ರಾಗಿರುವುದರಿಂದಲೂ, ನೀನು ರಾಜಾಧಿರಾಜನಾಗಿದ್ದೀಯೆ, ನಿನ್ನ ವಿಜಯಧ್ವಜಪತಾಕೆಗಳು ಅವರ ರಾಜ್ಯಗಳಲ್ಲಿಯೇ ಪ್ರಕಾಶಿಸುತ್ತಲಿದ್ದರೂ ಪರಿಪೂರ್ಣ ವಿಜೃಂರ್ಭಣೆಗೆ ಇನ್ನೂ ಅವ ಕಾಶ ಸಾಲದೆ ಇದೆ, ಯಾವ ಹಿಂದೂ ಜನರು ಮೊಟ್ಟಮೊದಲು ನಿನ್ನನ್ನು ವಿರೋಧಿಯೆಂದು ತಿಳಿದಿದ್ದರೋ ಅಂಥವರ ಸಂತತಿಯವರೇ ನೀನು ದೇಶಕ್ಕೆಲ್ಲ ಸ್ನೇಹಿತನೆಂದು ಭಾವಿಸುತ್ತಲಿರು