ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಕೇಳಿದಕೂಡಲೇ ಉಂಟಾದ ದುಃಖವು ಇದುವರೆಗೆ ಎಂದೂ ಉಂತಾಗಿರಲಿಲ್ಲ, ಗ್ರಂಥ ರೂಪದಲ್ಲಿರುವ ಆತನ ಮಾತುಗಳನ್ನೋದುವಾಗ ಉಕ್ಕಿ ಉಕ್ಕಿ ಬರುತ್ತಿರುವ ದುಃಖಸಮು ದ್ರವನ್ನು ತಡೆಯಲಾರದೆ ಇದ್ದೇನೆ, ನನ್ನ ಪ್ರಾಣಮಿತ್ರನೊಬ್ಬನನ್ನು ಕಳೆದುಕೊಂಡೆ. ಹಿ೦ ದಿನಕಾಲದಲ್ಲಿಯಾಗಲಿ, ಈಗಲಾಗಲಿ ಆತನೊಂದಿಗೆ ಹೋಲಿಸಲ್ಪಡತಕ್ಕ ಮಹಸೀಯನೊ ಬೃನೂ ಇಲ್ಲವೆಂದು ನಾನು ನಂಬುತ್ತೇನೆ.' ಆದರೆ ವಿದೇಶೀಯರು ಇಷ್ಟು ವಿವಾದವನ್ನು ತೋರಪಡಿಸಿದರೂ ತನ್ನ ಘನಜೀವಿತ ವನ್ನೆಲ್ಲ ಯಾವದೇಶಕ್ಕಾಗಿ ಧಾರೆಯನ್ನೆರೆದನೋ ಆ ದೇಶಕ್ಕೆ ಆಗ ಇರುವೇ ಕಡಿದಷ್ಟು ಮಾತ್ರವಾದರೂ ಚಿಂತೆಯುಂಟಾಗದೆ ಹೋಯಿತು. ವಿದೇಶೀಯರಾದ ಪ್ರಜೆಗಳು ರಾಮ ಮೋಹನನನ್ನ ಗಲದುದಕ್ಕೆ ತಮ್ಮ ಆಸ್ತ ಬಂಧುವನ್ನು ಕಳೆದುಕೊಂಡಹಾಗೆ ದುಃಬಿಸಿದರು. ಆದರೆ ಸ್ವದೇಶದಲ್ಲಿ ಒಬ್ಬನಾದರೂ ಕಣ್ಣಿನಲ್ಲಿ ಒಂದು ತೊಟ್ಟು ನೀರನ್ನೂ ಸುರಿಸಲಿಲ್ಲ, ಹತ್ತು ವರುಷಗಳತನಕ ರಾಮಮೋಹನನ ಭೌತಿಕ ಶರೀರವು ನಿರ್ಮನುಷವಾದ ಆ ಸ್ಥಳ ದಲ್ಲಿಯೇ ಇದ್ದಿತು. ಆದರೆ 1843 ನೆಯ ಸಂವತ್ಸರದಲ್ಲಿ ಬಾಬೂ ದ್ವಾರಕಾನಾಥ ತಾಕೂ ರರವರು ಇಂಗ್ಲೆಂಡಿಗೆ ಹೋಗಿದ್ದಾಗ ತನ್ನ ಪ್ರಾಣಮಿತ್ರನು ಎಲ್ಲಿಯೋ ಒಂದು ಮೂಲೆ ಯಲ್ಲಿ ಅಡಗಿರಲು ಇಷ್ಟಪಡಗೆ, ಆತನ ದೇಹವನ್ನಿಟ್ಟಿದ್ದ ಪೆಟ್ಟಿಗೆಯನ್ನು ತೆಗಿಸಿಕೊಂಡು ಬಂದು, ಬ್ರಿಸ್ಟಲ್ಪಟ್ಟಣದ ಹತ್ತಿರ 'ಆರ್‌ನೂಜ್ ವೆಲ್' ಎಂಬ ಹೆಸರುಳ್ಳ ಸುಂದರಪುಷ್ಪ ಲತಾಸಮನ್ವಿತವಾದ ಉದ್ಯಾನವಾಟಿಕೆಯಲ್ಲಿ ಒಂದು ಸಮಾಧಿಯನ್ನು ಕಟ್ಟಿಸಿ ಅದರಲ್ಲಿ ಆ ಪೆಟ್ಟಿಗೆಯನ್ನು ಭದ್ರಪಡಿಸಿ ಅದರಮೇಲೆ ಹಿಂದೂಗೇಶಪದ್ಧತಿಯನ್ನನುಸರಿಸಿ ಒಂದು ಚಿಕ್ಕ ಭವನವನ್ನು ಕಟ್ಟಿಸಿದನು, 1372 ನೆಯ ಸಂವತ್ಸರದಲ್ಲಿ ಆತನ ಮಾತೃದೇಶಭಕ್ತಿಯನ್ನು ತಿಳಿದುಕೊಂಡ ಕೆಲವರು ಹಿಂದೂ ದೇಶೀಯರು ಅಲ್ಲಿಗೆ ಹೋಗಿದ್ದಾಗ ಅಲ್ಲಿ ಸ್ವಲ್ಪ ಶಿಥಿಲವಾ ಗಿದ್ದ ಆ ಭವನವನ್ನು ಅತಿ ದೃಢವಾಗಿರುವಂತೆ ಮಾಡಿಸಿ, ಅದರಮೇಲೆ ಒಂದು ಗೋಪುರ ವನ್ನು ಕಟ್ಟಿಸಿ ಆ ಸಮಾಧಿಯಮೇಲೆ ಇದರಡಿ ಬರದಿರುವಂತೆ ಒಂದು ಶಾಸನವನ್ನು ಕೆತ್ತಿಸಿ ಇಟ್ಟರು. (ಈ ಕಲ್ಲಿನ ಕೆಳಗೆ ಆದ್ವಿತೀಯನಾದ ಈಶ್ವರನಲ್ಲಿ ನಿಶ್ಚಲಚಿತ್ರವನ್ನೂ, ಸತ್ಯಭಾವ ವನ್ನೂ ಪಡೆದುಕೊಂಡಿದ್ದ ರಾಜಾ ರಾಮಮೋಹನರಾ ಯ ಬಹ ದೂರನ್ನು ಸಮಾಧಿ ಮಾಡಲ್ಪಟ್ಟಿರುವನು. ಈತನು ತನ್ನ ಜೀವಿತವನ್ನೆಲ್ಲ ಪರಿಶುದ್ಧವಾದ ಪ್ರೇಮದಿಂದ ಭಗವಂತನ ಭಕ್ತಿಗಾಗಿ ಯೇ ಅರ್ಪಿಸಿದನು, ಮತ್ತು ಸ್ವಾಭಾವಿಕವಾದ ಅದ್ಭುತ ಗ್ರಹಣಶಕ್ತಿಯಿಂದ ಅನೇಕ ಭಾಷೆ ಗಳಲ್ಲಿ ಸಂಪೂರ್ಣವಾದ ಪ್ರಜ್ಞೆಯನ್ನು ಸಂಪಾದಿಸಿ, ತನ್ನ ಬಾಲ್ಯದಲ್ಲಿಯೇ ತನ್ನ ಕಾಲದವರ ಲೆಲ್ಲ ಒಬ್ಬ ಪಂಡಿತಶ್ರೇಷ್ಠನೆಂದು ಪ್ರಖ್ಯಾತಿಯನ್ನು ಪಡೆದನು. ಹಿಂದೂದೇಶದ ಸಾಂಘಿಕ ವಿಷಯಗಳನ್ನು ಸಂಸ್ಕರಿಸುವಿಕೆ, ಆ ದೇಶೀಯರ ಪಕ್ಷ ವಾಗಿ ಪ್ರತಿನಿಧಿಯಾಗಿ ನಿಂತುಕೊಂಡು ಕೆಲಸಮಾಡುವಿಕೆ, ವಿಗ್ರಹಾರಾಧನೆ, ಸಹಗಮನ