ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಕೊಂಡಿದ್ದನು. ಇದು ಆತರಲ್ಲಿ ಕೆಲವು ದಿನಗಳ ತರುವಾಯ ನಡೆದ ಮಾರ್ಪಾಡಿಗೆ ಸಾಧ್ಯ ಶ್ಯವಾಗಿದೆ. ಆ ಕಾಲದಲ್ಲಿ ದೊಡ್ಡ ದೊಡ್ಡ ಪಟ್ಟಣಗಳೊಳಗೆ ಪಂಡಿತ ಪಾಠಶಾಲೆಗಳೆಂತಲೂ, ಮತ್ತಿಬುಗಳೆಂತಲೂ, ಎರಡು ತರದ ವಿದ್ಯಾಶಾಲೆಗಳಿದ್ದುವು. ರಾಮಮೋಹನನ ಸ್ವ ಗ್ರಾಮದಲ್ಲಿದ್ದಾಗ ನಿತ್ಯವೂ ಬಂಗಾಳಿ ಭಾಷೆಯನ್ನು ಕಲಿ ಯುವದಕ್ಕೆ ಅಲ್ಲಿನ ಗಾವತಿ ಸಾಲೆಗೆ ಹೋಗಿಬರುತ್ತಲೂ ಮನೆಯಲ್ಲಿದ್ದಾಗ ಫಾರಸಿ ಭಾಷೆಯನ್ನು ಅಭ್ಯಸಿಸುತ್ತಲೂ ಇದ್ದನು, ಆಕಾಲದಲ್ಲಿ ನಾರಸಿಯೇ ರಾಜಭಾಷೆಯಾಗಿದ್ದಿತು, ಸಯ್ಯಾರದ ಉದ್ಯೋಗವ ಇ ಪೇಕ್ಷಿಸುವರಿಗೆ ಅದು ಅವಶ್ಯಕವಾಗಿದ್ದುದರಿಂದ ಅದನ್ನು ಚೆನ್ನಾಗಿ ಕಲ್ಕು ಕೊಳ್ಳಲಿಕ್ಕೂ, ಅರಬ್ಬಿ ಭಾಷೆಯನ್ನಭ್ಯಸಿಸತೊಡಗಲಿಕ್ಕೂ, ಅವನ ಒಂಭತ್ತನೆಯ ವರುಷದಲ್ಲಿ ಅವನ ತಂದೆ ಯು ಪಾಟ್ನಾ ಪಟ್ಟಣಕ್ಕೆ ಕಳುಹಿಸಿದನು. ಈ ಬಾಲನು ಅಲ್ಲಿ ಎರಡು ಸಂವತ್ಸರಗಳಿದ್ದು ಖಗೋಳಶಾಸ್ತ್ರ, ಗಣಿತಶಾಸ್ತ್ರ, ಮೊದಲಾದ ಗ್ರಂಧಗಳನ್ನೂ, ಮಹಮ್ಮದೀಯರ ಮತ ಗ್ರಂಧಗಳನ್ನೂ ಕಲ್ಲನು. ಇದರಿಂದ ಅವನ ಕುಶಾಗ್ರಬುದ್ದಿಗೆ ಮತ್ತಷ್ಟು ಹದ ಕೊಟ್ಟಂತೆ ಆಯಿತು. ಇವನು ಆಗಾಗ್ಗೆ ಪಂಡಿತರಾದ ಮಲ್ವಿಗಳೊಡನೆ ಖುರಾನಿನ ವಿಷಯಗಳನ್ನು ಚರ್ಚಿಸುತ್ತಿದ್ದುದರಿಂದ ಈಶ್ವರನ ಅಸ್ತಿತ್ವವೂ, ನಿರ್ಗುಣೋಪಾಸನೆಯು ಬಲಪಟ್ಟು, ಅವನ ಜೀವವಿರುವ ತನಕ ಅದೇ ಅವನಿಗೆ ಆನಂದದಾಯಕವಾಗಿದ್ದಿತು, ತನಗೆ ವಿರಾಮ ದೊರೆತಾಗ ಹಾಫೀಜ್, ರೂಮಿ, ಸಾದಿ ಮೊದಲಾದ ಕವಿಗಳಿಂದ ರಚಿಸಲ್ಪಟ್ಟ ಗ್ರಂಧಗಳನ್ನೊದುತ್ತಾ, ಚರ್ಚೆಮಾಡುವಾಗ ಆ ಗ್ರಂಧಗಳ ಪ್ರಮಾಣಗಳನ್ನು ಉದಾಹರಿಸುತ್ತಾ ಇದ್ದನು. ಅವನ ಮತಸಂಬಂಧವಾದ ಬದಲಾವಣೆಗೆ ಇದೇ ಮುಖ್ಯ ಹೇತುವಾಗಿದ್ದಿತು. ಆತನು ಅರಬ್ಬಿ, ಫಾರಸಿ ಭಾಷೆಗಳನ್ನು ಕಲ್ಲು ತನ್ನ ಊರಿಗೆ ಹಿಂದಿರುಗಿ ಬಂದ ಮೇಲೆ ಹಿಂದೂ ಮತಾಂಶಗಳನ್ನು ಗ್ರಹಿಸಲಿಕ್ಕೂ ಸಂಸ್ಕೃತಭಾಷೆಯನ್ನು ಅಭಿವೃದ್ಧಿ ಪಡಿಸಿ) ಕೊಳ್ಳಲಿಕ್ಕೂ, ಅವನ ಹನ್ನೆರಡನೆಯ ವಯಸ್ಸಿನಲ್ಲಿ ರಾಮಕಾಂತನು ಅವನನ್ನು ಕಾಶಿಗೆ | ಕಳುಹಿದನು. ಅವನು ಬಹು ಸ್ವಲ್ಪ ಕಾಲದಲ್ಲಿಯೇ ಹಿ೦ದಶಾಸ್ತ್ರಗಳಲ್ಲಿ ಆಶ್ಚರ್ಯ ಜನಕವಾದ ಪ್ರಜ್ಞೆಯನ್ನು ಸಂಪಾದಿಸಿ, ಅನೇಕ ಮತಗ್ರಂಥಗಳನ್ನೋದಿದನು. ಸಂಸ್ಕೃತಭಾಷೆಯನ್ನು ಕಲ್ಲು ಸ್ವಸ್ಥಾನಕ್ಕೆ ಬಂದವೇಲೆ ರಾಮಮೋಹನನು ಮತ ವ್ಯಾಸಂಗದಲ್ಲಿ ಪ್ರವರ್ತಿಸಿ, ಯೋಚಿಸಿದಹಾಗೆಲ್ಲ ಅಭಿವೃದ್ಧಿ ಹೊಂದುತ್ತಲಿರುವ ತನ್ನ ವಿಶಾಲ ಜ್ಞಾನವನ್ನು ಪಯೋಗಪಡಿಸಿ, ಮೊದಲು ಮಹಮ್ಮದೀಯ ಮತಗ್ರಂಥಗಳಲ್ಲಿಯ ಆಸ್ತಿಕ ಎಷ ಯಗಳನ್ನೂ, ತರುವಾಯ ಹಿಂದೂಶಾಸ್ತ್ರಗಳಲ್ಲಿಯ ಬ್ರಹ್ಮ ಜ್ಞಾನವಿಷಯಗಳನ್ನೂ ಶೋ ಧಿಸಿ, ಕ್ರಮಕ್ರಮವಾಗಿ ಸನಾತನಸದ್ದತಿಯನ್ನು ಸಂಸ್ಕರಿಸಬೇಕೆಂಬ ಕೋರಿಕೆ ಯನ್ನು ಬಲ ಪಡಿಸಿದನು, ಇವನು ತನ್ನ ತಂದೆಯೊಂದಿಗೆ ಆಗಾಗ್ಗೆ ಈವಿಷಯಗಳನ್ನು ಚರ್ಚಿಸುತ್ತಾ ಸಂದರ್ಭಾನುಸಾರ ತಕ್ಕ ಪ್ರಮಾಣಗಳಿಂದ ತನ್ನ ಅಭಿಪ್ರಾಯಗಳೇ ಯುಕ್ತಿಯುಕ್ತವಾದುವು ಗಳೆಂದು ಸಾಧಿಸುತ್ತಾ ಇದ್ದನು. ರಾಮಕಾಂತರಾಯನು ತಾನು ಈ ಹುಡುಗನ ವಿದ್ಯಾ