ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ೬ ಭಿವೃದ್ಧಿಗಾಗಿ ಮಾಡಿದ ಪ್ರಯತ್ನಗಳೆಲ್ಲವೂ ಈಮೇರೆಗೆ ವಿಪರೀತವಾಗಿ ಪರಿಣಮಿಸಿದು ವೆಂದು ಬಹಳವಾಗಿ ಚಿಂತಿಸಿ, “ ನೀನು ಈ ನವೀನ ಮಾರ್ಗವನ್ನು ಬಿಡು ' ಎಂದು ಹಲವು ಸಾರಿ ಕಠಿನೋಕ್ತಿಗಳಿಂದ ಹೇಳಿದನು. ಆದರೂ ರಾಮಮೋಹನನು ಅದನ್ನೊ ಸ್ಪದೆ ಅದೇ ಕಾಲದಲ್ಲಿ ಅಂದರೆ ತನ್ನ ಹದಿನಾರನೆಯ ವಯಸ್ಸಿನಲ್ಲಿ 'ಹಿಂದುಗಳ ವಿಗ್ರಹಾರಾಧನೆ' ಎಂಬ ಹೆಸರಿನಿಂದ ಆರಾಧಕ ಪಕ್ಷದವರಿಗೆ ವಿರೋಧವಾದ ಅಭಿಪ್ರಾಯವನ್ನು ಕೊಡುವ ಸಣ್ಣ ಪುಸ್ತಕವನ್ನು ಬರೆದನು, ಈ ಗ್ರಂಧವು ಆಗಲೇ ಮುದ್ರಿಸಲ್ಪಡದಿದ್ದರೂ, ಅವನ ತಂದೆ ತಾಯಿಗಳಿಗೆ ಅವನಮೇಲೆ ಇದ್ದ ಪ್ರೇಮವನ್ನು ಮಾತ್ರ ಪೂರ್ಣವಾಗಿ ತೊಲಗಿಸಿಬಿಟ್ಟಿತು, ರಾಮಕಾಂತನು ಸಂಪೂರ್ಣಾನುಗ್ರಹಚಿತ್ರದಿಂದ ಆ ಬಾಲಕನಿಗೆ ಎಷ್ಟು ವಿಧದಲ್ಲಿ ಹೇಳಿದರೂ ತನ್ನ ಅಭಿಪ್ರಾಯವನ್ನು ಅವನು ಬದಲಾಯಿಸಿಕೊಳ್ಳದೆ ಹೋದುದರಿಂದ ಒಂದು ದಿನ ಈ ರಾಮಮೋಹನರಾಯನನ್ನು ಮನೆಯಿಂದ ಹೊರಡಿಸಿಬಿಟ್ಟನು, ಇದೇ ಇವನು ಬರೆದ ಗ್ರಂಥದ ಫಲವು. ಹಿರಿಯರಿಂದತಿರಸ್ಕೃತನಾಗಿ ಮನೆಯಿಂದ ಹೊರಡಿಸಲ್ಪಟ್ಟ ನಮ್ಮ ಕಥಾನಾಯ ಕನು ತನಗೆ ಹೀಗಾದುದಕ್ಕೆ ಸ್ವಲ್ಪವಾದರೂ ಚಿಂತಿಸದೆ, ದೇಶಾಟನ ಮಾಡಬೇಕೆಂಬ ಆಶೆ ಯಳ್ಳವನಾಗಿ, ಮೊದಲು ಹಿಂದೂ ದೇಶದಲ್ಲಿ ಪ್ರಸಿದ್ಧವಾದ ಪಟ್ಟಣಗಳಿಗೆ ಹೋಗಿ ಅಲ್ಲ ಮೈಯ ಮತರೀತಿಗಳನ್ನು ವಿವ ಶಿ೯ಸುತ್ತಾ, ಆಯಾ ದೇಶ ಭಾಷೆಗಳನ್ನು ಸಾಧ್ಯವಾದಮ ಟ್ವಿಗೆ ಗ್ರಹಿಸುತ್ತಾ, ನಾನಕ , ಕಬೀರ್', ದಾವೂದ್ ಮೊದಲಾದ ಮಹಾತ್ಮರ ಇತಿಹಾಸ ಗ್ರಂಥಗಳನ್ನು ಸಂಪಾದಿಸಿ, ವಿರಾಮವಾದಾಗ ಅವುಗಳನ್ನೋ ದುತ್ತಾ, ಕ್ರಮಕ್ರಮವಾಗಿ ಉತ್ತರ ಹಿಂದುಸ್ಥಾನವನ್ನತಿಕ್ರಮಿಸಿ, ಹಿಮಾಲಯ ಪರ್ವತ ಪಂಕ್ತಿಗೆ ಆಚೆ ಇರುವ ಟಿಬೆಟ್ ದೇಶಕ್ಕೆ ಹೋಗಿ ಸೇರಿದನು. ತತ್ತೂರ್ವದಲ್ಲಿಯೇ ಮತಸಂಪ್ರದಾಯಗಳನ್ನು ಸ್ವಲ್ಪಮಟ್ಟಿಗೆ ಓದಿದ್ದನಾದುದರಿಂದ ಆ ಜ್ಞಾನದಿಂದುಂಟಾದ ಬೌದ್ಧ ಮತ ವಿಮರ್ಶನಾಪೇಕ್ಷೆಯೇ ಇವನ ಪ್ರಯಾಣಕ್ಕೆ ಕಾರಣವೆಂದು ಹೇಳುವರು, ಅಹಾ ! ವಿದ್ಯೆಗಳು, ಸಭೆಗಳು, ವಾದಗಳು, ಉಪನ್ಯಾಸಗಳು, ಸಂಸ್ಕರಣಗಳು ಮುಂತಾದುವುಗಳ ಹೆಸರೇ ಇಲ್ಲದೆ, ನಾಲ್ಕು ದಿಕ್ಕುಗಳಲ್ಲಿಯೂ ಎತ್ತ ನೋಡಿದರೂ ಅತ್ತ ಜನರು ವಿಗ್ರಹಾರಾಧಕರಾಗಿ, ವಿಜ್ಞಾನ 'ತೇಜೋತೀನರಾಗಿದ್ದ ಆಕಾಲದಲ್ಲಿ ಸಂಸ್ಕರಣ ಗ್ರಂಥವೊಂದನ್ನು ಬರೆದು ಅದೇ ನೆವಕ್ಕಾಗಿ ಮನೆಯಿಂದ ಹೊರಡಿಸಲ್ಪಟ್ಟು, ಲೋಹಮಾರ್ಗ ಗಳಾಗಲಿ, ಪ್ರಯಾಣಕ್ಕೆ ಅನುಕೂಲವಾದ ರಸ್ತೆಗಳಾಗಲಿ ಇಲ್ಲದೆ ರಾಜ್ಯಾಂಗಕಲ್ಲೋಲ ಗಳಿ೦ದ ಕಳಗುಂದಿ ಏಳುನೂರುವರ್ಷ ಗಳಿಂದಲೂ ದಾಸ್ಯ ಸ್ಥಿತಿಯನ್ನನುಭವಿಸುತ್ಯ, ಸ್ವಾತಂ ತ್ರ ಎರಹಿತರಾದ ಜನಗಳಿಂದ ತುಂಬಿಯೂ, ಸುಲಿಗೆ, ಕಳ್ಳತನ, ದಂಗೆ ಮುಂತಾದುವುಗ ಳಿಂದ ಸದಾಕಾಲವೂ ಭಯಾವಹವಾಗಿ ಆ ಕಾಲದಲ್ಲಿ ಹದಿನಾರು ವರ್ಷದ ಹರೆಯದ ಈ ಹುಡುಗನು ಸ್ವರಾಷ್ಟ್ರವನ್ನು ತೊರೆದು, ಅಸಹಾಯನಾಗಿ ಟಿಬೆಟ'ದೇಶಕ್ಕೆ ಹೋಗುವಿ ಕೆ ಯು ಎಂತಹ ಸಾಹಸಬುದ್ದಿಯನ್ನು ತೋರಿಸುವುದೋ ವಾಚಕರೇ ಅದನ್ನು ಯೋಚಿಸ ತಕ್ಕುದು,