೧೨೪ - ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಗಳೆಲ್ಲವೂ ಇದ್ದುವಂತೆ. ಈ ವಿಷಯದಲ್ಲಿ ಈತನಿಗೆ ಉಂಟಾಗಿದ್ದ ಅನುಭವವು ಅಸದೃಶವಾ ಗಿತ್ತೆಂದು ಆನರಬಲ್ ಗುರುದಾಸ ಬಾನರ್ಜಿಯವರು ಶ್ಲಾಘಿಸಿರುವರು, ವ್ಯಾಪಾರದ ವಿಷಯಗಳಲ್ಲಿ ಈತನು ಅಧಿಕಪ್ರಜ್ಞೆಯುಳ್ಳವನಾಗಿದ್ದನು. ದ್ವಾರಕಾ ನಾಧ ಠಾಕೂರನಂತಹ ವಿದ್ಯಾವಂತನು ಸುದಾ ತನ್ನ ವ್ಯವಹಾರಗಳನ್ನು ಕುರಿತು ಈತನ ಸಂ ಗಡ ಆಲೋಚಿಸುತ್ತ ಬಂದನು, ದೊಡ್ಡ ದೊಡ್ಡ ಜರ್ಮೀಾ ದಾರರಿಗೆ ಏನಾದರೂ ತೊಡಕಾ ಗಿರುವ ವ್ಯವಹಾರಗಳು ಸಂಭವಿಸಿದಾಗ ಈತನ ಬಳಿಗೆ ಬಂದು, ತಮಗೆ ಉಪಯುಕ್ತವಾದ ಸಲಹೆಗಳನ್ನು ಪಡೆದು ತಮ್ಮ ಕೃತಜ್ಞತಾರೂಪವಾಗಿ ಸಮಾಜಕ್ಕೆ ಸ್ವಲ್ಪ ದ್ರವ್ಯವನ್ನು ಸಹಾಯಮಾಡಿ ಹೋಗುತ್ತಲಿದ್ದರು. ಮತದಿಂದಲಾಗಲಿ ಬ್ರಹ್ಮ ಜ್ಞಾನ ಪ್ರಚಾರದಿಂದಲಾ ಗಲಿ ಸಂಬಂಧವಿಲ್ಲದವರಾದರೂ ಈ ಮೂಲಕವಾಗಿ ರಾಮಮೋಹನನಿಗೆ ಅನೇಕರು ಮುಖ್ಯ ಸ್ನೇಹಿತರಾಗಿದ್ದರು. ರಾಮಮೋಹನನು ರಾಜ್ಯ ತಂತ್ರನಿಪುಣನೆಂಬುದಕ್ಕೆ ಇದರಡಿ ತಿಳಿಸುವ ಅಂಶಗಳು ನಿದರ್ಶನಗಳಾಗಿರುವುವು, ಪ್ರಜೆಗಳ ಜ್ಞಾನಾಭಿ ವೃದ್ಧಿಯನ್ನು ಕುರಿತು ಪತ್ರಿಕೆಗಳನ್ನು ಸ್ಥಾಪಿಸುದುದು, ವಾರಸುದಾರರ ನಿರ್ಣಯದ ವಿಷಯದಲ್ಲಿ ಚೀಪ' ಜಸ್ಟೀಸನ ಅಭಿಪ್ರಾಯವು ತಪ್ಪೆಂದು ಸ್ಪಷ್ಟವಾಗಿ ವಾದಿಸಿದ್ದು, ಹಿಂದೂ ಪ್ರಜೆಗಳಿಗೆ ಹಿಂದೂರಾಜ್ಯದಲ್ಲಿ ಉನ್ನತಾಧಿಕಾ ರಗಳನ್ನೂ ಕೊಡುವುದಕ್ಕಾಗಿ ಸರಕಾರದವರೊಡನೆ ವಾದಿಸಿದ್ದು, ಸ್ವಾತಂತ್ರ್ಯ ವಿಚಾ ರವನ್ನು ಕುರಿತು ಗ್ರಂಥಗಳನ್ನು ಬರೆದು ದು, ಬಂಗಾಳ, ಬಿಹಾರ, ಒರಿಸ್ಸಾ, ಮೊದಲಾದ ಮಂಡಲಗಳವರ ಬಂಜರುಭೂಮಿಗಳ ವಿಷಯದಲ್ಲಿ ಗದ್ದಲಹತ್ತಿಸಿದ್ದು ಪತ್ರಿಕಾ ಸ್ವಾತಂತ್ರ, ವಿಚಾರವಾಗಿ ರಾಜಪ್ರತಿನಿಧಿಗೆ ವಿಜ್ಞಪ್ತಿ ಪತ್ರವನ್ನು ಕಳುಹಿಸಿದ್ದು, ಇಂಗ್ಲೆಂಡಿನಲ್ಲಿ ಪಾರ್ಲಿ ಮೆಂಟ್ ಸಭೆಯ ಇದುರಿಗೆ ಹಿಂದೂದೇಶದವರ ಪ್ರಯೋಜನಕ್ಕಾಗಿ ಸಾಕ್ಷ್ಯಗಳನ್ನು ಕೊಟ್ಟು ಒಂದು ಗ್ರಂಥವನ್ನು ಬರೆದುದು, ಈ ವಿಷಯಗಳನ್ನೆಲ್ಲ ಪಾರಕರು ಸಂಕ್ಷೇಪವಾಗಿ ಇದುವ ರೆಗೆ ಓದಿಯೇ ಇರುವರು, ವಿದ್ಯಾ ವ್ಯಾಪಕದವಿಷಯದಲ್ಲಿ ಈತನಿಗೆ ಪ್ರೀತಿ ಹೆಚ್ಚಾಗಿದ್ದಿತು. ಸ್ವದೇಶೀಯರು ಪಾಶ್ಚಾತ್ಯ ವಿದ್ಯೆಗಳನ್ನು ಕಲಿತು ನಾಗರಿಕತೆಯನ್ನು ಹೊಂದಬೇಕೆಂದು ಈತನು ತುಂಬ ಕೃಷಿಮಾಡಿದನು, ಈ ವಿಷಯದಲ್ಲಿ ರಾಜಪ್ರತಿನಿಧಿಗೆ ಈತನು ಒಂದು ಪತ್ರವನ್ನು ಬರೆದನು, ಹಿಂದೂ ಕಾಲೇಜನ್ನು ಸ್ಥಾಪಿಸುವುದಕ್ಕೆ ಮುಖ್ಯವಾಗಿ ನಿಂತನು, ಮಿಸ್ಟರ್ ದತ್ತರವರಿಗೆ ಸಹಾಯಮಾಡಿದನು. ತನ್ನ ಸ್ವಂತ ವೆಚ್ಚದಿಂದ ಒಂದು ಇಂಗ್ಲೀಷ್ ಪಾಠಶಾ ಲೆಯನ್ನು ಸ್ಥಾಪಿಸಿದನು. ಹೃದಯ ಮತ್ತು ಧರಾಭಿಲಾಷೆ. ರಾಮಮೋಹನನು ತನ್ನ ಸ್ನೇಹಿತರಲ್ಲಿ ತೋರಿಸುತಿದ್ದ ಆದರಣೆಯು ಬಹು ಘನವಾ ದುದು, ಅದುವರೆಗೆ ಬ್ರಹ್ಮಮಂದಿರವೆಂಬುದು ಭಗವಂತನ ದರ್ಬಾರಾಗಿರುವುದರಿಂದ ಅಲ್ಲಿಗೆ ಪ್ರಾರ್ಥನಾದಿಗಳನ್ನು ನಡಿಸಲಿಕ್ಕೆ ಬರುವ ಭಕ್ತರೆಲ್ಲರೂ ಉತ್ತಮವಾದ ವಸ್ತ್ರಗಳನ್ನೂ, ಅಂಗಿಪಾಗುಗಳನ್ನೂ ಧರಿಸಿಕೊಂಡು ಬರಬೇಕೆಂದು ನಿರ್ಣಯವಾಗಿದ್ದಿತು, ಒಂದುದಿನ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.