ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ, ೧೨೫ ದ್ವಾರಕಾನಾಥ ಠಾಕೂರ್‌ರವರು ಮೈ ಮೇಲೆ ಒಂದು ಅಂಗವಸ್ತ್ರವನ್ನು ಹಾಕಿಕೊಂಡಿದ್ದು ಹಾಗೆಯೇ ಮಂದಿರಕ್ಕೆ ಬಂದರು ಇದನ್ನು ನೋಡಿ, ತಾನೇ ಈ ವಿಷಯವನ್ನಾ ತನೂಂ ದಿಗೆ ಹೇಳಿದರೆ ಆಕ್ಷೇಪವಾಗಿ ತೋರುವುದೆಂದು ಯೋಚಿಸಿ, ತನ್ನ ಅಭಿಪ್ರಾಯವನ್ನು ಆನಂದ ಪ್ರಸಾದಬಾನರ್ಜಿಯಿಂದ ಹೇಳಿಸಿದನು. ಶಿಷ್ಯ ರಾಗಿದ್ದವರ ವಿಷಯದಲ್ಲಿ ಸುದಾ ರಾಮ ಮೋಹನನು ಹಾಗೆಯೇ ವರ್ತಿ ಸಿದನು, ಅವರನ್ನು ಸಹೋದರಿರಾ ? ಎಂದು ಕರೆಯು ತಿದ್ದನು, ಆ ಕಾಲದ ಪದ್ಧತಿಯನ್ನನುಸರಿಸಿ ರಾಮಮೋಹನನಿಗೆ ದೊಡ್ಡ ಜುಟ್ಟ, ಉಭಯಪಾರ್ಶ್ವಗಳಲ್ಲಿ ಕುಕ್ಕುಗಳಂತೆ ಜುಲ್ಮಾಗಳೂ ಇದ್ದುವು, ಅವುಗಳನ್ನು ತುಂಬ ಅಕ್ಕರೆಯಿಂದ ಕಾಪಾಡುತ್ತಲಿದ್ದನು, ಪ್ರತಿದಿನವೂ ಸ್ನಾನದಮೇಲೆ ಬಹಳ ಹೊತ್ತಿನ ತನಕ ಅವಗಳ ಸಿಕ್ಕನ್ನು ಬಿಡಿಸಬೇಕಾಗಿ ಬರುತ್ತಲಿತ್ತಂತೆ ! ಒಂದಾನೊಂದು ದಿನ ಕೂದ ಲುಗಳನ್ನಾ ರಿಸಿಕೊಳ್ಳುತ್ತಿದ್ದಾಗ ತಾರಾಚಂದ್ರಚಕ್ರವರ್ತಿಯು ಆತನನ್ನು ನೋಡಿ ಅಯ್ಯಾ ! (ಕತ ಆರಸುಖೀ ಮು ಖದೇ ಏಜೇ ದರ್ಸನೇ,' ಎಂದು ನೀವು ರಚಿಸಿದ ಗೀತೆಗಳು ಇತರರಿ ಗೋಸ್ಕರವಾಗಿಯೇ ಮಾಡಲ್ಪಟ್ಟಿರುವವೋ ?” ಎಂದು ನಗಿಸಿದನು. ಬಾಲಕರಲ್ಲಿಯ, ಬಾಲೆಯರಲ್ಲಿಯೂ ಆತನಿಗೆ ತುಂಬ ಪ್ರೇಮವಿದ್ದಿತು. ಮಹರ್ಷಿ ದೇವೇಂದ್ರನಾಧಶಾರೂರವರು ಹೀಗೆ ಹೇಳಿರುವರು, ನಾವು ಬಾಲ್ಯದಲ್ಲಿ ಆಗಾಗ್ಗೆ ಜತೆ ಯ ಹುಡುಗರೊಂದಿಗೆ ಕೂಡಿ ಆತನ ಮನೆಗೆ ಹೋಗುತ್ತಲಿದ್ದೆವ, ರಾಮಮೋಹನರಾಯ್ ನಮ್ಮನ್ನು ನೋಡಿ ತುಂಬ ಸಂತೋಷ ಪಡುತ್ತಲಿದ್ದನು, ತನ್ನ ಮನೆಯಲ್ಲಿ ಮಕ್ಕಳು ಆಡಿ ಕೊಳ್ಳಲಿಕ್ಕೆ ಒಂದು ಉಯ್ಯಾಲೆಯನ್ನು ಕಟ್ಟಿಸಿದ್ದನು. ಆ ಹುಡುಗರೆಲ್ಲರೂ ಅದನ್ನು ಹತ್ತಿ ತೂಗುತ್ತಿದ್ದರು. ಒಂದಾನೊಂದುಸಾರಿ ತಾನು ಕೂಡ ಉಯ್ಯಾಲೆಯನ್ನು ತೂಗಿ, ಇನ್ನು ನನ್ನ ಸರದೆ ಬಂತು ; ನೀವೆಲ್ಲರೂ ನನ್ನನ್ನು ತೂಗಿರೆಂದು ಉಯ್ಯಾಲೆಯಲ್ಲಿ ಕುಳಿತುಕೊಳ್ಳುತ್ತಿ ದ್ದನು. ನಾವೆಲ್ಲರೂ ತುಂಬ ಉಲ್ಲಾಸದಿಂದ ನಗುತ್ತಾ ಆ ಮಹಾತ್ಮನನ್ನು ತೂಗುತ್ತಲಿ ದೈವು. ಒಂದಾನೊಂದುದಿನ ಆತನು ಉಯ್ಯಾಲೆಯಲ್ಲಿ ಕುಳಿತು ನಮ್ಮಿಂದ ತೂಗಿಸಿಕೊಳ್ಳು ಇಲಿದ್ದಾಗ ಒಬ್ಬ ಪ್ರಸಿದ್ದ ಪಂಡಿತನು ಅಲ್ಲಿಗೆ ಬಂದು ನೋಡಿ, ಇಷ್ಟು ದೊಡ್ಡ ಉಯ್ಯಾಲೆ ಯನ್ನು ಮಕ್ಕಳಿಂದ ತೂಗಿಸಿಕೊಳ್ಳುತ್ತಿದ್ದೀರಲ್ಲಾ ! ಇದೇನು ?” ಎಂದು ಕೇಳಿದನು. ಅದಕ್ಕೆ ಆತನು ನಕ್ಕು ನನಗೆ ಮುಂದೆ ಮುಂದೆ ಒಳ್ಳೇದಾಗುವುದು, ನಾನು ಸಮುದ್ರ ಪ್ರಯಾಣ ಮಾಡುವಾಗ ಅಲ್ಲಿನ ಹಡಗು ಆ ನೀರಿನಲ್ಲಿ ಉಯ್ಯಾಲೆಯಂತೆಯೇ ತೂಗಿ ಪ್ರಯಾ ಣಿಕರಿಗೆ ಅನೇಕ ವಿಧವಾದ ತೊಂದರೆಗಳುಂಟಾಗುವುವು. ಆದುದರಿಂದ ಅಂತಹ ಕಷ್ಟಗಳು ಸಂಭವಿಸದೆ ಇರಲು ಈಗಿನಿಂದಲೂ ತೂಗಾಡುವ ಅಭ್ಯಾಸವನ್ನು ಮಾಡುತ್ತಲಿದ್ದೇನೆಂದು ಛಲೋಕ್ಕಿಯಾಗಿ ಹೇಳಿದನು. ಘನವಿದ್ಯಾವಿವೇಕಸಂಪನ್ನ ನಾದ ಆತನಿಗೆ ಈ ಬಾಲಕರಲ್ಲಿ ಇದ್ದ ವಾತ್ಸಲ್ಯವು ಹಲವು ವಿಧಗಳಿಂದಲೂ ಕೊಂಡಾಡಲ್ಪಡತಕ್ಕದ್ದಾಗಿದ್ದಿತು.' ಜಾತಿಯಲ್ಲಿ ಆತನಿಗೆ ತುಂಬ ಮರಾದೆ ಇತ್ತು, ತಾನು ಕುಳಿತಿದ್ದಾಗ ಯಾವ ಳಿಯದರೂ ನಿಂತುಕೊಂಡು ಮಾತನಾಡುವುದು ಆತನಿಗೆ ಸಮ್ಮತವಾಗಿರಲಿಲ್ಲವಾದುದರಿಂದ