ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩9 ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ೧, ಈತನು ಈ ವೇದಾಂತಸಿದ್ಧಾಂತಗಳನ್ನು ಅಂಗೀಕರಿಸುವ ವೇದಾಂತಿಯಲ್ಲಿ ವೆಂದು ಸುಲಭವಾಗಿ ಧೃಢಪಡಿಸಬಹುದು. ಈ ದೇಶದಲ್ಲಿ ಇಂಗ್ಲೀಷ ಸ್ಕೂಲುಗಳನ್ನೇ ರ್ಪ ಡಿಸುವುದಕ್ಕೆ ರಾಜಪ್ರತಿನಿಧಿಯಾದ ಅಂತರಗೆ ಈತನು ಬರೆದ ವಿಜ್ಞಾಪನಾಪತ್ರದಿಂದ ಈತನು ವೇದಾ೦ತಾದಿ ಶಾಸ್ತ್ರಗಳನ್ನು ಸತ್ಯವೆಂದು ನಂಒತಕ್ಕ ವನಲ್ಲವೆಂದು ಸ್ಪಷ್ಟವಾಗಿ ತಿಳಿ ಯಬರುವುದು, ಮತ್ತು ಈ ಎಜ್ಞಾಪನವನ್ನು ನೋಡಿದ ತರುವಾಯ ಯಾರಾಗಲಿ ರಾಮ ಮೋಹನನು ವೇದಾಂತವೇ ಮೊದಲಾದ ಶಾಸ್ತ್ರಗಳೆಲ್ಲವೂ ಈಶ್ವರಸಿಲ್ಕಿತಗಳೆಂದು ಒಪ್ಪಿಕೊಂಡಿ ದನೆಂದು ಹೇಳಲಾರರು. - ಮೇಲೆ ಹೇಳಿದ ವಿಜ್ಞಾಪನೆಯಲ್ಲಿ ಅಲ್ಲಲ್ಲಿ ಸಂದರ್ಭಾನುಸಾರವಾಗಿ ಈ ಕೆಳಗಿನ ವಾಕ್ಯ ಗಳು ಒರೆಯಲ್ಪಟ್ಟಿವೆ. 'ನ್ಯಾಯ, ಮಿಮಾಂಸಾ, ವೇದಾಂತಶಾಸ್ತ್ರಗಳು ವಿವಿಧ ಮನೋ ವಿಕಲ್ಪಗಳನ್ನುಂಟುಮಾಡುವ ಅಭಿಪ್ರಾಯಗಳ೦ದ ತಂಬವೆ. ಇದರ ದೆಸೆಯಿಂದ ಆ ಗ್ರಂಧ ಗಳನ್ನೇ ಪ್ರತ್ಯೇಕವಾಗಿ ಓದಿದರೆ ಮನುಷ್ಯನಿಗೆ ನಿಜವಾದ ಲಾಭವುಂಟಾಗಲಾರದೆಂಬುದು ನಿಶ್ಚಯ, ಅವುಗಳಲ್ಲಿ ವಿಶೇಷವಾಗಿ ಪರಮಾತ್ಮನೊಂದಿಗೆ ಜೀವಾತ್ಮ ನಿಗೆ ಇರುವ ಸಂಬಂಧ ವೆಂಧದು ? ಜೀವಾತ್ಮನು ಪರಮಾತ್ಮನಲ್ಲಿ ಹೇಗೆ ಐಕ್ಯವಾಗುವನು ? ವೇದಮಂತ್ರಗಳ ಸ್ವರ ಸವು ಯಾವುದು ? ಅವುಗಳ ಬಲವೆಂತದು ? ಮತ್ತು ವೇದಮಂತ್ರಗಳಿಂದ ಪಶುವಿಶದನವನ್ನು ಮಾಡುವ ಪಾಪವು ಹೇಗೆ ಹೋಗಬಲ್ಲದು ? ಇಂತಹ ವಾಕ್ಯಗಳೇ ಬರೆಯಲ್ಪಟ್ಟಿರುವನು. ಆದಕಾರಣ ಇವುಗಳನ್ನೋದುವುದರಿಂದ ಮನುಷ್ಯನ ಸ್ವಭಾವಸಿದ್ಧವಾದ ಜ್ಞಾನಕ್ಕೆ ಸ್ವಲ್ಪವೂ ಅಭಿವೃದ್ಧಿಯುಂಟಾಗಲಾರದು, ನಿನ್ನ ಕಣ್ಣೆದುರಿಗೆ ಕಾಣಬರುತ್ತಿರುವ ಸೃಷ್ಟಿ ವೈಚಿತ್ರ ಗ ಳೆಲ್ಲವೂ ಅಸತ್ಯವಾದದು. ನೀನು ಸತ್ಯವೆಂದು ಭಾವಿಸತಕ್ಕವುಗಳೆಲ್ಲವೂ ನಿಶ್ಚಯವಾಗಿಯೂ ಅಸತ್ಯವಾದುವ, ತಾಯಿ, ತಂದೆ, ಗುರುವು, ಬಂಧುಗಳು, ಸಹೋದರರು ಮೊದಲಾದ ದೇಹಸಂಬಂಧಿಗಳಲ್ಲಿನ ಪಾಮರತ್ವವು ಭ್ರಮೆಯಿಂದ ಉಂಟಾಗಿದೆ. ಇವರೆಲ್ಲರೂ ನಿಜವಾಗಿ ಯ ಪ್ರೀತಿಸಲ್ಪಡತಕ್ಕ ವರವು. ಆದುದರಿಂದ ಸಾಧ್ಯವಾದಷ್ಟು ತ್ವರೆಯಲ್ಲಿ ಇವರಲ್ಲಿನ ಮಮತೆಯನ್ನೆಲ್ಲ ಬಿಟ್ಟು ಬಿಟ್ಟು, ಗೃಹಸ್ಥಮಾರ್ಗವನ್ನು ತೊರೆದು, ಪ್ರಪಂಚ ಸೌಖ್ಯಗಳನ್ನು ಸಂನ್ಯಸಿಸುವುದೇ ಮನುಷ್ಯನಿಗೆ ಕ್ಷೇಮಕರವಾದುದು ಎಂದು ಬರೆಯಲ್ಪಟ್ಟಿರುವ ಗ್ರಂಧಗಳ ನೋಡುವ ಬಾಲಕರು ತಮ್ಮ ಭಾವಿಜೀವಿತವು ಸಾರ್ಧಕವಾಗುವ ಹಾಗೆ ಗೃಹಸ್ಥ ಧರ್ಮಗಳನ್ನು ಹೇಗೆ ನಿರ್ವಹಿಸಲಾಪರು ? ಈ ಶಾಸ್ತ್ರಗಳು ತುಂಬ ಸತ್ಸಂಪ್ರದಾಯಕಗಳೆಂತಲೂ, ದೈವಕಲ್ಪಿ ತಗಳೆಂತಲೂ ರಾಮಮೋಹನನು ನಂಬಿದ್ದವನಾದರೆ ಆತನ ಮನಸ್ಸಿನಿಂದ ಇಂತಹ ವಾಕ್ಯಗಳು ಹೆಗೆ ಹೊರಡುತ್ತಿದ್ದವು ? ಈತನು ವೇದಾ೦ತಿಯೇ ಎಂದು ವಾದಿಸುವವರು ವಿಗ್ರಹಾರಾಧ ಕರ ಸಂಗಡ ಆ ಪದ್ಧತಿಯು ಗರ್ಹವೆಂದು ವೇದಾಂತಗ್ರಂಧವಾಕ್ಯಗಳನ್ನು ತೋರಿಸಿ ವಾದಿ ಸುತ್ತಿದ್ದುದರಿಂದಲೇ ವೇದಾಂತಶಾಸ್ತ್ರಗಳನ್ನು ಅಂಗೀಕರಿಸಿದ್ದನೆಂಬುದಕ್ಕೆ ಪ್ರಬಲಸಾಕ್ಷ್ಯವೆಂ ದು ಹೇಳುವರು. ಆದರೆ ಕೇವಲ ಇದೊಂದು ಕಾರಣದಿಂದಲೇ ಆತನನ್ನು ವೇದಾಂತಿಯೆಂದು ಭಾವಿಸುವವರು ಈ ವಿಷಯದಲ್ಲಿ ತಪ್ಪಿ ಹೋಗುವರು, ಆತನು ಇತರ ಮತಗಳವರೊಂದಿಗೆ