೧೩೭ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಮೋಹನನು ಒಂದು ಮತದ ನಿರ್ಣಯಗಳಿಗೂ ಒಳಪಟ್ಟವನಲ್ಲ ; ಆತನು ಶಾಸ್ತ್ರಗಳಲ್ಲಿನ ನಿರ್ಬಂದಗಳಿಗೆ ಒಳಪಡುವದು ಅನಾವಶ್ಯಕವೆಂದು ಹೇಳಶಕ್ಕವನಾಗಿಯೂ, ಪ್ರಪಂಚದಲ್ಲಿನ ಎಲ್ಲಾ ಮತಸಿದ್ಧಾಂತಗಳಲ್ಲಿನ ಮುಖ್ಯಾಂಶಗಳನ್ನು ಗ್ರಹಿಸತಕ್ಕವನಾಗಿಯೂ, ಇರುವ ಒಬ್ಬ ಬ್ರಹ್ಮಪಾಸಕನು. ಆತನು ಉಪನಿಷತ್ತುಗಳನ್ನು ಶಾಂತವಾಗಿ ನೋಡಿ ಪಾಶ್ಚಾತ್ಯರಿಗಿಂತ ಲೂ ಪುರಾತನ ಹಿಂದುಗಳೇ ಭಗವಂತನನ್ನು ಚೆನ್ನಾಗಿ ತಿಳಿದುಕೊಂಡಿದ್ದರೆಂದು ಒಂದುಸಾರಿ ಯೂ ಜೀಸಸ್ ಕ್ರಿಸ್ತನು ಹೇಳಿದ ನೀತಿಗಳು ಅಮೋಘವಾದವುಗಳೆಂದು ಮತ್ತೊಂದುಸಾರಿ ಯೂ ಹೇಳುತ್ತಲಿದ್ದನು, ಆತನ ವಾಕ್ಯವಾಹವು ತುಂಬ ಅದ್ಭುತವಾದುದು, ಹಿಂದೂ, ಮಹಮ್ಮದೀಯ, ಕ್ರಿಸ್ತಿಯ ಮತಗಳವರು ತಮ್ಮ ತಮ್ಮ ಗ್ರಂಥಗಳನ್ನು ದೇವರು ಅನುಗ್ರಹಿ ಸಿರುವನೆಂದು ಹೇಳುವ ವಾಕ್ಯಗಳು ಎಷ್ಟರಮಟ್ಟಿಗೆ ನಂಬಿಕೆಗೆ ಅರ್ಹಗಳೆಂಬ ವಿಷಯವನ್ನು ಕುರಿತು ಉಪನ್ಯಸಿಸುವುದಕ್ಕೆ ಕೂಡಿಸಿದ ಮಹಾಸಭೆಯಲ್ಲಿ ಸ್ವಮತಾಭಿಮಾನದಿಂದ ನಮ್ಮ ಮತಗ್ರಂಥವೊಂದೇ ದೇವರು ಅನುಗ್ರಹಿಸಿದ್ದೆಂತಲೂ, ಉಳಿದುವುಗಳೆಲ್ಲ ಕಲ್ಪಿತಗಳೆಂತಲೂ, ಯಾರು ಎಷ್ಟು ಹೇಳಿದರೂ ನಿಷ್ಪಕ್ಷಪಾತ ಬುದ್ಧಿಯಿಂದ ವಿಚಾರಮಾಡಿ ನೋಡಲು ಅವುಗ ಳೆಲ್ಲವೂ ಯಥಾರ್ಥವಾದವುಗಳಲ್ಲವೆಂತಲೂ, ದೇವರು ಒಬ್ಬಾನೊಬ್ಬ ಮನುಷ್ಯನ ಹೃದಯದಲ್ಲಿ ಅಂದವಾದ ಜ್ಞಾನಚಕ್ಷು ಸ್ಸನ್ನು ಅನುಗ್ರಹಿಸಿ, ಅವುಗಳನ್ನೂ ಇತರರಿಗೆ ಯೋಗ್ಯಗಳಾದ ಪದ್ಧ ತಿಗಳನ್ನೂ ಬೋಧಿಸುವ ಸಾಮರ್ಥ್ಯವುಳ್ಳವನನ್ನಾಗಿ ಮಾಡುತ್ತಿರುವನೆಂಬುದೇ ನಂಬಿಕೆಗೆ ಅರ್ಹವಾದುದೆಂತಲೂ, ಯೋಗ್ಯಾಯೋಗ್ಯ ವಿಷಯ ವಿಚಾರಗಳಿಗೂ ಯುಕ್ತಾಯುಕ್ತ ಪರಿಜ್ಞಾನಕ್ಕೂ ಆಧಾರವಾದ ಮನಸ್ಸ ಭಗವಂತಸಿಂದ ಅನುಗ್ರಹಿಸಲ್ಪಟ್ಟ ಗ್ರಂಥವೆಂತಲೂ, ಹೇಳಿದ ಈ ಮುಖ್ಯವಾಕ್ಯಗಳು ಉಪದೇಶರೂಪವಾಗಿ ನನ್ನ ಅಂತರಾತ್ಮದಲ್ಲಿ ಇದುವರೆಗೂ ಕೆತ್ತ ಲ್ಪಟ್ಟಿರುವವು ” ಎಂದು ಬರೆದಿರುವನು.
- ಮೇಲೆ ಹೇಳಿದ ಆರು ಹೇತುಗಳಿಂದ ಮಹಾತ್ಮನಾಗಿ ಹುಟ್ಟಿದ ರಾಜಾರಾಮಮೋಹ ನರಾಯನು ಪೂರ್ವಮತನಿರ್ಣಯಗಳಿಗೆ ಒಳಪಟ್ಟವನು ಅಲ್ಲವೆಂತಲೂ, ಆತನ ಮನವು ಪ್ರಪಂಚದಲ್ಲಿನ ಆಸ್ತಿಕ ಮತಗಳಿಗೆಲ್ಲಕ್ಕೂ ಸಂಬಂಧಿಸಿ ಇರುವುದೆಂತಲೂ, ಆತನು ಶಾಸ್ತ್ರನಿ ರ್ಬಂಧಗಳು ಅನಾವಶ್ಯಕಗಳೆಂತಲೂ, ಅವುಗಳಲ್ಲಿನ ಯೋಗ್ಯವಾದ ಅಂಶಗಳನ್ನು ಗ್ರಹಿಸಬೇ ಕೆಂತಲೂ ಬೋಧಿಸುತ್ತಾ ಎಲ್ಲಾ ಶಾಸ್ತ್ರಗಳಿಂದಲೂ ಒಬ್ಬ ಪರಮೇಶ್ವರನ ಉಪಾಸನೆಯ ಮುಖ್ಯವೆಂಬ ಸಾರಾಂಶವನ್ನು ತೆಗೆದುಕೊಂಡು “ ಏಕಮೇವಾದ್ವಿತಿಯಂ, ಸತ್ಯಂಶಾಸ್ತ್ರಮನ ಶ್ವರಂ” ಎಂಬ ಈ ಮಹಾವಾಕ್ಯಾರ್ಥಗಳನ್ನೇ ಮನೋವಾಕ್ಕಾಯ ಕರ್ಮಗಳಿಂದ ಅನುಸಂ ಧಿಸಿದ ಸತ್ಯವಾದಿ ಬ್ರಾಹ್ಮಣನೆಂತಲೂ ಸಿದ್ಧಾಂತವಾಗುವುದು.
ಓಂತಕ್ ಕಂ| ಸಲದೈವಂಗಳ ಭವೆಸುತೆ | ನೆಲೆಯಿಲ್ಲದ ನೀಚಕೃತ್ಯಗಳನೆಸಗುತ್ತಂ || ತೊಳಲದೆ ನಿಶ್ಚಲಚಿತ್ತದೆ | ಸಲೆ ಪೂಜೆವುದೆಂಬುದೀಸಮಜದ ಮೂಲಂ ||