೧೪ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಉತ್ತರ ಪ್ರತ್ಯುತ್ತರಗಳಿಂದಲೂ, ಆ ಭಾಷಾಪಂಡಿತರಿಗೆ ಸಮಾನನಾದವನೆಂದು ಹೇಳುವುದಕ್ಕೆ ಸಂತೋಷಿಸುವುದಲ್ಲದೆ ಇದಕ್ಕೆ ನಾನೇ ಕಾರಣನೆಂದು ಗರ್ವಪಡುತ್ತಿದ್ದೇನೆ. ಈತನಿಗೆ ಇಂಗ್ಲಿಷ್ ಭಾಷಾಭಿವೃದ್ಧಿಯಲ್ಲಿ ಮಾತ್ರವಲ್ಲ ; ಯೂರೋಪ್ ಖಂಡದ ರಾಜ್ಯಾಂಗವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿಯೂ ಆಸಕ್ತಿ ಹೆಚ್ಚಾಗಿದ್ದಿತು. ಡಿಗ್ನಿ ಯವರು ಈ ವಿಷಯವಾಗಿ ಒಂದುಕಡೆ ಹೀಗೆ ಬರೆದಿರವರು ಇವನು ಪಾಶ್ಚಾತ್ಯರ ವಾರ್ತಾಪತ್ರಿಕೆಗಳನ್ನೋದುವ ಅಭ್ಯಾಸಮಾಡಿದನು, ಪ್ರ್ರಾಸ್ ಮೊದಲಾದ ರಾಜ್ಯಗಳ ವೃತ್ತಾಂತಗಳನ್ನು ಕೂಡ ಬಹು ಶ್ರದ್ಧೆಯಿಂದ ಓದುತಲಿದ್ದನು, ಮೊಟ್ಟ ಮೊದಲು ನೆಪೋ ಲರ್ಯ ಬೋನೋಪ ರ್ಟಿನ ಶೌರ ವಿಜೃಂಭಣೆಗೆ ಬಹಳವಾಗಿ ಸಂತೋಷಿಸುತ್ತಾ ಆತನ ಅಪಜಯದ ಸುದ್ದಿಗಳಿಗೆ ವ್ಯಸನ ಪಡುತ್ತಾ ಇದ್ದನು, ಕೆಲವು ದಿನಗಳ ತರುವಾಯ ಅವ ನಿಗೆ ಆ ಅಭಿಪ್ರಾಯವು ಬದಲಾಯಿಸಿತು, ಒಂದುಸಾರಿ ನನ್ನೊಡನೆ ಮಾತನಾಡುವಾಗ “ ನನಗೆ ನೆಪೋಲಿಯನನಲ್ಲಿ ಮೊದಲ.ಹುಟ್ಟಿದ್ದ ಸದಭಿಪ್ರಾಯವು ಈಗ ಇಲ್ಲ ; ಅವನು ಮಾಡುತ್ತಿರುವ ದೊಡ್ಡ ಕೆಲಸಗಳನ್ನೆಲ್ಲ ಬಹು ನೀಚಕಾರಗಳೆಂದು ನಾನು ತಿಳಿಯುತ್ತೇನೆ ? ಎಂದನು. ೧೮೦೪ ರಲ್ಲಿಯೋ ಅಥವಾ ೧೮೦೫ ರಲ್ಲಿಯೋ ರಾಮಮೋಹನನ ತಂದೆ ಯಾದ ರಾಮಕಾಂತರಾಯನು ತೀರಿಹೋದನು, ಆತನು ಸಾಯುವುದಕ್ಕಿಂತ ಎರಡು ವರುಷ ಗಳ ಮುಂಚೆಯೇ ತನ್ನ ಆಸ್ತಿಯನ್ನೆಲ್ಲ ಮೂವರು ಮಕ್ಕಳಿಗೂ ಹಂಚಿಕೊಟ್ಟನು. ರಾಮ ಮೋಹನನು ತಂದೆ ಸತ್ತ ತರುವಾಯ ಮನೆಗೆ ಪ್ರವೇಶಿಸಿದರೂ ಆಸ್ತಿಯ ವಿಷಯವಾಗಿ ಸ್ವಲ್ಪವೂ ಆಶಿಸದೆ ಅದನ್ನು ಉಳಿದವರ ಜೀವನಕ್ಕಾಗಿಯೇ ಬಿಟ್ಟು ಕೊಟ್ಟು ತನ್ನ ಉದ್ಯೋ ಗದ ಹಣದಿಂದಲೇ ಜೀವನಮಾಡುತಿದ್ದನು. ತಂದೆಯ ಮನೆಯ ಗೃಹಕೃತ್ಯವನ್ನೆಲ್ಲ ಸಮ ರ್ಥೇಯಾದ ತಾರಣೀದೇವಿಯೇ ನಿರ್ವಹಿಸುತ್ತಿದ್ದಳು ಮಹಾತ್ಮರ ಚರಿತ್ರೆಯನ್ನು ಓದಿದವರಿಗೆಲ್ಲ ಆ ಮಹಾತ್ಮರ ಜೀವಿತಕಾಲಗಳಲ್ಲಿ ನಡೆದ ಬದಲಾವಣೆಗಳಿಗೆ ನಾವು ಪ್ರತಿದಿನವೂ ನೋಡುತ್ತಿದ್ದು ಅಲಕ್ಷ್ಯ ಮಾಡುವ ಕಾರಿಗಳೇ ಮುಖ್ಯ ಕಾರಣಗಳೆಂದು ತಿಳಿಯದೆ ಇಲ್ಲ, ನಾವು ಪ್ರತಿದಿನದಲ್ಲಿಯೂ ಎಷ್ಟು ಹೆಣಗಳನ್ನು ಕಣ್ಣಿನಿಂದಲೇ ನೋಡುತ್ತಲಿಲ್ಲ ? ಇದರಿಂದ ನಮ್ಮ ಮನಸ್ಸಿಗೆ ಯಾವ ಬದಲಾವಣೆಯಾ ದರೂ ತೋರುತ್ತಲಿದೆಯೋ ? ಹೀಗಿದ್ದರೂ ಕಪಿಲವಸ್ತುರಾಜನ ಕುಮಾರನಾದ ಗೌತಮ ಬುದ್ಧನು ಒಂದೇ ಹೆಣವನ್ನು ನೋಡಿದ ಮಾತ್ರದಿಂದಲೇ ತನ್ನ ಮಹದೃಶ್ವರವನ್ನೆಲ್ಲ ಪರಿತ್ಯ ಜಿಸಿ ತಪಸ್ವಿಯಾಗಿ ಕಾಡಿಗೆ ಹೊರಟುಹೋದನಲ್ಲವೇ ? ನಾವು ಪಿಡುಗುಗಳಿಂದ ಸಾಯುವ ಎಷ್ಟು ಜನರನ್ನು ನೋಡುತ್ತಲಿಲ್ಲ ? ಆದರೂ ಬ್ಯೂತರ್ ಎಂಬುವನು ಪ್ರಪಂಚವನ್ನು ಬಿಟ್ಟು ಪರಮಾರ್ಥವನ್ನು ಆಶ್ರಯಿಸಿದುದು ಇದರಿಂದಲೇ ಅಲ್ಲವೇ ? ಮಕ್ಕಳು ಬಾಲ್ಯದಲ್ಲಿ ಎಷ್ಟು ಪ್ರಾಣಿಗಳನ್ನು ಹಿಂಸಮಾಡುವುದಿಲ್ಲ ? ತಿಯೋಡೋರ್ ಪಾರ್ಕರ್ ಎಂಬವನು ನಾಲ್ಕು ವರುಷದವನಾಗಿದ್ದಾಗ ಒಂದು ಇರುವೆಯನ್ನು ಕೊಲ್ಲಲಿಕ್ಕೆ ಹೋದುದರಿಂದಲೇ ಅಲ್ಲವೇ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.