ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(1೫. ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಅವನು ಆತ್ಮ ತತ್ವವನ್ನು ತಿಳಿದುಕೊಂಡು, ತನ್ನ ಜೀವಿತಪದ್ಧತಿಯನ್ನೇ ಬದಲಾಯಿಸಿಕೊಳ್ಳಲು ಪ್ರಬಲ ಹೇತುವಾಯಿತು. ಹಾಗೆಯೇ ರಾಮಮೋಹನನ ಜೀವಿತದಲ್ಲಿ ಕೂಡ ಗಂಡನು ಸತ್ಯ ಕೂಡಲೇ ಅವನ ಹೆಣದೊಂದಿಗೆ ಬದುಕಿರುವ ಹೆಂಡತಿಯ ಶರೀರವನ್ನು ಸುಟ್ಟುಹಾಕುವ ('ಸಹಗಮನ” ವೆಂಬ ಆಚಾರವೇ ದೊಡ್ಡ ಮಾರ್ವಾಡಿಗೆ ಕಾರಣವಾಯಿತು, ಈತನು ಮೊದಲಲ್ಲಿ ತನ್ನ ಅಣ್ಣನಾದ ಜಗನ್ನೋಹವನೊಂದಿಗೆ ಅವನ ಸತೀಮಣಿಯು ಸುಡಲ್ಪಡುತ್ತಲಿ ರುವುದನ್ನು ನೋಡಿದನು. ಆಗ ಭಯಂಕರವಾಗಿ ದೊಡ್ಡ ದೊಡ್ಡ ಜ್ವಾಲೆಗಳೊಂದಿಗೆ ಅಗ್ನಿ ಹೋತ್ರನು ಮತಿ೯ಭವಿಸಿದ ಹಾಗೆ ಚಿತಿಯ ನಾಲ್ಕು ದಿಕ್ಕುಗಳನ್ನೂ ಆವರಿಸಿ ಸುಡುತ್ತಿ ದ್ದನು. ಸುಡುತ್ತಿರುವಾಗ ಯಾವ ರೋಗವೂ ಇಲ್ಲದೆ ತುಂಬಿದ ಪ್ರಾಣದಿಂದ ಇದ್ದ ದೇ ಹಕ್ಕೆ ಉಂಟಾದ ಬಲಾತ್ಕಾರದ ಮರಣಬಾಧೆಯಿಂದ ಆ ಹೆಂಗಸು ಕೂಗುತ್ತಿದ್ದ ಆಕ್ರಂದನ ಧ್ವನಿಯು ನೋಟಕರ ಕಿವಿಗೆ ಕೇಳಿಸದಂತೆ ಬಾರಿಸುವ ತಮಟೆಯ ಧ್ವನಿಗಳಿಂದ ಕಿವಿ ಕಿವು ಡಾಗುತ್ತಿದ್ದಿತು, ತೀಕ್ಷ್ಮವಾಗಿ ಅಷ್ಟಷ್ಟಕ್ಕೆ ಹೆಚ್ಚು ಸುಡುತ್ತಲಿರುವ ಅಗ್ನಿ ಜ್ವಾಲೆ ಗಳನ್ನು ತಡೆಯಲಾರದೆ ಆಕೆಯು ಪ್ರಾಣವನ್ನು ಳಿಸಿಕೊಳ್ಳಬೇಕೆಂದು ಚಿತಿಯಿಂದ ಧುಮ್ಮಿಕ ಲು ಯತ್ನಿಸಿದಾಗ ಅವಳ ಸವಿಾಪಬಂಧುಗಳೆಲ್ಲರೂ ಎರಡು ಕಡೆಗಳಲ್ಲಿಯೂ ನಿಂತು ಬಿದಿರಿನ ದೊಣ್ಣೆಗಳಿಂದ ಬಲವಂತವಾಗಿ ಅವಳನ್ನು ಬೆಂಕಿಯೊಳಕ್ಕೆ ನೂಕುತ್ತಿದ್ದರು. ಇಂತಹ ದಯಾಶೂನ್ಯವಾದ ಘೋರ ಕೃತ್ಯವನ್ನು ನೋಡಿ ದುಃಖಿಸಿ ಕೋಪದಿಂದ ಕೆಂಪಡರಿದ ಕ: ಮೈಗಳಿಂದ ಅವರನ್ನು ಬಿರಬಿರನೆ ನೋಡುತ್ತ, ದೊಡ್ಡ ಧ್ವನಿಯಿಂದ ರಾಮಮೋಹನ ನಿಂತೆಂದನು. ಲೇಶವಾದರೂ ದಯಾ ದಾಕ್ಷಿಣ್ಯಗಳು ಇಲ್ಲದ ಗೋಮುಖವಾಘ್ರಗಳಿರಾ, ನಾನು ಇದೇ ಲೋಕದಲ್ಲಿ ಇನ್ನು ಕೆಲವುಕಾಲದತನಕ ಬದುಕಿದ್ದರೆ ನನ್ನ ಶಕ್ತಿಯನ್ನೆಲ್ಲ ವಿನಿಯೋಗಿಸಿ, ಈ ದುರಾಚಾರವೆಂಬ ಗಿಡವನ್ನು ಒಲ್ಲ ಬೇರಿನೊಂದಿಗೆ ಕಿತ್ತು ಹಾಕುವೆನು. ನೋಡೋಣ, ನನ್ನ ಪ್ರಯತ್ನಗಳಿಗೆ ದೈವವು ಅನುಕೂಲಿಸಲಿ.' ರಾಮಮೋಹನನು ಉದ್ಯೋಗದಲ್ಲಿದ್ದಾಗ ತನ್ನ ಜೀವಿತೌರ್ಷ್ಯಕ್ಕೆ ಕಾರಣವಾದ ಈ ಕಾರ್ಯವನ್ನು ಮರೆತಿರಲಿಲ್ಲ, ನಿತ್ಯವೂ ಸಾಯಂಕಾಲ ತನ್ನ ಮನೆಯಲ್ಲಿ ಮತವಿಷಯ ವನ್ನು ಚರ್ಚಿಸುವುದಕ್ಕೆ ಒಂದು ಸಂಘವನ್ನೇರ್ಪಡಿಸಿ, ಅಲ್ಲಿ ವಿಗ್ರಹಾರಾಧನೆಯು ತಕ್ಕು ದಲ್ಲವೆಂತಲೂ ಬ್ರಹ್ಮಜ್ಞಾನವನ್ನು ಪ್ರತಿಯೊಬ್ಬನೂ ಪಡೆಯಬೇಕೆಂತಲೂ, ಬೋಧಿಸುತಿ ನು, ಈ ಸಭೆಯಲ್ಲಿ ಜೈನಮತ ಪ್ರವರ್ತಕರಲ್ಲಿ ಕೆಲವರು ಸೇರಿದ್ದುದರಿಂದ ಅವರ ಅನು ಕೂಲ ಕ್ರೋಸ್ಕರ ತನಗೆ ವಿರಾಮ ದೊರೆತಾಗ ಜೈನರ ಮತಗ್ರಂಥಗಳನ್ನೂ ಓದುತ್ತ ಬಂದನು. ಹೀಗಿರುವಾಗ ಅಲ್ಲಿಯ ನ್ಯಾಯಸ್ಥಾನದಲ್ಲಿ ಶಿರಸ್ತೇದಾರನಾಗಿದ್ದು ಫಾರಸಿಯ ಲ್ಲಿಯೂ ಸಂಸ್ಕೃತದಲ್ಲಿಯ ಒಳ್ಳೆಯ ಪಾಂಡಿತ್ಯವನ್ನು ಸಂಪಾದಿಸಿ ಹಲವು ಮಂದಿ ಶಿಷ್ಯರೊಡಗೂಡಿದ್ದ ಗೌರೀಕಾಂತ ಚತರ್ಜಿ ಎಂಬಾತನು ರಾಮಮೋಹನನಿಂದ ಆತನ ಉದ್ದೇಶಗಳಿಗನುಗುಣವಾಗಿ ಜಂಗ್‌ಪುರದಲ್ಲಿದ್ದಾಗ ಫಾರಸಿಯಲ್ಲಿ ಬರೆಯಲ್ಪಟ್ಟ ಕೆಲವು ಗ್ರಂಥಗಳಿಗೆ ವಿರೋಧವಾಗಿ ಜ್ಞಾನಾಂಜನವೆಂಬ ಒಂದು ಪುಸ್ತಕವನ್ನು ಬರೆದನು, ಆದರೂ