ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, _೧F ದುರುಳರ ಬಿರುನುಡಿಗಂಜದೆ ಪರನೆರೆತನ್ನಯಚಿತ್ತ ಕೊಪ್ಪಿದುದನಾಚರಿಸಲ್' || ವರಧೈರ್ಯಮಾಂತು ತೊಡಗುವ | ನರನಿದಿರೊಳ್ಳಿಲ್ಲಲಾರವೆಡರುಗಳೊಂದುಂ | ---++--- ಮೂರನೆಯ ಪ್ರಕರಣ. ರಾಮಮೋಹನರಾಯನು 1815 ರಲ್ಲಿ ಇವನ ನಾಲ್ವತ್ತನೆಯ ವಯಸ್ಸಿನಲ್ಲಿ ಶನ್ನ ವಾಸಸ್ಥಳವನ್ನು ಕಲ್ಕತ್ತೆಗೆ ಬದಲಾಯಿಸಿದನು. ಇದಕ್ಕೆ ಮುಂಚೆ ಅವನು ಮಾಡುತ್ತಿದ್ದ ಸಂಸ್ಕರಣ ಗಳು ಅವನ ಉದ್ಯೋಗದಶೆಯಲ್ಲಿದ್ದುದರಿಂದ ಅವನಿಗೆ ಸಾಕಾ ದಷ್ಟು ಅವಕಾಶವಿಲ್ಲದಕಾರಣ ಪ್ರಕಾಶಿಸದೆ ಇದ್ದುವು. ಈಗ ಆ ಬಂಧಗಳಿಂದ ವಿಮುಖ ಕನಾಗಿ ತನ್ನ ಜೀವಿತಕಾಲದಲ್ಲಿ ಪ್ರತಿ ನಿಮಿಷವನ್ನೂ, ದ್ರವ್ಯವನ್ನೂ, ದೇಹವನ್ನೂ, ದೇಶೋದ್ಧರಣೆಗಾಗಿಯೇ ಉಪಯೋಗಿಸುವುದರಲ್ಲಿ ಬದ್ಧ ಕಂಕಣನಾದನು ; ಆದುದರಿಂದ ಇವನ ಇತಿಹಾಸವನ್ನು ಮಹಾತ್ಮರ ಜೀವಿತಗಳಲ್ಲಿ ಒಂದನ್ನಾಗಿ ಭಾವಿಸತಕ್ಕಂತೆ ಅದಕ್ಕೆ ಪ್ರಾಶಸ್ತ್ರವನ್ನು ಂಟುಮಾಡಿದ ಸತ್ಕಾರಗಳ ಪೂರ್ಣಾಚರಣೆಗೆ ಇದೇ ಪ್ರಾರಂಭವೆನ್ನ ಬಹುದು. ಈ ಗ್ರಂಥದ ಪ್ರಾರಂಭದಲ್ಲಿ ರಾಮಮೋಹನನ ಜನ್ಮ ಕಾಲದಲ್ಲಿ ಈ ಹಿಂದೂ ದೇಶದ ಸ್ಥಿತಿಯು ಹೇಗಿದ್ದಿತೆಂಬುದನ್ನು ಸಂಕ್ಷೇಪವಾಗಿ ತಿಳಿಸಿರುವೆವು, ಈಗ ರಾಮಮೋಹನನು ಕಲ್ಕತ್ತೆಯಲ್ಲಿ ಮನೆಮಾಡಿಕೊಂಡಿದ್ದಾಗ ಇಲ್ಲಿಯ ಸಾಮಾಜಿಕ ಸ್ಥಿತಿಯು ಹೇಗಿದ್ದಿತೆಂಬು ದನ್ನು ಅವನ ಶಿಷ್ಯನೊಬ್ಬನಿಂದ ಪ್ರಚುರಿಸಲ್ಪಡುತ್ತಿದ್ದ 1865 ನೇ ಇಸವಿಯ ತತ್ವ ಬೋಧಿನಿ ಯೆಂಬ ಮಾಸಪತ್ರದ ನವಂಬರು ಸಂಚಿಕೆಯಲ್ಲಿ ಬರೆದ ಈ ಕೆಳಗಿನ ಅಂಶಗಳಿಂದ ತಿಳಿಯ ಬಹುದು, “ ರಾಮಮೋಹನನು ಕಲ್ಕತ್ತೆಗೆ ಬಂದಾಗ ಬಂಗಾಳರಾಜ್ಯ ದಲ್ಲೆಲ್ಲ ಮಖಳತ್ವ ವೆಂಬ ಗಾಢಾಂಧಕಾರವು ಕವಿದಿತ್ತು ; ಎಲ್ಲಿ ನೋಡಿದರೂ ವಿಗ್ರಹಾರಾಧನೆಯು ಪ್ರಬಲಿಸಿ ದ್ವಿತು ; ಪ್ರಜೆಗಳು ವೇದಗಳನ್ನೂ, ಕಲ್ಮಕಾಂಡವನ್ನೂ, ಉಪನಿಷತ್ತುಗಳನ್ನೂ, ಬ್ರಹ್ಮ ಜ್ಞಾನದಲ್ಲಿ ಆಸಕ್ತಿಯನ್ನೂ ಬಿಟ್ಟಿದ್ದರು ; ದುರ್ಗೆಯ ವಿಗ್ರಹಗಳಿದಿರಿಗೆ ಮೇಕೆಗಳನ್ನು ಬಲಿ ಕೊಡುವುದೂ, ಜಾತ್ರೆಗಳನ್ನು ಮಾಡಿ ಬಂಡಾರವನ್ನೆರಡುವುದೂ, ತಮ್ಮ ಪುಣ್ಯಸಾಧನಗ ಳೆಂದು ತಿಳಿಯುತ್ತಿದ್ದರು. ತೀರ್ಥಗಳಲ್ಲಿ ಸ್ನಾನ ಮಾಡುವುದೂ, ಸೋಂಬೇರಿಗಳಿಗೆ ದಾನ ಮಾಡುವುದೂ, ವ್ರತೋಪವಾಸಗಳನ್ನಾಚರಿಸುವುದೂ, ತಮ್ಮ ಕಾಮ್ಯಾರ್ಥಸಿದ್ಧಿಗೂ, ಮೋಕ್ಷಪ್ರಾಪ್ತಿಗೂ ಸಾಧನಗಳೆಂದು ನಂಬುತ್ತಿದ್ದರು, ಅನ್ನ ಪಾನಗಳಲ್ಲಿ ಎಷ್ಟು ಮಿತದಿಂ