ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ದಿದ್ದರೆ ಅಷ್ಟು ಪುಣ್ಯವೆಂತಲೂ, ಬದುಕಿರುವ ತನಕ ಸ್ವಂತವಾಗಿ ಅಡಿಗೆ ಮಾಡಿಕೊಳ್ಳುವವ ರಿಗೆ ಮತ್ತಷ್ಟು ಶ್ರೇಷ್ಠತ್ವ ಬರುವುದೆಂತಲೂ ತಿಳಿದಿದ್ದರು. ಇಂಗ್ಲೀಷರ ಬಳಿ ಉದ್ಯೋಗ ವೃತ್ತಿಯಲ್ಲಿರುವ ಬ್ರಾಹ್ಮಣರು ತಮ್ಮ ಮನೆಗೆ ಬಂದ ಒಡನೆಯೇ ಆ ಉಡುಪುಗಳನ್ನೊಂದು ಕಡೆಯಲ್ಲಿರಿಸಿ, ಸ್ನಾನ ಪೂಜಾದಿಗಳನ್ನು ಮಾಡದಿದ್ದರೆ ಪಾಪವಿಮುಕ್ತರಾಗಿ ಇತರರ ಸಂಪ ರ್ಕದಲ್ಲಿರಲು ಅನರ್ಹರೆಂದು ಭಾವಿಸಲ್ಪಡುತ್ತಿದ್ದರು, ಉದ್ಯೋಗಸ್ಥರಲ್ಲದೆ ಕುಕ್ಷಿಂಬರರಾದ ಬ್ರಾಹ್ಮಣರು ಉದ್ಯೋಗದಲ್ಲಿರುವ ದೊಡ್ಡ ಮನುಷ್ಯರ ಮನೆಗಳಲ್ಲಿ ಯಾವಾಗಲು ಹವ್ಯ ಕವ್ಯಗಳಲ್ಲಿ ತಮಗೆ ಹಣವನ್ನು ಕೊಡುವ ದಾತನಿಗೆ ವಣ್ಯ ಬರುವುದೆಂದು ಹೇಳಿ, ಹಣ ಸಂ ವಾದಿಸುತ್ತಾ ಮುಖಸ್ತುತಿಯನ್ನು ಮಾಡುತ್ತಾ, ತಮಗೆ ದಾನಮಾಡಿದವರು ಬಲಿಕರ್ಣರಿ ಗಿಂತಲೂ ಉದಾರಿಗಳೆಂದು ಹೊಗಳುತ್ತಾ, ತಾವು ಬೇಡಿದುದನ್ನು ಕೊಡದ ಉದ್ಯೋಗಸ್ಥ ರನ್ನು ಪ್ರತ್ಯಕ್ಷವಾಗಿ ಕೆಟ್ಟ ಮಾತುಗಳಿಂದ ಬೈಯುತ್ತಾ, ಭೂಣಹತ್ಯಾದಿ ಪಾಪಗಳನ್ನು ಮಾಡಿದ ಕೂರಯರಾದರೂ ತಮಗೆ ಸ್ವಲ್ಪ ಹಣ ಕೊಟ್ಟಲ್ಲಿ ತುಂಬಾ ಪರಿಶುದೈಯರೆಂದು ಹೇಳುತ್ತಾ, ವರ್ತಮಾನ ಪತ್ರಿಕೆಗಳಿಲ್ಲವೆಂಬ ಲೋಪಕ್ಕೆ ಅವಕಾಶವಲ್ಲದಂತೆ ಇಲ್ಲಿಯ ಮಾತು ಗಳನ್ನಲ್ಲಿಯ, ಅಲ್ಲಿಯ ಮಾತುಗಳಲ್ಲಿಯೂ, ಹೇಳಿ ಜನಗಳಲ್ಲಿ ಕಲಹಗಳನ್ನು ಹೆಚ್ಚಿಸುತ್ತಾ ಇದ್ದರು. ಇಂತವರ ಕೆಟ್ಟನಡತೆಗಳನ್ನು ಚೆನ್ನಾಗಿ ತಿಳಿದ ಬುದ್ದಿವಂತರು ಸದಾ ತಮ್ಮ ಕೀರ್ತಿ ಪ್ರತಿಷ್ಠೆ ಗಳಿಗೆ ಲೋಪವಾಗುವಂತೆ ಅವರು ಎಲ್ಲಿ ಏನು ಹೇಳುವರೋ ಎಂದು ಹೆದರಿ, ಈ ಅಪಾತ್ರರಿಗೆ ದಾನಮಾಡುತ್ತಲೇ ಇರುವರು, ಇವರಲ್ಲದೆ ಗುರುಗಳೆಂಬ ಮತ್ತೊಂದು ಬಗೆಯ ಜನರಿದ್ದರು, ಅವರ ಸ್ಥಿತಿಯು ಮತ್ತಷ್ಟು ನಿಂದ್ಯವಾಗಿದ್ದಿತು. ಮೋಕ್ಷ ಮಾ ರ್ಗವನ್ನುಪದೇಶಿಸುವೆವೆಂಬ ನೆವದಿಂದ ಪ್ರಜೆಗಳ ಧನವನ್ನೆಲ್ಲ ಅಪಹರಿಸಿ, ಅದರಿಂದ ತಾವು ಆನೆ, ಕುದುರೆ, ಪಲ್ಲಕ್ಕಿಗಳನ್ನು ಸಂಪಾದಿಸಿ, ತಮ್ಮ ಪಾದಗಳನ್ನು ತೊಳೆದ ಕೊಳೆ ನೀರನ್ನು ಕುಡಿದರೆ ಪಾಪ ಪರಿಹಾರವಾಗಿ ಮುತ್ತಿಯುಂಟಾಗುವುದೆಂದು ಹೇಳಿ ಕುಡಿಸುತ್ತಾ, ತಮ್ಮ ಪಾದಧೂಳಿಯನ್ನ ವರು ಕಣ್ಣುಗಳಿಗೆ ಒತ್ತಿಕೊಳ್ಳುವಂತೆ ಮಾಡಿ ದೇಶವನ್ನೆಲ್ಲ ಸುಲಿಯುತ್ತಿ ದರು, ಒಂದೆರಡು ನ್ಯಾಯಶಾಸ್ತ್ರಗಳನ್ನೋದಿದ ಮಾತ್ರದಿಂದಲೇ ಪಂಡಿತರೆಂಬ ಬಿರುದಿಗೆ ಅರ್ಹರಾಗುತ್ತಿದ್ದರು. ಇಂತವರಿಗೆ ಗಾಯತ್ರಿ ಎಂಬುದಿಂತದೆಂಬ ಜ್ಞಾನವೇ ಇರುತ್ತಿರಲಿಲ್ಲ. ಭಾಗ್ಯವಂತರು ತಮಗೆ ಅಗತ್ಯವಾದ ಲೆಕ್ಕ ಪತ್ರಗಳನ್ನು ಬರೆದುಕೊಳ್ಳಲಿಕ್ಕಿ೦ತ ಹೆಚ್ಚಾಗಿ ವಿದ್ಯಾರ್ಜನೆಯ ವಿಷಯದಲ್ಲಿ ಹೆಚ್ಚಾದ ಕೃಷಿ ಮಾಡಿದಲ್ಲಿ ಕಾಲವು ವ್ಯರ್ಥವಾಗಿ ಕಳೆದು ಹೋಗುವುದೆಂದು ಭಾವಿಸುತ್ತಿದ್ದರು. ರಾಜಕೀಯ ಭಾಷೆಗಳಾದ ಫಾರಿಷಿಯಲ್ಲಿಯಾಗಲಿ, ಇಂಗ್ಲೀಷಿನಲ್ಲಿಯಾಗಲಿ, ಒಂದೆರಡು ಪುಸ್ತಕಗಳನ್ನೋದಿದರೆ ತುಂಬಾ ಪ್ರಾಜ್ಞರೆಂದು ಎಣಿಸಲ್ಪಡುತ್ತಿದ್ದರು, ಬಂಗಾಳಿ ಭಾಷೆಯಲ್ಲಿ ಉಪಯುಕ್ತವಾದ ಗ್ರಂಥವೊಂದಾದರೂ ಕಾಣಬರಲಿ, ಎಲ್ಲಿಯಾದರೂ ಒಂದೆರಡು ದೊರೆತರೆ ಕೋಗಿಲೆಯ ಕೂಗಿಗೂ ಗಿಳಿಯನುಡಿ ಗಳಿಗೂ ಉಲಿಕಿಬೀಳುವ ನಾಯಿಕಾನಾಯಕರ ವಿರಹಗಳೂ, ಹಂಸಗಳ ರಾಯಭಾರಗಳ, ಪೂರ್ವಕವಿ ರಚಿತಗಳಾದ ಕೆಲವು ಚಂಪುಗ್ರಂಥಗಳು ಮಾತ್ರ ದೊರೆವುದೇ ಹೊರತು,