೩೫ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಪುರದ ಫಾದಿರಿಗಳಿಂದ ಪ್ರಚುರಿಸಲ್ಪಡುತ್ತಿದ್ದ “ಸಮಾಚಾರದರ್ಪಣ” ಎಂಬ ಬಂಗಾಳೀಭಾ ಪಾಪತ್ರಿಕೆಯ 1331ನೇ ಜುಲೈ 14ನೇ ತಾರೀಖಿನ ಪತ್ರಿಕೆಯಲ್ಲಿ ಹಿಂದೂಧರ್ಮಗಳನ್ನು ದೂ ಪಿಸುವ ಕೆಲವು ಪ್ರಶ್ನೆಗಳನ್ನು ಬರೆದು ಇದಕ್ಕೆ ಹಿಂದೂಮಹಾಸಂಘದವರಲ್ಲಿ ಯಾರಾದರೂ ಪ್ರತ್ಯುತ್ತರವನ್ನು ಕೊಡಬಹುದೆಂದು ಒಂದು ವ್ಯಾಸವು ಪ್ರಕಟಿಸಲ್ಪಟ್ಟಿತು, ಆಗ ಮತದ್ವೇ ಷವೇ ಪ್ರಧಾನವಾಗಿ ಉಳ್ಳ ಈ ಅಕ್ರಮಕಾರಕ್ಕೆ ಪ್ರತಿಭಟಿಸಿ ನಿಲ್ಲಲು ಸ್ವಜಾತಿಯವರೆಲ್ಲರಿ೦ ದಲೂ ವಿರೋಧಿಯಾಗಿ ಭಾವಿಸಲ್ಪಡುತ್ತಿದ್ದ ರಾಮಮೋಹನನೊಬ್ಬನು ಶಕ್ತನಾಗಿದ್ದುದರಿಂದ ಆ ಪ್ರಶ್ನೆಗಳಿಗೆಲ್ಲ ಮೃದುವಾಗಿ ಸದುತ್ತರಗಳನ್ನು ಬರೆದು ಮರಳಿ ಆ ಪತ್ರಿಕಾಧಿಪತಿಯ ಬಳಿಗೆ ಪ್ರಚುರಪಡಿಸಲಿಕ್ಕಾಗಿ ಕಳುಹಿಸಿದನು, ಆದರೆ ಅವರು ಅದನ್ನು ಮುದ್ರಿಸಲು ಒಪ್ಪದೆ ಹೋ ದರು. ಇದರಿಂದ ಹೊಸದಾಗಿ ಪ್ರಕಟಿಸಲ್ಪಡುತ್ತಾ ಇದುವರೆಗೆ ಎರಡು ಸಂಚಿಕೆಗಳು ಮಾತ್ರ ಹೊರಡಿಸಲ್ಪಟ್ಟಿದ್ದ 'ಟ್ರಾನಿಕಲ್ ಮೆಗರ್ಚಿ” ಎಂಬ ಮಾಸಪತ್ರಿಕೆಯಲ್ಲಿ ಈ ಖಂಡನೆಯ ನ್ನು ಪ್ರಕಟಿಸಿದನು. ಇದರಲ್ಲಿ ವೇದಾಂತ, ನ್ಯಾಯ, ಮಾಮಾಂಸಾ, ಪುರಾಣಗಳನ್ನು ಕುರಿತ ಆಕ್ಷೇಪಣೆಗಳಿಗೆಲ್ಲ ಸಹೇತುಕವಾಗಿ ಉತ್ತರ ಕೊಡಲ್ಪಟ್ಟುದಲ್ಲದೆ ಹಿಂದೂಮತದಲ್ಲಿನ ವಿಷಯಗಳು ಎಷ್ಟು ಮಟ್ಟಿಗೆ ಬುದ್ಧಿಗೆ ವಿರುದ್ದಗಳಾಗಿ ತೋರಿದರೂ, ಜೀಸಸನ ಜನ್ಮವನ್ನೂ, ಆತನ ದೈವತ್ವವನ್ನೂ, ಕುರಿತು ಹೇಳುವ ವಿಷಯಗಳಂತಹ ವಿಪರೀತಗಳಾಗಿಲ್ಲವೆಂದು ಸ್ಥಿರಸ ಡಿಸಿದನು, ಪಾದರಿಗಳು ಇದಕ್ಕೆ 'ಫ್ರೆಂಡ್ ಆಫ್ ಇಂಡ್ಯ” ಎಂಬ ಪತ್ರಿಕೆಯಲ್ಲಿ ಪ್ರತ್ಯು ತರವನ್ನು ಬರೆದರು. ಆದರ ಬ್ಯಾಡ್ಮಿನಿಕಲ್ ಮೆಗರ್ಜಿನಲ್ಲಿ ಮತ್ತೊಂದು ಪೂರ್ವಪಕ್ಷ ವ್ಯಾಸವನ್ನು ಶಿವಪ್ರಸಾದಶರನೆಂಬ ಹೆಸರಿನಿಂದ ಪ್ರಚುರಿಸಿ ಕೆಲವುದಿನಗಳ ತನಕ ನಿರೀಕ್ಷಿಸಿ ಪಾದಿರಿಗಳು ಉತ್ತರ ಕೊಡದೆ ಮೌನವಾಗಿದ್ದುದರಿಂದ ಅವರ ಆಕ್ಷೇಪಣೆಗಳನ್ನೂ ತನ್ನ ಪ್ರತ್ಯು ತರಗಳನ್ನೂ ಸೇರಿಸಿ ಇಂಗ್ಲಿಷ್ ಭಾಷಾನುವಾದದೊಡನೆ ಒಂದು ಸಂಪುಟದಲ್ಲಿ ಮುದ್ರಿಸಿದನು. 1823 ರಲ್ಲಿ ಸಣ್ಣದಾದರೂ ವಿಚಿತ್ರವಾದ ಒಂದು ಚರ್ಚೆ ನಡೆಯಿತು. ಆನರೆಬಿಲ್ ಈಸ್ಟಿಂಡಿಯಾ ಸಂಪೆನಿಯವರ ಉದ್ಯೋಗಸ್ಥನಾಗಿಯೂ, ಮತವಿಷಯಗಳಲ್ಲಿ ಅನೇಕ ಗ್ರಂಥ ಗಳನ್ನು ಬರೆದವನಾಗಿಯೂ, ಏಷ್ಯಾಟಿಕ್ ಸೊಸೈಟಿಯ ಸಾಮಾಜಿಕವಾಗಿಯೂ, ಮತಾಭಿ ಮಾನದಿಂದ ಯೇಸುಕ್ರಿಸ್ತನ ದೈವತ್ವವನ್ನು ನಂಬಿ ಯೂನಿಟೇರಿರ್ಯ ಮತದವರೆಲ್ಲರೂ ಅಧೋಗತಿಯನ್ನು ಹೊಂದುವರೆಂದು ತಿಳಿದವನಾಗಿಯೂ ಇದ್ದ ಡಾಕ್ಟರ್ ಟೈಲರ್ M. D. ಎಂಬುವನು ಯನಿಟೇರಿರ್ಯ ಮತಾಭಿಮಾನವನ್ನು ವಹಿಸಿದ್ದಕ್ಕಾಗಿ ರಾಮಮೋಹನನಲ್ಲಿ ಒಂದು ವಿಧವಾದ ದ್ವೇಷವನ್ನು ಹೊಂದಿ “ ಬೆಂಗಾಲ್ ಹರ್ಕಾರ್ ” ಎಂಬ ಪತ್ರಿಕೆಯ 1823 ನೇ ಮೇ 3 ನೇ ದಿನದ ಸಂಚಿಕೆಗೆ ರಾಮಮೋಹನನನ್ನು ಹಲವು ಬಗೆಗಳಿಂದ ಆಕ್ಷೇ ಪಿಸಿ ತನ್ನ ಅಸಮ್ಮತವನ್ನು ಹೊರಪಡಿಸಿ ಒಂದು ಪತ್ರ ಬರೆದನು, ರಾಮಮೋಹನನು ಅದನ್ನು ನೋಡಿ “ ಯೇಸುವೇ ದೈವವೆಂದು ತಿಳಿದು, ಆತನು ಜನರ ಪಾಪಗಳಿಗೆ ಬದಲಾಗಿ ತನ್ನ ಪ್ರಾಣಗಳನ್ನು ಕೊಟ್ಟನೆಂದು ನಂಬಿ, ತಮಗೆ ಅದೇ ಪವಿತ್ರವೆಂದು ತಿಳಿದು, ತೃಪ್ತಿ ಪಡುವ ಕ್ರಿಸ್ತೀಯರೂ, ಅವತಾರ ಪುರುಷನನ್ನು ಪೂಜಿಸುವುದೂ, ಮನ್ಯಾದಿಗಳನ್ನು ಸ್ತುತಿ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.