೩೬ - ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಸುವುದೂ, ತಮ್ಮ ಮುಕ್ತಿಗೆ ಪರಮಸಾಧನಗಳೆಂದು ಭಾವಿಸುವ ಹಿಂದುಗಳೂ ಸಮಾನ ರಾಗಿ ಗರ್ಹಿತರೇ ಸರಿ” ಎಂಬುದೇ ತನ್ನ ಅಭಿಪ್ರಾಯವೆಂದು ಉತ್ತರ ಬರೆದು ಪ್ರಚುರ ಪಡಿಸಿದನು. ಟೈಲರು ಈ ಲೇಖನವನ್ನು ನೋಡಿ, ಬಹಳವಾಗಿ ಸಿಟ್ಟುಗೊಂಡು “ ಬೈಬಿಲಿ ನೊಳಗಣ ಪವಿತ್ರಾಂಶಗಳಿಗೆ ವಿಪರೀತಾರ್ಧವನ್ನು ಗ್ರಹಿಸಿದ ಯೂನಿಟೇರಿರ್ಯ ಮತಾಭಿ ಮಾನಿಯಾದ ಒಬ್ಬ ಹಿಂದುವು ನಮ್ಮ ಹಿರಿಯರಕಾಲದಿಂದಲೂ ನಾವು ಪ್ರಮಾಣವೆಂದು - ಭಾವಿಸರುವ ಸತ್ಯಧರ್ಮಗಳನ್ನು ತಿರಸ್ಕರಿಸುತ್ತಿರುವನು. ಅವನ ಅಜ್ಞಾನಾಂಧಕಾರ ವನ್ನು ನನ್ನ ಸತ್ಯವಾದವೆಂಬ ಸೂದ್ಯೋದಯದಿಂದ ತೊಲಗಿಸುವುದಕ್ಕಾಗಿ ಒಂದು ದೊಡ್ಡ ಸಭೆ ಸೇರಿಸಬೇಕೆಂದು ಪ್ರಾರ್ಥಿಸುವೆನು, ಕ್ರಿಸ್ತಮತಾಭಿಮಾನಿಗಳಾದ ವಾಚಕರೇ ! ನೀವು ಗಳೆಲ್ಲರೂ ಈ ಪ್ರಯತ್ನಕ್ಕೆ ಸಹಾಯಕರಾಗಿರಿ ” ಎಂದು ಬರೆದು ತನ್ನ ದ್ವೇಷವನ್ನು ಹೊರಪಡಿಸಿದನು, - ಇಂತಹ ಚರೈಗಳಿಗೆ ರಾಮಮೋಹನನು ಎಷ್ಟು ವಿವೇಕದಿಂದ ನಡೆದುಕೊಳ್ಳುವೆನೆಂ ಬುದನ್ನು ವಾಚಕರು ಇದುವರೆಗೇ ತಿಳಿದಿರುವರು. ಇವನು ಟೈಲರ್ ಬರೆದುದನ್ನು ನೋಡಿ, ಇದರ ಪರವಸಾನವು ಹೇಗೆ ಆಗುವುದೋ ನೋಡೋಣವೆಂದು ಯೋಚಿಸಿ, ಮೊದಲು ಟೈ ಲರ್ ಮೇ 3 ರಲ್ಲಿ ಪ್ರಕಟಿಸಿದ ಪತ್ರದ ಆಧಾರದಮೇಲೆ ರಾಮದಾಸನೆಂಬ ನಾಮಾಂತರ ದಿಂದ ಇದರಡಿ ಬರೆದಂತೆ ಒಂದು ಉತ್ತರವನ್ನು ಬರೆದು ಪ್ರಚುರಗೊಳಿಸಿದನು. ನಮ್ಮಿಂದ ಬರೆಯಲ್ಪಟ್ಟ ಮೇ 3 ನೇ ತಾರೀಖಿನ ಬೆಂಗಾಲ ಹರ್ಕಾರ' ಪತ್ರಿಕೆಯ ವ್ಯಾಸವನ್ನು ನೋಡಿ ಅದರಲ್ಲಿ ರಾಮಮೋಹನನನ್ನು ಹಿಂದುವೆಂದು ಭ್ರಮಿಸಿ ನಿಮ್ಮ ಮನ ಸ್ಟು ಬಂದಂತೆ ಆತನ ಮತವನ್ನು ದೂಷಿಸಿರುವುದಕ್ಕಾಗಿ ತುಂಬಾ ವಿಷಾದಿಸುತ್ತೇನೆ, ನಿಜ ವಾಗಿ ವಿಚಾರಮಾಡಿ ನೋಡಿದರೆ ಕ್ರಿಸ್ತೀಯರೂ ಹಿಂದುಗಳೂ ದೇವರು ಮನುಷ್ಯಾವತಾರವ ನೈತಿದನೆಂಬುವುದನ್ನು ಒಪ್ಪಿಕೊಳ್ಳತಕ್ಕವರಾಗಿದ್ದಾರೆ. ಆದುದರಿಂದ ಸಾಮಾನ್ಯವಾಗಿ ಈ ಎರಡು ಮತಗಳೂ ಕೆಲವು ಸಿದ್ದಾಂತ ಭೇದಗಳಲ್ಲಿ ಹೊರತು ಉಳಿದ ಮುಖ್ಯ ವಿಷಯಗಳಲ್ಲಿ ಒಂದೇ ಅಭಿಪ್ರಾಯವುಳ್ಳವುಗಳಾಗಿವೆ. ದೇವರು ಮನುಷ್ಯ ಶರೀರದಲ್ಲಿ ಅವತರಿಸಿದನೆಂಬ ಮಾತು ಸ್ವಲ್ಪವೂ ವಿಶ್ವಾಸಾರ್ಹವಲ್ಲವೆಂದು ವಾದಿಸುವ ಯೂನಿಟೇರಿರ್ಯ ಮತಾಭಿಮಾನಿ ಯಾದ ರಾಮಮೋಹನನು ನಿಜವಾಗಿಯೂ ಪೂರೋಕ್ತ ಮತಗಳೆರಡಕ್ಕೂ ವಿರೋಧಿಯಾಗಿ ರುವನೆಂಬುದಕ್ಕೆ ಸಂದೇಹವೇನು ? ರಾಮಮೋಹನನನ್ನು ಸೋಲಿಸುವುದೇ ನಿಮ್ಮ ಮು ಜ್ಯೋದ್ದೇಶವಾಗಿದ್ದಲ್ಲಿ ಹಿಂದುಗಳನ್ನು ಆಕ್ಷೇಪಿಸುವುದಕ್ಕೆ ಬದಲಾಗಿ ಉಭಯಮತಗಳ ಪ್ರ ಥಮ ಪೀಠಿಕೆಯೊಂದೇ ಎಂದು ತಿಳಿದುಕೊಂಡು ಇದಕ್ಕೆ ಮೊದಲುಮಾಡಿದ ತಪ್ಪುಗಳಿಗೆ ಕ್ಷ ಮೆಯನ್ನು ಬೇಡಿ, ನಿಮ್ಮ ಪಕ್ಷವು ಬಲವಾಗಲಿಕ್ಕಾಗಿ ಆತನನ್ನು ನಿಮ್ಮೊಂದಿಗೆ ಸೇರಿಸಿಕೊಂ ಡರೆ ಯುಕ್ತವಾಗಿರುವುದೆಂದು ನಿಮಗೆ ಸೂಚಿಸುತ್ತೇನೆ. ಈ ಲೇಖನವನ್ನು ಪ್ರಚುರಪಡಿಸುವುದಕ್ಕೆ ಬೆಂಗಾಲ್ ಹರ್ಕಾರ್' ಪತ್ರಿಕೆಗೆ ಕಳುಹಿಸಿ ದನು. ಆ ಪತ್ರಿಕಾಧಿಕಾರಿಯು ಕ್ರಿಸ್ತಿಯನಾಗಿದ್ದು ದರಿಂದ ಇದನ್ನು ಪ್ರಕಟಿಸಲು, ಒಪ್ಪ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.