ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧ ರಾಜಾ ರಾಮಮೋಹನರಾಯರ ಜೀವಿತ ಕರಿತ್ರ. ಆತ್ಮೀಯ ಸಭೆಗೆ ವಿರೋಧವಾಗಿ ಚರ್ಚಿಸುವುದಕ್ಕೆ ಒಂದು ದೊಡ್ಡ ಸಭೆ ಸೇರಿತು. ಆ ಸಭೆಗೆ ಕಲ್ಕತ್ತೆಯಲ್ಲಿರುವ ಪಂಡಿತರು ಮಾತ್ರವಲ್ಲದೆ ಸುತ್ತು ಮುತ್ತಿನ ಗ್ರಾಮಗಳಲ್ಲಿನ ವಿದ್ವಾಂಸರು ಸುದಾಬಂದರು. ಬ್ರಹ್ಮಸಮಾಜವನ್ನು ಮುಕ್ತಾಯಮಾಡುವ ಬುದ್ದಿ ಯಿಂದ ಈ ಸಭೆಗೆ ರಾಜಾರಾಧಾಕಾಂತದೇವನೆಂಬಾತನು ಪ್ರಮುಖನಾಗಿದ್ದು ದೊಡ್ಡ ದೊಡ್ಡ ಪಂಡಿತರನ್ನೂ, ಭಟ್ಕಾಚಾರರನ್ನೂ ಕರೆಯಿಸಿದನು, ಆದರೆ ದೈವಬಲವಿದ್ದಲ್ಲಿ ನ್ಯಾಯಕ್ಕೆ ಎಲ್ಲಿಯೂ ಪರಾಜಯವಿಲ್ಲವಷ್ಟೆ ! ರಾಮಮೋಹನನು ಬಹು ಚಾತುರದಿಂದ ವಾದಿಸಿ ಅವರನ್ನೆಲ್ಲಾ ಸೋಲಿಸಿದನು. ವಿವಾದಕ್ಕಾಗಿ ಸೇರಿದ ಪಂಡಿತರಲ್ಲಿ ಸುಬ್ರಹ್ಮಣ್ಯ ಶಾಸ್ತಿ ಎಂಬವನು ಬಂಗಾಳಾದಲ್ಲಿ ಈಗ ನಿಜವಾಗಿ ಬ್ರಾಹ್ಮಣರೆಂಬ ಹೆಸರಿಗೆ ಅರ್ಹರಾ ದವರು ಯಾರೂ ಇಲ್ಲದುದರಿಂದ ಇವರಿಗೆ ವೇದಪಾತಕ್ಕೆ ಅಧಿಕಾರವೇ ಇಲ್ಲವೆಂದು ಹೇಳಿ ದನು. ಇದನ್ನು ಕೇಳಿದ ಪಂಡಿತರೆಲ್ಲರೂ ಮನವಾಗಿ ಕುಳಿತಿದ್ದರು, ರಾಮಮೋಹನನು ಆ ವಿಷಯವನ್ನು ತತ್‌ಕ್ಷಣವೇ ಖಂಡಿಸಿದನು. ಈ ಸಂತೋಷಕರವಾದ ರಾಮಮೋಹನನ ವಿಜಯವೆಂಬುದು ಅವನ ಪ್ರತಿಪಕ್ಷದ ವರ ಹೃದಯದ ದ್ವೇಷಾಗ್ನಿ ಯನ್ನು ಮತ್ತಷ್ಟು ಬಿರಿಗೊಳಿಸಿತು. ಅವರು ರಾಮಮೋ ಹನನ ಸಹೋದರರ ಮಕ್ಕಳಿಗೆ ಬೋಧಿಸಿ, ಇವನು ಧರ್ಮ ಬಾಹ್ಯನಾಗಿರುವುದರಿಂದ ಇವನಿಗೆ ಪಿತ್ರಾರ್ಜಿ ತದ ಆಸ್ತಿಯಲ್ಲಿನ ಹಕ್ಕನ್ನು ತೊಲಗಿಸಬೇಕೆಂದು ಸೂಪ್ರೀಂ ಕೋರ್ಟಿನಲ್ಲಿ ವ್ಯಾಜ್ಯ ಹೂಡಿದರು, ಮತ್ತು ವರ್ಧಮಾನದ (ಬರದ್ಯಾ೯) ಜರ್ಮೀಾದಾರನಾದ ತೇಜಚಂದ್ ಎಂಬವನು ಕೂಡ ಆಗಲೇ ಕತ್ತಿಯ ಪ್ರೊರ್ವಿಷಯಲ್ ಕೋರ್ಟಿನಲ್ಲಿ ಕಾಮಕಾಂತರಾ ಯನು ತನಗೆ ಸಾಲಕೊಡಬೇಕಾಗಿತ್ತು ಎಂತಲೂ ಅವನ ಆಸ್ತಿಯನ್ನು ಅನುಭವಿಸುತ್ತಿರುವ ಆತನ ಮಕ್ಕಳಲ್ಲಿ ಇವನ ಪಾಲಿಗೆ ಬಂದ ಹಣವನ್ನು ಕೊಡಿಸಿಕೊಡಬೇಕೆಂತಲೂ ದಾವಾ ಮಾಡಿದನು, ಪೂರ್ವ ಮತಾಚಾರಗಳಿಗೆ ವಿರುದ್ಧವಾಗಿ ಈತನು ವರ್ತಿಸುತ್ತಿರುವನೆಂಬ ಈರ್ಸ್ಯೆಯಿಂದಲೇ ಈ ವ್ಯಾಜ್ಯವು ತರಲ್ಪಟ್ಟಿತು,

  • ರಾಮಮೋಹನನು ಈ ತೊಡಕುಗಳನ್ನು ತಕ್ಕ ಜಾಗ್ರತೆಯಿಂದ ತಪ್ಪಿಸಿಕೊಂಡನು. ಅಣ್ಣನ ಮಕ್ಕಳಿಂದ ತರಲ್ಪಟ್ಟ ಅಭಿಯೋಗಕ್ಕೆ ತಾನು ಹಿಂದೂಧರ್ಮವನ್ನ ತಿಕ್ರಮಿಸಿ ನಡೆ ಯುವುದಿಲ್ಲವೆಂದು ಹಲವು ದೃಷ್ಟಾಂತಗಳಿಂದ ಸಾಧಿಸಿದನು. ತೇಜಚಂದನೊಂದಿಗೆ ಒಡಂ ಬಡಿಕೆ ಮಾಡಿಕೊಂಡನು, ಆದರೂ ಈ ತೊಂದರೆಗಳಿಂದ ರಾಮಮೋಹನನಿಗೆ ಧನವ್ಯಯ ವೂ, ಪ್ರಯಾಸವೂ ಆದುವು. ಇತರ ಕೆಲಸಗಳನ್ನು ಕ್ರಮಪಡಿಸಿಕೊಂಡು, ಈ ಸಭೆಯ ವಿಷಯದಲ್ಲಿ ಹೆಚ್ಚು ಶ್ರದ್ದೆಯನ್ನು ವಹಿಸುವುದಕ್ಕೆ ಎರಡು ವರ್ಷಗಳ ತನಕ ಅವಕಾಶವಾ 'ಗಲಿಲ್ಲ.

ಆದರೂ ಈ ವಿಷಯವಾಗಿ ಮತ್ತೊಂದು ಬಗೆಯಲ್ಲಿ ಸ್ವಲ್ಪ ಕೆಲಸ ಮಾತ್ರ ಜರುಗು ತಿದ್ದಿತು, ಪಾದಿರಿ ಕೆಲಸವನ್ನು ಬಿಟ್ಟುಬಿಟ್ಟು ಯೂನಿಟೀರಿರ್ಯ ಮತದಲ್ಲಿ ಸೇಲ ಪತ್ರಿ ಕಾಧಿಪತಿಯಾಗಿದ್ದ ಆಡಂದೊರೆಯಿಂದ ಯೂನಿಟೇರಿರ್ಯ ಸೊಸೈಟಿ ಎಂಬ ಹೆಸರಿನಿಂದ ಏಕ