ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ದೇವಾರಾಧನೆಗಾಗಿ ಒಂದು ಸಮಾಜವೇರ್ಪಡಿಸಲ್ಪಟ್ಟಿತು, ರಾಮನಾರಾಯಣನು ಈ ಸಮಾಜವನ್ನು ಏರ್ಪಡಿಸುವುದಕ್ಕಾಗಿ ಸ್ವಲ್ಪ ಸಹಾಯಮಾಡಿ ತನ್ನ ಮಕ್ಕಳು, ಬಂಧುಗಳು, ಶಿಷ್ಯರು, ಇವರೊಡನೆ ಪ್ರಾರ್ಧೆನಾಲಯಕ್ಕೆ ಹೋಗಿ ಪ್ರಾರ್ಥನೆ ಮಾಡುವವರ ಜತೆಯಲ್ಲಿ ಸೇರುತ್ತಿದ್ದನು. ಒಂದುಸಾರಿ ಸಮಾಜಕ್ಕೆ ಹೋಗಿ ಬರುತ್ತಿರುವಾಗ ಮಧ್ಯಮಾರ್ಗ ದಲ್ಲಿ ಹಿಂದೆ ಇದ್ದ ತಾರಾಚಂದ್ ಚಕ್ರವರ್ತಿ, ಚಂದ್ರಶೇಖರದೇವ ಎಂಬಿಬ್ಬರು ಶಿಷ್ಯರು ರಾಮ ಮೋಹನನೊಂದಿಗೆ ನಾವು ವಿದೇಶೀಯರ ಉಪಾಸನಮಂದಿರಕ್ಕೆ ಹೋಗಿ ಪ್ರಾರ್ಥನೆ ಮಾಡ ಅಕ್ಕಿಂತ ಪ್ರತ್ಯೇಕವಾಗಿ ನಾವೇ ಒಂದು ಧ್ಯಾನಗೃಹವನ್ನು ಏರ್ಪಡಿಸಿಕೊಳ್ಳುವುದು ಉತ್ತ ಮವೆಂದು ಹೇಳಿದರು, ಅದಕ್ಕೆ ರಾಮಮೋಹನನು ಸಂತೋಷಿಸಿ, ಆ ವಿಷಯವನ್ನು ಕುರಿ ತು ಒ ಒ ದ್ವಾರಕಾನಾಧಾಕರ್, ರಾಯಕಾಳೇನಾಧ ಮುನ, ಪ್ರಸನ್ನ ಕುಮಾರಠಾ ಕೂರ್‌ ಮೊದಲಾದವರೊಂದಿಗೆ ಆಲೋಚಿಸಲು ಅವರೆಲ್ಲರೂ ಈ ಕಾರಕ್ಕೆ ಕೈಯಲ್ಲಾದ ಮಟ್ಟಿಗೆ ಸಹಾಯಮಾಡುತ್ತೇವೆಂದು ಹೇಳಿದರು. ತರುವಾಯ ಒಂದು ಸಭೆ ಸೇರಿಸಿ ಅದ ರಲ್ಲಿ ಸಮಾಜಸ್ಥಾಪನೆಯ ವಿಷಯವನ್ನು ನಿರ್ಣಯಿಸಿದನು, ಪ್ರಧಮದಲ್ಲಿ ಸ್ಥಳವನ್ನು ಕಂಡು ಕೊಳ್ಳಲು ಯತ್ನಿಸಿದರು, ಆದರೂ ಆವೇಳೆಗೆ ಸರಿಯಾಗಿ ಅದು ಸಿಕ್ಕದೆ ಹೋದು ದರಿಂದ ತತ್ಕಾಲದಲ್ಲಿ ಒಂದು ವಿಸ್ತಾರವಾದ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು 1828 ರಲ್ಲಿ ಉಪಾಸನ ಸಭೆಯನ್ನು ಸ್ಥಾಪಿಸಿದರು, ಎರಡು ವರ್ಷಗಳಲ್ಲಿಯೇ ತುಂಬ ಹಣ ಕೂಡಿದ್ದರಿಂದ ಚಿತ್ಪುರದ ರಸ್ತೆಯಹತ್ತಿರ ಸ್ವಲ್ಪ ಭೂಮಿಯನ್ನು ಕ್ರಯಕ್ಕೆ ಕೊಂಡುಕೊಂಡು, ಅಲ್ಲಿ ಸಮಾಜಮಂದಿರವನ್ನು ಕಟ್ಟಿಸಿ ಮಾಘ ಶುದ್ಧ ೧೧ನೇ ದಿನ ಆ ಮಂದಿರದಲ್ಲಿ ಸಮಾಜಸ್ಥಾಪನೋತ್ಸವವನ್ನು ನಡಿಸಿದರು. ಅಂದಿನಿಂದಲೂ ಈದಿನವು ಬ್ರಹ್ಮ ಮತಾವಲಂಬಿಗಳಿ೦ದ ಬಹು ಸಂತೋಷ ದಿನವಾಗಿ ಭಾವಿಸ ಲ್ಪಡುತ್ತದೆ, ಮತ್ತು ಈ ಧರ್ಮವನ್ನು ಬೆಳಸಿದ ಪ್ರತಿಯೊಂದು ಸ್ಥಳದಲ್ಲಿಯ ಈ ಹಬ್ಬದ ದಿವಸದಲ್ಲಿ ಇದುವರೆಗೂ ಸಂತೋಷೋತ್ಸವವನ್ನು ನಡಿಸುತ್ತಿರುವರು. ಬ್ರಹ್ಮ ಸಮಾಜವನ್ನು ಕುರಿತು ರಾಮಮೋಹನನ ಮುಖ್ಯ ಅಭಿಪ್ರಾಯವು ಹೇಗಿರ ಬಹುದೆಂದು ಜನರು ಸಂದೇಹ ಪಡಬಹುದು. ಆ ಸಂದೇಹಗಳನ್ನು ಮರು ಪ್ರಶ್ನೆಗಳಿಂದ ತಿಳಿಸಿ, ಅದಕ್ಕೆ ಉತ್ತರಗಳನ್ನು ವಿಚಾರ ಮಾಡೋಣ, ಅವುಗಳಲ್ಲಿ ಮೊದಲನೆಯದು ಈ ಉಪಾಸನ ಮಂದಿರದಲ್ಲಿ ಯಾವ ದೇವರ ಪೂಜೆ ನಡೆಯುವುದು ? ಎರಡನೆಯದು ಪೂಜೆ ಯನ್ನು ಮಾಡುವವರು ಯಾರು ? ಮೂರನೆಯದು ಉಪಾಸನೆ ಮಾಡುವ ಮಾರ್ಗ ಯಾವುದು ? ಇವೇ. (1) ಯಾವ ದೇವತೆ ಪೂಜಿಸಲ್ಪಡುವುದು ? ಬ್ರಹ್ಮಾಂಡವನ್ನು ಸೃಷ್ಟಿಸಿ, ಲಯ ವನ್ನು ಹೊಂದಿಸತಕ್ಕವನಾಗಿಯೂ, ಆದ್ಯಂತರಹಿತನಾಗಿಯ ಸಾಮಾನ್ಯ ಬುದ್ದಿಗೆ ಗೋ ಚರಿಸದವನೂ ಯಾವ ಮಾರ್ಪಾಡುಗಳೂ ಇಲ್ಲದವನೂ, ಆದ ಈಶ್ವರನು ಪೂಜಿಸ ಲ್ಪಡುವನು.