ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪. ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ ಹಾಸಗಳನ್ನು ಓದಿನೋಡಿದರೆ ಅವರು ಯಾವುದಾದರೂ ಒಂದು ಮುಖ್ಯ ವಿಷಯವನ್ನು ತಮ್ಮ ಮನಸ್ಸಿನಲ್ಲಿಟ್ಟು ಕೊಂಡು ಕೆಲಸಮಾಡುತ್ತಿದ್ದರೆಂತಲೂ, ಅವರ ಜೀವಿತ ಕಾಲದಲ್ಲಿ ಅದೇ ಮಾರ್ಗ ದರ್ಶನವಾಗಿತ್ತೆಂತಲೂ ಸ್ಪಷ್ಟ ಪಡುವುದು, ಉಪನಿಷತ್ಯಾಗ ಕನು 'ಆತ್ಮದ ಮೂಲಕ ಪರಮಾತ್ಮನನ್ನು ನೋಡಬಹುದು' ಎಂಬಥ ವನ್ನು ಹೊರಪಡಿಸಿದನು. ಗೌತಮ ಬುದ್ಧನು “ಸಮಸ್ಯ ಪ್ರಪಂಚವನ್ನೂ ಪ್ರೇಮದಿಂದ ನೋಡು' ಎಂದು ಉಪದೇಶಿಸಿದನು, ಶುಕ್ರಾತೀ ಎಂಬ ಮಹಾತ್ಮನು (ನಿನ್ನನ್ನು ನೀನು ತಿಳಿದುಕೋ' ಎಂದು ಬೋಧಿಸಿದನು, ಜೇನಸಸ್ಸು ಈ ಪ್ರಪಂಚವೇ ಸ್ವರ್ಗವಾಗಬೇಕು' ಎಂದುಸುರಿದನು. ಮಹಮ್ಮ ದನು ' ಅದ್ವಿತೀಯನೆಂದು ದೇವನನ್ನು ಉಪಾಸಿಸು' ಎಂದು ಹೇಳಿದನು, ಲೂಥರನೆಂಬ ತತ್ವಜ್ಞಾನಿಯು ತನ್ನ ಮತವನ್ನು ತಿಳಿದುಕೊಳ್ಳಲು ಮನುಷ್ಯನಿಗೆ ಪೂರ್ಣ ವಾದ ಸ್ವಾತಂತ್ರವಿರಬೇಕು' ಎಂದು ಬೋಧಿಸಿದನು. ಚೈತನ್ಯ ಮಹಾರಾಜನು • ಭಕ್ತಿಯೇ ಮುಕ್ತಿಗೆ ಸಾಧನ' ವೆಂದು ಹೇಳುತ್ತಿದ್ದನು. ಥಿಯೋರ್ಕ ಪಾರ್ಕರೆಂಬುವನು 'ಮನುಷ್ಯನ ಜ್ಞಾನವು ಚೆನ್ನಾಗಿ ವೃದ್ಧಿಯಾಗಬೇಕು' ಎಂದು ತಿಳಿಸಿದನು. ಹೀಗೆಯೇ ಈ ಲೋಕದಲ್ಲಿರುವ ಎಲ್ಲಾ ಜಾತಿಯವರೂ ಕಲೆತು ಒಂದೇ ಸ್ಥಳದಲ್ಲಿ ಪ್ರಾರ್ಥನೆ ಮಾ ಡುತ್ತಿರಬೇಕೆಂಬುವುದೇ ರಾಮಮೋಹನನ ಇಷ್ಟವಾಗಿದ್ದಿತು, ಇದರಿಂದಲೇ ಆತನು ಬ್ರಹ್ಮ ಸಮಾಜವನ್ನು ಸ್ಥಾಪಿಸಿದನು. ಇದಕ್ಕಿಂತ ಮುಂಚೆ ಯಾರಾದರು ಈ ವಿಷಯವನ್ನು ಮುಂದಕ್ಕೆ ತಂದಿರಲಿಲ್ಲ, ಆದುದರಿಂದ ನಿಜವಾಗಿಯೂ ಇದೊಂದು ಹೊಸಕಾಧ್ಯವೇ ಎಂದು ಹೇಳಲಿಕ್ಕೆ ಅಡ್ಡಿ ಇಲ್ಲವು. ಸಮಾಜವು ಏರ್ಪಟ್ಟು ನಿಯಮಾನುಸಾರವಾಗಿ ಬ್ರಹ್ಮ ಜ್ಞಾನ ಪೂಜಾದಿಗಳು ನಡಿ ಯುತ್ತಿರುವುದನ್ನು ನೋಡಿ ಗುಣಜ್ಞರಾದ ಕೆಲವರು ಬುದ್ಧಿಶಾಲಿಗಳು ಈ ವಿಷಯದ ಗ್ರಂಧಗಳನ್ನೂ, ರಾಮಮೋಹನನ ಶಿಷ್ಯರಿಂದ ರಚಿಸಲ್ಪಟ್ಟ ವುಸ್ತಕಗಳನ್ನೂ, ಓದಿ ಇದರಲ್ಲಿ ಸೇರಿದರು. ಈ ನೂತನ ಮತವು ವಿದ್ಯಾವಂತರಾದ ಯವ್ವನಸ್ಥರ ಹೃದಯ ವನ್ನು ಬಹಳವಾಗಿ ಆಕರ್ಷಿಸಿತು. ಇದರಿಂದ ಪ್ರತಿಮನೆಯಲ್ಲಿಯೂ ತಂದೆಯದೊಂದು ಮತ ಮಗನದೊಂದುಮತವಾಗಿ ಏರ್ಪಟ್ಟಿತು. ಆಗ (ುಟ್ಟೋಪವೀತ ತಿರಸ್ಕಾರ, ಇತರಮತಗಳವರೊಂದಿಗೆ ಸಂಬಂಧ, ಬಾಂಧವ್ಯ, ಮೊದಲಾದ ಮತವಿರುದ್ಧ ಕೃತ್ಯಗಳನ್ನು ಮಾಡಿದವರನ್ನು ಮತದಿಂದ ಬಹಿಷ್ಕರಿಸುತ್ತಿದ್ದ ಹಾಗೆಯೇ ಬ್ರಹ್ಮ ಸಮಾಜದಲ್ಲಿ ಸೇರಿದವ ರನ್ನು ಸುದಾ ಬಹಿಷ್ಕರಿಸುವಕಾಲವು ಬಂದಿತು. ಬಂಗಾಳದಲ್ಲಿನ ಪೂರ್ವಾಚಾರಪರಾ ಯಣರೆಲ್ಲರೂ ಒಂದಾಗಿ ಬ್ರಹ್ಮ ಜ್ಞಾನ ಸಂಪಾದನೆಯು ಆವಶ್ಯಕವೆಂತಲೂ, ವಿಗ್ರಹಾ ರಾಧನೆಯು ನಿಷಿದ್ದ ಕಾರವೆಂತಲೂ ಉಪನ್ಯಾಸಗಳನ್ನು ಮಾಡುತ್ತಲೂ ಗ್ರಂಥಗಳನ್ನು ಬರೆಯುತ್ತಲೂ ಇದ್ದ ರಾಮಮೋಹನನು ಈಗ ತನ್ನ ಅಭಿಪ್ರಾಯಗಳನ್ನು ಕ್ರಮವಾಗಿ ಬದಲಾಯಿಸುತ್ತಿರುವನೆಂತಲೂ, ಇಷ್ಟರಿಂದ ತೃಪ್ತನಾಗದೆ ಸಹಗಮನವು ನಿಷೇಧಿಸಲ್ಪಡ ತಕ್ಕದ್ದೆಂದು ಬಲವಾಗಿ ವಾದಿಸಲಾರಂಭಿಸಿರುವನೆಂತಲೂ ಬರುತ್ತ ಬರುತ್ತ ವಿದ್ಯಾರ್ಥಿ