ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ ಶಾಜಾ ರಾಮಮೋಹನರಾಯರ ಜೀವಿತ ಚರಿತ್ರೆ. () ಪೂಜೆಮಾಡತಕ್ಕವರು ಯಾರು ? ಯಾವ ಮನುಷ್ಯನು ಸತ್ಯವಾಗಿಯ ಮನಃಪೂರ್ವಕವಾಗಿಯೂ ಈಶ್ವರನನ್ನು ಉಪಾಸಿಸಲಿಕ್ಕೆ ಬರುವನೋ ಅವನಿಗೋಸ್ಕರ ವಾಗಿಯೇ ರಾಮಮೋಹನನ ಉಪಾಸನ ಮಂದಿರವು ತೆರೆಯಲ್ಪಟ್ಟಿರುವುದು, ಅದರಲ್ಲಿ ಕುಲ, ಮತ, ಸಂಘ ಸಂಬಂಧ ಭೇದಗಳು, ಸ್ವಲ್ಪ ತ್ಯಾಧಿಕ್ಯಗಳು, ಎಣಿಸಲ್ಪಡಲಾರವು ಯಾವ ಸಂಘದವರಿಗಾದರೂ ಯಾವಕುಲದವರಿಗಾದರೂ ಯಾವ ಮತಾವಲಂಬಿಗಳಿಗಾ ದರೂ ಮೇಲಣ ಸಮಾಜದಲ್ಲಿ ಸೇರಿ ಉಪಾಸನೆ ಮಾಡಲಿಕ್ಕೆ ಅಧಿಕಾರವಿರುವುದು, (3) ಪೂಜಿಸುವ ಮಾರ್ಗ ಯಾವುದು ? ಯಾವವಿಧವಾದ ಬೊಂಬೆಗಳಾಗಲಿ ಪ್ರತಿಬಿಂಬಗಳಾಗಲಿ, ಕಲ್ಪಿತವಿಗ್ರಹಗಳಾಗಲೀ ಇಲ್ಲಿ ಬಳಸಲ್ಪಡುವುದಿಲ್ಲ, ಇಲ್ಲಿ ಪೂಜೆ ಗಾಗಿ ಸಕ್ಕರೆ ಮೊದಲಾದವೂ, ಮಾಂಸಾಹಾರಗಳೂ, ಬಲಿಗಳೂ, ಭೋಜನ ಪಾನೀಯ ವಸ್ತು ವರ್ಗಗಳೂ, ಮಧುವೂ ಪ್ರಸಾದಗಳೂ, ಬಾಲಭೋಗಗಳೂ ಯಾವುವೂ ಇಲ್ಲಿ ಇಲ್ಲವು. ಇತರ ಮತಗಳವರಾಗಲಿ ಮಾಡುವ ಪೂಜಾ ವಿಷಯಗಳಲ್ಲಿ ದ್ವೇಷ, ನಿರಸನ, ಹೇಳನ ಭಾವಗಳನ್ನು ಸೂಚಿಸುವ ಸಂಭಾಷಣೆಗಳೂ ಜರುಗವು, ಸಾಧ್ಯವಾದಮಟ್ಟಿಗೆ ಸೃಷ್ಟಿ ಸ್ಥಿತಿ ಲಯಕಾರಕನಾದ ಪರಮೇಶ್ವರನನ್ನು ಧ್ಯಾನಿಸುವುದು, ಪ್ರೇಮ, ನೀತಿ ಧರ್ಮದಯಾದಿಗಳಲ್ಲಿ ಅಭಿರುಚಿಯನ್ನು ಹೆಚ್ಚಿಸುವುದು, ಎಲ್ಲಾ ಸಂಘಗಳಲ್ಲಿಯ ಐಕ ಮತ್ಯವನ್ನೂ ಬಲಪಡಿಸುವುದು ಇವುಗಳೇ ಸಮಾಜದ ಮುಖ್ಯೋದ್ದೇಶಗಳು, ಈ ವಿಧ ವಾದ ಸಂಭಾಷಣೆಗಳು, ಬೋಧೆಗಳು, ಸಂಗೀತವು ಮಾತ್ರ ಸಮಾಜದಲ್ಲಿ ಹೇಳಲ್ಪಡುವವು. ಇದೇ ರಾಮಮೋಹನನ ಸಮಾಜಸ್ಥಾಪನೆಯ ಮುಖ್ಯೋದ್ದೇಶವು, ಈ ಸವಾಜ ನಿಯ ಮಗಳೆಲ್ಲವೂ ರಾಮ ಮೋಹನನಿಂದ ಬರೆಯಲ್ಪಟ್ಟ ಟ್ರಸ್ಟ್ಡೀಡ್' ಎಂಬ ನಿರ್ಣಯ ಪತ್ರದಲ್ಲಿ ಬಹು ಸ್ಪಷ್ಟವಾಗಿ ವಿವರಿಸಲ್ಪಟ್ಟಿರುವುದು. ನಿರಾಕಾರಪರಮೇಶ್ವರನ ಉಪಾಸನೆಯನ್ನು ಕುರಿತು ಹಲವು ಸಾವಿರ ವರ್ಷಗಳ ಹಿಂ ದೆಯೇ ಮಹರ್ಷಿ ವರರು ಬೋಧಿಸಿ ಕರತಲಾಮಲಕದಂತೆ ಅನುಭವಕ್ಕೆ ತಂದುಕೊಟ್ಟಹಾಗೆ ವೇದಗಳಿಂದ ವಿಶದವಾಗುತ್ತಿರುವ ಆ ವಿಷಯವಾಗಿ ರಾಮಮೋಹನನು ಮಡಿದ ಹೊಸ ಕೆಲಸವು ಏನಿರುವುದೆಂದು ಕೆಲವರು ಕೇಳಲು ಅದಕ್ಕೆ ಬಂಗಾಳೀ ಚರಿತ್ರ ಕರ್ತನು ತನ್ನ ಗ್ರಂಥದಲ್ಲಿ ಹೀಗೆ ಉತ್ತರವನ್ನು ಬರೆದಿರುವನು, ರಾಮಮೋಹನನು ಹೊಸಕೆಲಸವಾವುದನ್ನೂ ಮಾಡಲಿಲ್ಲವೆಂಬುದು ನಿಶ್ಚಯವು. ಮತ್ತು ಇದು ಹೊಸಕಾಧ್ಯವೆಂದು ಹೇಳುವುದಕ್ಕೆ ಸುದಾ ಅವನಿಗೆ ಇಷ್ಟವಿರಲಿಲ್ಲ, ಆದರೂ ಎಲ್ಲಾ ಕುಲಗಳವರೂ ಎಲ್ಲಾ ಮತಗಳವರೂ ಯಾವ ಜಾತಿಭೇದವನ್ನೂ ನೋಡದೆ ಈ ಮಂದಿರಕ್ಕೆ ಬಂದು ನಿರಾಕಾರ ಪರಮೇಶ್ವರನಪೂಜೆಯನ್ನು ಮಾಡಬಹುದೆಂತಲೂ ಬ್ರಾಹ್ಮಣ ನಿಗೂ, ಚಂಡಾಲನಿಗೂ, ಹಿಂದುವಿಗೂ, ಮಹಮ್ಮದೀಯನಿಗೂ, ಮತ್ತೆ ಯಾವನಿಗಾದರೂ ಭಕ್ತಿಭಾವವಿದ್ದಲ್ಲಿ ಈ ಮಂದಿರದಲ್ಲಿ ಸಮಾನವಾದ ಅಧಿಕಾರಉಂಟೆಂದು ಪ್ರಚುರಪಡಿಸು ವುದೇ ಇದರಲ್ಲಿನ ಹೊಸಪದ್ಧತಿ, ಎಂದು ಒಪ್ಪಿಕೊಳ್ಳದೆ ತಪ್ಪದು, ಮಹನೀಯರ ಇತಿ