೪೬ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಹರ್ಷಿ ದೇವೇಂದ್ರನಾಧಾಕೂರ್' ಎಂಬ ಪ್ರಸಿದ್ಧ ಜ್ಞಾನಿಯು ನುಡಿದ ಕೆಲವು ವಾಕ್ಯಗಳನ್ನು ವಾಚಕರಿಗೆ ಶ್ರುತಪಡಿಸಿ ಈ ಪ್ರಕರಣವನ್ನು ಮುಗಿಸುವೆವು, ಬ್ರಹ್ಮ ಸಮಾಜದ ಹೆಸರನ್ನೆತ್ತಿ ದಕೂಡಲೆ ನಮಗೆ ಪ್ರಧಮಭಕ್ತನಾದ ರಾಮಮೋಹನನ ಹೆಸರು ನೆನಪಿಗೆ ಬಾರದೆ ಇರದು. ಆತನ ದೇಹವು ಎಷ್ಟು ದೃಢವಾಗಿದ್ದಿತೋ ಜ್ಞಾನವ ಅಷ್ಟರ ಪರಿಪೂರ್ಣವಾಗಿದ್ದಿತು. ಧೈರ, ಸ್ಥಿರಸಂಕಲ್ಪ, ಮೊದಲಾದ ಸದ್ಗುಣಗಳನ್ನುಳ್ಳ ಆ ಮಹಾತ್ಮನ ಸುಂದರಸ್ವರೂಪವು ಈಗ ನಮ್ಮ ಕಣ್ಣೆದಿರಿಗೆ ಪ್ರತ್ಯಕ್ಷವಾಗಿ ಕಾಣಿಸುತ್ತಿಗೆ, ಆ ವಿದ್ವಾಂಸನು ಧೈಯ್ಯದಿಂದ ಸಾಧಿಸಿದ ಮಹತ್ಕಾರಗಳಿಂದ ನಾಲ್ಕು ದಿಕ್ಕುಗಳಲ್ಲಿಯೂ ವ್ಯಾಪಿಸುತ್ತಿರುವ ಕೀರ್ತಿಚಂದಿ, ಕೆಯು ನಮ್ಮ ನ್ನು ಸಂತೋಷಸಮುದ್ರದಲ್ಲಿ ಮುಳುಗಿಸುತ್ತದೆಯಲ್ಲವೇ ! ಈತನು ಧರ್ಮ ಸಂರಕ್ಷಣಾರ್ಧ'ವಾಗಿಯೇ ಈ ಭೂಲೋಕದಲ್ಲಿ ಜನಿಸಿ, ಹುಟ್ಟಿದ್ದು ಮೊದಲು ಸಾಯುವ ತನಕ ವಿಗ್ರಹಾರಾಧನೆ ಮೊದಲಾದ ದುರಾಚಾರಪಿಶಾಚಗಳೊಂದಿಗೆ ಹೋರಾಡಿ ತನ್ನ ಜಯ ಧ್ವಜವನ್ನು ಈ ಗಂಗಾನದೀಪ್ರಾಂತ ಪ್ರದೇಶದಲ್ಲಿ ಸ್ಥಾಪಿಸಿದನು. ಇವನು ಜನ್ನಿಸಿದಾಗ ಬಂಗಾಳಾದೇಶದ ಸ್ಥಿತಿಯನ್ನು ನೆನಸಿಕೊಂಡರೆ ಎದೆ ಬಿರಿಯುತ್ತಿತ್ತು, ಆಗಿನ ಜನರು ಬ್ರಹ್ಮಸಮಾಜದ ಹೆಸರನ್ನು ಕೇಳಿದಕೂಡಲೇ ಹಗೆಗೊಳ್ಳುತ್ತಿದ್ದರುಅವಿದ್ಯೆ ಎಂಬ ಕತ್ರ ಲೆಯಲ್ಲಿ ಅಡಗಿದ್ದ ಬಂಗಾಳಾದೇಶದಲ್ಲಿ ದುರ್ವತ್ರನವೆಂಬ ದುಷ್ಟ ರಾಕ್ಷಸನು ನಿರಂಕುಶವಾಗಿ ಪ್ರಭುತ್ವ ಮಾಡುತ್ತಿದ್ದನು. ಆಗ ರಾಮಮೋಹನನು ಧೈಯ್ಯನೆಂಬ ಕತ್ತಿಯನ್ನು ಕೈಯಲ್ಲಿ ಹಿಡಿದು ಕೋಪಿಸಿ, ಧುಮಿಕಿ ದುರ್ವಿಷಯ ಶತ್ರುಸಮೂಹವನ್ನು ಒಂದೇಸಾರಿ ಕತ್ತರಿಸಿ, ಬ್ರಹ್ಮ ಸಮಾಜ ವಿಜಯಧ್ವಜವನ್ನು ನೆಟ್ಟು ಒಣಗಿಹೋಗುತ್ತಿದ್ದ ಧರ್ಮವೆಂಬ ಗಿಡವನ್ನು ಮರಳಿ ಚಿಗುರಿಸಿದನು, ತರುವಾಯ ಆ ಧರ್ಮ ವೃಕ್ಷವು ದಿನೇದಿನೇ ಅಭಿವೃದ್ಧಿ ಹೊಂದು ತ್ಯಾ ಪುಷ್ಪ ಫಲಗಳಿಂದ ಕಂಗೊಳಿಸುತ್ತಿದ್ದಿತು, ಬ್ರಹ್ಮಧರ್ಮವನ್ನುದ್ದರಿಸುವವರೊಬ್ಬರೂ ಇಲ್ಲವೆಂಬ ಲೋಪವನ್ನು ನಿವಾರಿಸುವುದಕ್ಕಾಗಿಯೇ ಈ ಮಹಾತ್ಮನು ಜನ್ನಿಸಿ ಆರಾವರ್ತ ದಲ್ಲಿ ಸದ್ವಿದ್ಯೆಯೆಂಬ ದೀಪವನ್ನು ಬೆಳಸಿದನು, ಬ್ರಹ್ಮಸಮಾಜಧರ್ಮ ಪ್ರಚಾರಕ್ಕಾಗಿಯೇ ಈತನು ತುಂಬ ಕಷ್ಟ ಪಟ್ಟು ತನ್ನ ಹಣವನ್ನೆಲ್ಲ ಧಾರೆಯೆರೆದು ಕೊನೆಗೆ ದೆಹಲಿಯ ರಾಜ ನಿಂದ ವೇತನವನ್ನು ಪಡೆದು ಜೀವಿಸಬೇಕಾದ ಸ್ಥಿತಿಗೆ ಬಂದರೂ ಚಿಂತಿಸದೆ ತನ್ನಿ೦ದ ಉಪಕ್ರ ಮಿಸಲ್ಪಟ್ಟ ಈ ಮಹಾಕಾರಕ್ಕೆ ಮುಂದಿನ ತಲಾಂತರದ ಜನರು ಸಹಾಯಕರಾಗಿ ಕೆಲಸ ಮಾಡಿ ವೃದ್ಧಿಯನ್ನು ಹೊಂದುವರೆಂಬ ನಂಬಿಕೆಯಿಂದುಂಟಾದ ಸಂತೋಷದಿಂದಲೇ ಆ ವಿಚಾ ರದಲ್ಲಿ ಲಕ್ಷ್ಯ ಮಾಡದೆ ಇದ್ದನು, ತನ್ನ ಕೆಲಸಗಳಲ್ಲಿ ತನಗಿರುವ ಶ್ರದ್ಧೆಗಿಂತ ನೂರುಪಾಲು ಹೆಚ್ಚಾಗಿ ಬ್ರಹ್ಮ ಸಮಾಜದ ಕಾವ್ಯಗಳಲ್ಲಿ ಶ್ರದ್ಧೆಯುಳ್ಳವನಾಗಿದ್ದ ಈತನು ತನ್ನ ೧೬ನೆಯ ವಯಸ್ಸಿನಿಂದ ೫೯ನೆಯ ವರ್ಷದ ತನಕ ಅದರ ಅಭಿವೃದ್ಧಿಗಾಗಿಯೇ ಕಷ್ಟಪಟ್ಟು ಕೆಲಸ ಮಾಡಿದನು. ಇಂತಹ ಹೆಚ್ಚು ಶ್ರಮಪಟ್ಟು ನಿಶ್ವಹಿಸಿದ ಈ ಮಹೋತೃ ಷ್ಟ ಕಾಠ್ಯವನ್ನು ನೋಡಿಯಾದರೂ ನಮಗೆ ಏಕೆ ಉತ್ಸಾಹ ಹುಟ್ಟಬಾರದು ? ಈ ಮಹಾತ್ಮನು ಯಾವ ಪವಿತ್ರಕಾರಕ್ಕಾಗಿ ತನ್ನ ದೇಹ ರಕ್ತವನ್ನೆಲ್ಲಾ ಒಪ್ಪಿಸಿದನೋ ಅಂಥ ಬ್ರಹ್ಮಜ್ಞಾನವಿಷಯ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೫೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.