ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ೪೩ ವನ್ನು ಕುರಿತು ಸ್ವಲ್ಪ ಮಟ್ಟಿಗಾದರೂ ತಿಳಿದುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ರಾಮಮೋಹನನು ಪ್ರಾರಂಭದಲ್ಲಿ ಕಲ್ಕತ್ತೆಗೆ ಬಂದಾಗ ಒಬ್ಬ ಪರದೇಶಿಯಂತೆ ಇದ್ದನು, ಆಗ ಅವನಿಗೆ ಯಾರು ಸಹಾಯಕರಾಗಿದ್ದರು ? ತನ್ನ ಜ್ಞಾನ, ಧನ ೯, ಸತ್ಯ ಎಂಬವುಗಳ ಸ್ನೇ ತನಗೆ ಸಾಧನಗಳಾಗಿ ಮಾಡಿಕೊಂಡು ತನ್ನ ಜತೆಗೆ ಬಹು ಮಂದಿಯನ್ನೂ ಸೇರಿಸಿಕೊಂ ಡನು, ಅವರೇ ಅವನ ಪ್ರಾಣಸ್ನೇಹಿತರಾಗಿ ಎಂತಹ ಕೆಲಸಕ್ಕಾದರೂ ಹಿಂದೆಗೆಯದೆ ಸಹ ಕಾರಿಗಳಾದರು, ಧಮ್ಮ ಬಾಹಿರನೆಂದು ಒಂದುಸಾರಿ ಪೂಲ್ಯಾಚಾರ ಪರಾಯಣರಾದ ಮೂ ಖ೯ ರಿಂದ ಆಕ್ಷೇಪಿಸಲ್ಪಟ್ಟ ರಾಮಮೋಹನನು ಈಗ ಯುಕ್ತಾಯುಕ್ತ ವಿವೇಚನಶೀಲರಾದ ವಿದ್ವಾಂಸರ ಹೃದಯವೆಂಬ ಸಿಂಹಾಸನದಲ್ಲಿ ಕುಳಿತು ಲೋಕಪೂಜ್ಯನಾಗಿ ಒಪ್ಪುತ್ತಿರುವನು. ಇಷ್ಟು ಸತ್ಯ ಮಾರ್ಗಾಭಿವೃದ್ಧಿಗೆ ದೈವಬಲವೇ ಕಾರಣವು. ವಿಡಿದು ದನಳುಕದೆ ಧೈಯ್ಯದೆ || ದೃಧದಿಂ ಮಾಡುತ್ತ ಬಂದೊದಾವುದಸಾಧ್ಯಂ || ಮಡೆಯನಿ೯ಷ್ಟಕ್ಕಂಜುತೆ | ತೊಡಗದಿಹ ಧಿ೯ರರೇಕೆ ಕಂದುವರಿಳೆಯೊಳ್ || 沙沙米然 ನಾಲ್ಕನೆಯ ಪ್ರಕರಣ, ಕೆಲವು ಇಂಗ್ಲಿಷ್ ಇತಿಹಾಸ ಲೇಖಕರು ರಾಮಮೋಹನನಿಗೆ ಸರ್ವ ವಿಷಯ ಸಂ ಸ್ಯಾರ ಕರ್ತ (A1) roundt Reforner) ಎಂಬ ಬಿರುದನ್ನಿತ್ತಿರುವರು. ಇದರಿಂದ ಈತನು ಕೇವಲ ಪರಮಾರ್ಧ ಬೋಧನೆಯೊಂದರಲ್ಲಿಯೇ ತನ್ನ ಶಕ್ತಿಯನ್ನೆಲ್ಲಾ ವಿನಿಯೋಗಿ ಸದೆ, ಸಾಂಘಿಕ ವಿಷಯದಲ್ಲಿಯೂ, ರಾಂಗ ವಿಷಯದಲ್ಲಿಯೂ ಸಹ ಎಚ್ಚರ ತೆಗೆದು ಕೊಂಡು, ಅವುಗಳನ್ನು ಸಂಸ್ಕರಿಸುತ್ತಿದ್ದನೆಂತಲೂ, ಯಾವ ವಿಷಯದಲ್ಲಿಯಾದರೂ ಲೋಪ ವಿದ್ದಂತೆ ಕಾಣಿಸಿದರೆ ಕೂಡಲೇ ಅದನ್ನು ಸವರಿಸಲಕ್ಕೆ ಪ್ರಯತ್ನಿ ಸುತ್ತಿದ್ದನೆಂತಲೂ, ಅವರ ಅಭಿಪ್ರಾಯವಿತ್ತೆಂದು ಸ್ಪಷ್ಟ ಪಡುವ್ರದು. ಬಹು ಕಾಲದಿಂದಲೂ ಯರೋಸ್‌ ರಾಜ್ಯಗಳವರು ಪ್ರಾಂಪಂಚಿಕ ವ್ಯವಹಾರಗ ಳಿಗೂ, ಪರಮರ್ಧ ವಿಷಯಗಳಿಗೂ ಸಂಬಂಧವೇನೂ ಇಲ್ಲವೆಂತಲೂ, ಇವೆರಡೂ ಒಂದ ರೊಡನೆ ಮತ್ತೊಂದು ಬೆರೆಯದ ಪ್ರತ್ಯೇಕ ಪದಾರ್ಥಗಳೆಂತಲೂ ಹೇಳುತ್ತಿರುವರು. ಫಾ ಶ್ಚಾತ್ಯ ವಿದ್ಯಾಭಿವೃದ್ಧಿಯಾದಹಾಗೆಲ್ಲಾ ನಮ್ಮ ದೇಶದಲ್ಲಿ ಕೂಡ ಈಗ ಇದೇ ಅಭಿಪ್ರಾಯವು ವ್ಯಾಪಿಸುತ್ತಿರುವುದರಿಂದ ವಿದ್ಯಾವಂತರಲ್ಲಿ ಅಹುದು ಅಲ್ಲವೆಂಬ ಎರಡು ಬಗೆಯ ಭಿನ್ನೋದ್ದೇ ಶಗಳವರು ಏರ್ಪಟ್ಟು ಒಬ್ಬರನ್ನೊಬ್ಬರು ಹಗೆ ಮಾಡುವ ಸ್ಥಿತಿಯುಂಟಾಯಿತು, ವಿಚಾರ ಮಾಡಿ ನೋಡಿದರೆ “ ಇವರಲ್ಲಿ ಒಳ್ಳೆಯ ಉದ್ದೇಶವುಳ್ಳವರು ಕೆಲವರಿದ್ದರೂ ಅವರಾದರೂ ಸತ್ಯಾಂಶವು ಯಾವುದೆಂಬುದನ್ನು ತಿಳಿದು ಕೊಳ್ಳುವದೇ ಇಲ್ಲವೆಂತಲೂ `ಹಾಗೆ ತಿಳಿದುಕೊಂ ಡರೂ ಅದು ಅತ್ಯಲ್ಪವಾದುದೆಂತಲೂ ಸ್ಪುರಿಸದೆ ಇರದು.