ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ, ಚಾಲಕರು ಬಂದು ಸೇರಿದುದರಿಂದ ಪಾಠಶಾಲೆಯು ದಿನದಿನಕ್ಕೂ ಅಭಿವೃದ್ಧಿಯಾಗುತ್ತ ಬಂದಿತು. ಮುಂದೆ ಬೈಬಿಲ್ಲನ್ನು ಪಾಠವಾಗಿ ಏರ್ಪಡಿಸಬೇಕಾಗಿತ್ತು. ಪಾಠಶಾಲೆಯು ಪೂ ರ್ತಿಯಾಗಿ ಅಭಿವೃದ್ಧಿಗೆ ಬರಲಿಕ್ಕೆ ಮುಂಚೆಯೇ ಬೈಬಿಲ್ಲನ್ನು ಇಡುವುದು ಯುಕ್ತವಲ್ಲವೆಂದು ಅದಕ್ಕೆ ಮುಂಚೆ ಸುಮ್ಮನೆ ಇದ್ದರು, ಸ್ವಲ್ಪ ಅಭಿವೃದ್ಧಿಗೆ ಬಂದಹಾಗೆಲ್ಲಾ ಡಾಕ್ಟರ್‌ ಡಫ್ ಎಂಬವರು ರಾಮಮೋಹನನನ್ನು ತೊಂದರೆಮಾಡುತ್ತಾ ಬಂದುದರಿಂದ ಇದಕ್ಕಾಗಿ 1830ನೇ ಜೂಲೈ 13ನೇ ತಾರೀಖನ್ನು ನಿರ್ಣಯಿಸಿದನು, ಗೊತ್ತಾದ ದಿನ ರಾಮಮೋ ಹನನು ಪಾಠಶಾಲೆಗೆ ಬಂದನು. ಡಾಕ್ಟರ' ಡಫ್ ರವರು ಬಾಲಕರಿಗೆಲ್ಲಾ ಮತವಿಷಯ ವಾದ ಬೋಧನೆ ಮಾಡಿ ತಾನು ಮೊದಲು ಬೈಬಿಲ್ಲನಲ್ಲಿ ಸ್ವಲ್ಪ ಭಾಗ ಓದಿ ಅದನ್ನು ಬಾಲ ಕರ ಕೈಗೆ ಕೊಟ್ಟನು, ಕೂಡಲೇ ಅನ್ಯಮತಗ್ರಂಥವನ್ನು ನಾವು ಹೇಗೆ ಓದುವೆನೆಂದು ಹುಡುಗರೆಲ್ಲರೂ ಒಗ್ಗಟ್ಟಾಗಿ ಹೇಳಿ ಅವರವರು ಬೇರೆ ಬೇರೆ ಯೋಚಿಸತೊಡಗಿದರು. ಆಗ ರಾಮಮೋಹನನು ಮುಂದಕ್ಕೆ ಬಂದು ಅವರನ್ನು ಕುರಿತು, ನೀವೆಲ್ಲರೂ ಏಕೆ ತೊಂ ದರೆ ಪಡುತ್ತಿದ್ದೀರಿ ? ಹಿಂದೂಶಾಸ್ತ್ರಗಳನ್ನು ಆಮೂಲಾಗ್ರವಾಗಿ ಶೋಧಿಸಿದ ಡಾಕ್ಟರ್ ಹೇಡಿಸ್, ಹೇಮರ್ ಎರ್ಲ್ಬ ಮೊದಲಾದವರು ಹಿಂದುಗಳಾದರೆ ? ನಾನು ಖುರಾನನ್ನು ಅನೇಕವೇಳೆ ಓದಿದೆನು, ಬೈಬಿಲ್ಲನ್ನು ಮೊದಲಿಂದ ಕೊನೆಯತನಕ ಶೋಧಿಸಿದೆನು, ನಾನು ಮಹಮ್ಮದೀಯಮತವನ್ನಾಗಲಿ, ಕ್ರಿಸ್ತರ ಮತವನ್ನಾಗಲಿ ಸ್ವೀಕರಿಸಿದೆನೆ ? ನಿಮಗೆ ಸಂಶ ಯವೇತಕ್ಕೆ ? ಅನೇಕ ಮತಗಳ ವೂದ್ಯೋತ್ತರಗಳನ್ನು ಬಲ್ಲ ಮನುಷ್ಯನು ನಾಗರಿಕತೆಯನ್ನೂ, ಸತ್ಯವಿವೇಚನಾಶಕ್ತಿಯನ್ನೂ ಕಲಿತುಕೊಳ್ಳುವನು. ಅಂತವನಿಗೆ ಒಂದೊಂದುವೇಳೆ ಆ ಮ ತಗಳಲ್ಲಿನ ಲೋಪಗಳನ್ನೆಲ್ಲಾ ಹೊರಪಡಿಸುವ ಶಕ್ತಿ ಕೂಡ ಉಂಟಾಗುವುದು, ಎಂದು ಹಲವು ಬಗೆಯಿಂದ ಬೋಧಿಸಿ ಅವರ ಮನಸ್ಸನ್ನು ಕುದುರಿಸಿ ಆಮೇಲೆ ಪ್ರತಿದಿನವೂ ಬೈಬಿ ಇನ್ನು ಬೋಧಿಸುವ ವೇಳೆಗೆ ಸರಿಯಾಗಿ ತಾನು ಪಾಠಶಾಲೆಗೆ ಬರುತ್ತಿದ್ದನು, ರಾಮ ಮೋಹನನು ಇಂಗ್ಲೆಂಡಿಗೆ ಹೋದಮೇಲೆ ಅವನ ಹಿರಿಯಮಗನು ಪಾಠಶಾಲೆಯ ಅಭಿವೃದ್ಧಿ ಯ ವಿಷಯದಲ್ಲಿ ತುಂಬ ಶ್ರದ್ದೆಯನ್ನು ತೆಗೆದುಕೊಳ್ಳುತ್ತಿದ್ದನು, ರಾಮಮೋಹನನು ಇಂಗ್ಲಿಷ್ ವಿದ್ಯಾಭಿವೃದ್ಧಿಯನ್ನು ಕುರಿತು ಮೇಲೆ ಹೇಳಿದಂತೆ ಪ್ರಯತ್ನ ಮಾಡಿದುದಲ್ಲದೆ ತನ್ನ ಸ್ವಂತ ವೆಚ್ಚದಿಂದ ತಾನೂ ಒಂದು ಪಾಠಶಾಲೆಯನ್ನು ಸ್ಥಾಪಿಸಿ ಅದರಲ್ಲಿ ಗೌರವಸ್ಥರಾದ ಮನೆತನದವರ ಮಕ್ಕಳಿಗೆ ವಿದ್ಯೆ ಕಲಿಸಲು ಏರ್ಪಡಿಸಿ ದನು. ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಅರುವತ್ತು ಮಂದಿ ವಿದ್ಯಾರ್ಥಿಗಳು ವ್ಯಾಸಂಗಮಾ ಡುತ್ತಿದ್ದರು. ಇದು 18?೦ ರಲ್ಲಿ ಸ್ಥಾಪಿಸಲ್ಪಟ್ಟಿತೆಂದು ಕೆಲವರ, 1822 ರಲ್ಲಿ ಸ್ಥಾಪಿಸಲ್ಪ ಟೈತೆಂದು ಕೆಲವರೂ ಹೇಳುವರು. ಇಂಗ್ಲಿಷ್ ಭಾಷಾಭಿವೃದ್ಧಿಯನ್ನು ಕುರಿತು ಈತನು ಪ್ರಯತ್ನ ಪಟ್ಟಂತೆಯೇ ದೇಶೀಯ ವಿದ್ಯಾಭಿವೃದ್ಧಿಗೂ ಕೃಷಿ ಮಾಡಿದನು, ಫೋರ್ ವಿಲ್ಲಿಯಂ ಕಾಲೇಜಿನ ಉಪಯೋಗಕ್ಕಾಗಿ