43 ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. 2-3 ಗದ್ಯ ಗ್ರಂಥಗಳು ಬರೆಯಲ್ಪಟ್ಟಿದ್ದವು, ಆದರೂ ಅವು ಕಠಿನಶೈಲಿಯಲ್ಲಿದ್ದುದರಿಂದ ಸತ್ವಜನ ಸಮ್ಮತವಾಗಿರಲಿಲ್ಲ. ಇದರಿಂದ ರಾಮಮೋಹನನಿಂದ ಬರೆಯಲುಪಕ್ರಮಿಸಲ್ಪಟ್ಟ ಮತಚರ್ಚೆಗಳಂತೆಯೇ ಮೊಟ್ಟಮೊದಲು ಬಂಗಾಳೀಭಾಷೆಗೆ ಒಳ್ಳೆ ವಚನಶೈಲಿಯು ಲಭಿ ಸಿತು, ಇಂಗ್ಲಿಷ್ ಭಾಷೆಯ ವ್ಯಾ ಪನೆಯನ್ನು ನೋಡಿ ಒಂದೂ ಕಾಲೇಜಿಗೆ ಅಭಿಮಾನಶಾ ಲಿಗಳಾದ ಕೆಲವರು ಸಾಮಾಜಿಕರು 1818 ರಲ್ಲಿ ದೇಶಭಾಷಾಭಿವೃದ್ಧಿಯ ಸಂಘ ಒಂದನ್ನೇ ರ್ಪಡಿಸಿದರು, ಇದರಲ್ಲಿ ಇಂಗ್ಲಿಷ್ ಗ್ರಂಥಗಳು ಬಹುಮಟ್ಟಿಗೆ ಪರಿವರ್ತಿಸಲ್ಪಡುತ್ತಿದ್ದುವು. 1826 ರಲ್ಲಿ ರಾಮಮೋಹನನು ಬಂಗಾಳಿ ಭಾಷೆಯನ್ನು ತಿಳಿಯದ ಇಂಗ್ಲಿಷರ ಉಪಯೋಗ ಕ್ಯಾಗಿ ಇಂಗ್ಲಿಷಿನಲ್ಲಿ ಒಂದು ವ್ಯಾಕರಣವನ್ನು ಬರೆದು ಕೆಲವು ದಿನಗಳಮೇಲೆ ಗೌಡ ವ್ಯಾಕ ರಣವೆಂಬ ಹೆಸರಿನಿಂದ ಅದನ್ನು ನ್ಯಭಾಷೆಯಲ್ಲಿ ಬರೆದನು, ಆದನ್ನು ಮುದ್ರಿಸುವುದಕ್ಕೆ ಮುಂಚೆಯೇ ಈತನು ಇಂಗ್ಲೆಂಡಿಗೆ ಹೊರಟುಹೋದದ್ದರಿಂದ ಗ್ರಂಥಕರ್ತರ ಅನುಮತಿ ಪಡೆದು ಇದನ್ನು ಪಾಠಶಾಲಾಗ್ರಂಥಸಮಾಜದವರು ಮುದ್ರಿಸಿದರು. ಆ ಕಾಲದಲ್ಲಿ ಬಂಗಾಳಿಭಾಷೆ ಯನ್ನು ಕಲಿಯುವವರಿಗೆ ಇದು ಮುಖ್ಯ ಗ್ರಂಥವಾಗಿದ್ದಿತು, ಇದು 1833 ರಲ್ಲಿ ಮೊದಲ ನಯಸಾರಿ ಮುದ್ರಿಸಲ್ಪಟ್ಟಿತು, 1951 ನೆಯ ವರ್ಷದವರೆಗೆ ಇದು ಆ ಸಮಾಜದವರಿಂದ ನಾಲ್ಕು ಸಾರಿ ಅಚ್ಚು ಹಾಕಿಸಲ್ಪಟ್ಟಿತು, ಇವುಗಳಲ್ಲದೆ ರಾಮಮೋಹನನು ಭೂಗೋಳಶಾಸ್ತ್ರ ವನ್ನೂ, ವಸ್ತು ತತ್ವಶಾಸ್ತ್ರವನ್ನೂ ಬರೆದನೆಂದೂ ಹೇಳುವರು, ಆದರೂ ಅವು ಈಗ ಎಲ್ಲಿಯ ಕಾಣಬರುವುದಿಲ್ಲ. " ರಾಮಮೋಹನರಾಯನು ಬಂಗಾಳಿ ಭಾಷೆಯಲ್ಲಿ « ಸಂವಾದಕೌಮುದಿ ” ಎಂಬ ವಾರ್ತಾಪತ್ರಿಕೆಯೊಂದನ್ನೂ ಪ್ರಕಟಿಸುತ್ತಿದ್ದನೆಂದು ಇದಕ್ಕೆ ಮೊದಲೇ ಹೇಳಿಲ್ಪಟ್ಟಿದೆ. ಇದರಲ್ಲಿ ಮುಖ್ಯವಾಗಿ ಮತವಿಷಯಗಳು ಮಾತ್ರವಲ್ಲದೆ ರಾಜಕೀಯವಿಷಯಗಳು, ಸಂಧಿ ಸಂಸ್ಕರಣಗಳು, ಚರಿತ್ರೆಗಳು, ವಿದ್ಯಾ ವಿಷಯಗಳು ಮುಂತಾದ ಅನೇಕ ವಿಷಯಗಳು ಕೂಡ ಬರೆಯಲ್ಪಡುತ್ತಿದ್ದುವು. ಇದರಲ್ಲಿ ಪ್ರಕಟಿಸಲ್ಪಟ್ಟ ಅನೇಕ ವ್ಯಾಸಗಳನ್ನು ಈಚಿನವರು ಗ್ರಂಥರೂಪವಾಗಿ ಪ್ರಕಟಿಸಿದರು, 1854 ರಲ್ಲಿ ಪುಸ್ತಕ ಸಮಾಜದವರು (ವಂಗಪಾಠಾವಳಿ' ಎಂಬುವದೊಂದು ಪುಸ್ತಕವನ್ನು ಪಾಠಶಾಲೆಗಳಲ್ಲಿ ಪಠನೀಯಗ್ರಂಥವಾಗಿ ಏರ್ಪಡಿಸಿದರು, ಅದರಲ್ಲಿ ಸಂವಾದಕೌಮುದಿಯ ಅನೇಕ ವ್ಯಾಸಗಳು ಸಂಗ್ರಹಿಸಲ್ಪಟ್ಟಿದ್ದವು, 1874 ರಲ್ಲಿ ಮೆಟ್ರಿಕ್ಯುಲೇರ್ಷ ಪರೀಕ್ಷೆಗೆ ಟೆಕ್ಸ್ಟ್ ಬುಕ್ಕಾಗಿ ವಿಧಿಸಲ್ಪಟ್ಟ ಬಂಗಾಳಗ್ರಂಥದಲ್ಲಿ ಕೂಡ ಈ ಪತ್ರಿಕೆಯ ಕೆಲವು ವ್ಯಾಸಗಳು ಸೇರಲ್ಪಟ್ಟಿದ್ದುವು. ಈಗ ಆ ಪತ್ರಿಕೆಗಳು ಸಿಕ್ಕುವುದು ಕಷ್ಟ, ಆದರೂ ಬಾಬೂ ನಾರಾಯಣಬೋಸ್ ಎಂಬಾತನು ತನ್ನ ಕಾಲದಲ್ಲಿ ದೊರೆತಮ ಟ್ವಿಗೆ ರಾಮಮೋಹನನಿಂದ ರಚಿಸಲ್ಪಟ್ಟ ಗ್ರಂಥಗಳನ್ನು ಸಂಗ್ರಹಿಸಿ ಒಂದು ಸಂಪುಟವಾಗಿ ಮಾಡಿರುವನು, ಅದರಿಂದ 1893ರಲ್ಲಿ ಒಂದು ಪತ್ರದಲ್ಲಿ ಈ ವಿವಾದ ಭಂಜನ ” ಎಂಬ ಶೀರ್ಷಿತೆ ಬರೆದ ಉಪನ್ಯಾಸವನ್ನು 1924 ರಲ್ಲಿ ಪ್ರತಿಧ್ವನಿ, ಬೆರ್ಲೂ (ವಿಮಾನ) ವಿವರಣೆ, ಅಸತ್ಯವಾಕ್ಯ, ದೇಶಚಾರಿತ್ರೆ, ಮೊದಲಾದ ಕೆಲವು ವ್ಯಾಸಗಳು ನಮಗೆ ಲಭಿಸಿವೆ.
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೭೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.