ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$0 ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ರಿಮಿತ ಪ್ರಜ್ಞೆಯನ್ನು ಸಂಪಾದಿಸಿದ ಒಬ್ಬ ಇಂಗ್ಲಿಷರವನೇ ಬರೆದಿರುವನೆಂದು ತಿಳಿಯುತ್ತಿ ದೈನು ಎಂದು ಹೇಳಿದನು. * ಸ್ವಲ್ಪ ದಿನಗಳಲ್ಲಿಯೇ ಲಂಡE ಯೂನಿಟೇರಿರ್ಯ ಸಂಘದವರು ನೂತನವಾಗಿ ತಮ್ಮ ನಗರಕ್ಕೆ ಬಂದ ಆ ಮಹನೀಯನಿಗೆ ಸ್ವಾಗತವನ್ನು ಕೊಡಲಿಕ್ಕೆ ಒಂದು ಸಭೆಯನ್ನು ಕೂಡಿಸಿದರು. ರಾಮಮೋಹನನು ಡಾಕ್ಟರ್‌ ಕಾಿಂಟರ್ ಎಂಬ ಸ್ನೇಹಿತನೊಡಗೂಡಿ ಅಲ್ಲಿಗೆ ಬಂದನು, ಈತನು ಲಂಡನ್ನಿನಲ್ಲಿ ಒಬ್ಬ ಮತಬೋಧಕನು, ಬ್ರಷ್ಟಲ್ ನಗರವಾಸಿ, ರಾಮಮೋಹನನು ಕಲ್ಕತ್ತೆಯಲ್ಲಿ ಇದ್ದಂದಿನಿಂದಲೂ ಆತನ ಪ್ರಸಿದ್ಧಿಯನ್ನು ತಿಳಿದಿದ್ದನು. ಈಗ ರಾಮಮೋಹನನು ಲಂಡನ್ನಿಗೆ ಬಂದ ಮೊದಲುಗೊಂಡು ಆತನಿಗೆ ಬಹಳ ಆಪ್ತನಾ ದನು, ಲ್ಯಾಸ್ಟ್ ಡೇಸ್ ಆಫ್ ರಾಮಮೋಹನರಾಯ' ಇ೯ ಇಂಗ್ಲೆಂಡ್' ಎಂಬ ಚರಿ ತ್ರೆಯನ್ನು ಬರೆದ 'ಮಿಸ್ ಮೇರಿ ಕಾರೊಂಟರ್' ಎಂಬ ಸಾಧೀಮಣಿಯು ಈತನ ಮಗಳೇ. ಸಭಿಕರೆಲ್ಲರೂ ಅತ್ಯುತ್ಸಾಹದಿಂದ ರಾಮಮೋನನನ್ನು ಎದುರುಗೊಂಡರು, ಈ ವಿಷಯ ವೆವೂ 1831 ನೇ ಜೂ೯ ತಿಂಗಳ ( ಮಂತ್ರಿ ರಿಪಾಜಿಟರಿ' ಎಂಬ ಮಾಸಪತ್ರಿಕೆಯಲ್ಲಿ ವಿಶದ ವಾಗಿ ಪ್ರಕಟಿಸಲ್ಪಟ್ಟಿದೆ. ಮತ್ತು ಮಿಸ್ ಮೇರಿ ಕಾನ್ಸೆಂಟ‌' ಎಂಬ ಯುವತೀಮಣಿಯು ತನ್ನ ಪುಸ್ತಕದಲ್ಲಿಯೂ ಸ್ವಲ್ಪ ಮಟ್ಟಿಗೆ ಒರೆದಿರುವಳು. ಅದರಲ್ಲಿನ ಅಂಶಗಳನ್ನಿಲ್ಲಿ ಸಂಗ್ರಹ ವಾಗಿ ತಿಳಿಸುವೆವು. « ರಾಮಮೋಹನನು ಸಭಾದ್ವಾರದ (Plat Forns) ಹತ್ತಿರಕ್ಕೆ ಬಂದಕೂಡಲೇ ಸಾವಿರಾರುಮಂದಿ ಸಭಿಕರು (' ರಾಮಮೋಹನನಿಗೆ ವಿಜಯವಾಗಲಿ ” ಎಂದು ಹೇಳಿ ಕರತಾಳಧ್ವನಿಮಾಡಿದರು. ಆಗ ಪ್ರಮುಖರಾದವರು ಎದುರಾಗಿಬಂದು ರಾಮಮೋಹನ ನನ್ನು ಒಳಕ್ಕೆ ಕರೆದುಕೊಂಡುಹೋಗಿ, ಉನ್ನತ ಪೀಠದಲ್ಲಿ ಕುಳ್ಳಿರಿಸಿದ ತರುವಾಯ, ಅಗ್ರಾಸ ನಾಧಿಪತಿಯು ಎದ್ದುನಿಂತು, ನಮ್ಮೆಲ್ಲರ ಆತ್ಮಗಳಿಗೆ ಪ್ರಿಯಮಿತ್ರನಾದ ಒಬ್ಬ ಸುಪ್ರಸಿದ್ಧ ನನ್ನು ಗೌರವಿಸುವುದಕ್ಕೆ ಈದಿಸ ಸಭೆಗೂಡಿಸಲ್ಪಟ್ಟಿದೆ, ಸ್ನೇಹಿತನೆಂದು ಹೇಳುವುದಕ್ಕೆ ಈ ಮಹಾತ್ಮನು ಅಪ್ಪಣೆ ಕೊಡದೆ ಇರನು ” ಎಂಬ ಮಾತಿನಿಂದ ಉಪಕ್ರಮಿಸಿ, ಆತನ ಗುಣ ಗಳನ್ನು ವರ್ಣಿಸಿ ಒಹಳಹೊತ್ತು ಉಪನ್ಯಾಸ ಮಾಡಿದನು, ಈ ಉಪನ್ಯಾಸ ಮುಗಿದ ಮೇಲೆ ವೆಸ್ಟ್ ಮಿನಿಸ್ಟರ್‌ ರಿವು” ಎಂಬ ಪತ್ರಿಕಾಧಿಪತಿಯಾದ ಸರ್ ರ್ಜಾ ಬೋರಿಂಗ್ ಎಂಬಾತನು, ಎದ್ದು ನಿಂತು ಮೃದುವಾಕ್ಯಗಳಿ೦ದ ರಾಮಮೋಹನನು ಮಾಡಿದ ಸಹಗಮನ ನಿಷೇಧಾದಿ ಲೋಕೋಪಕಾರಕ ತಾಕ್ಯಗಳನ್ನೂ ಸಂಧಿಸಂಸ್ಕಾರವನ್ನೂ ಕುರಿತು ಈತನಿಂದ ರಚಿ ಸಲ್ಪಟ್ಟ ಗ್ರಂಥಗಳನ್ನೂ, ಯೂನಿಟೇಬರ್ಯ ಮತದಲ್ಲಿ ಆತನು ತೋರಿಸಿದ ಅಭಿಮಾನವನ್ನೂ, ಇಂಗ್ಲೆಂಡಿನಲ್ಲಿ ಆತನಿಗೆ ಉಂಟಾಗಿರುವ ಪ್ರಸಿದ್ಧಿಯನ್ನೂ ಕುರಿತು, ಯುಕ್ತಿಯುಕ್ತವಾಗಿ ಬ ಹಳ ಹೊತ್ತಿನ ತನಕ ಉಪನ್ಯಾಸಮಾಡಿ, ಇಂತಹ ಸುಗುಣ ಸಂಪನ್ನನನ್ನು ನಾವು ಈಗ ಕಣ್ಣ ತುಂಬ ನೋಡುವ ಭಾಗ್ಯವನ್ನೂ, ಮನಃಪೂರ್ತಿಯಾಗಿ ಆತನಿಗೆ ಸ್ವಾಗತವನ್ನೂ ಕೊ ಡುವ ಅದೃಷ್ಟವನ್ನೂ ಪಡೆದುದಕ್ಕೆ ತುಂಬ ಸಂತೋಷ ಪಡಬೇಕಾಗಿದೆ ಎಂದು ನುಡಿದನು.