ಈ ಪುಟವನ್ನು ಪರಿಶೀಲಿಸಲಾಗಿಲ್ಲ.

th ರಾಜಾ ರಾಮಮೋಹನರಾಯರ ಜೀವಿತ ಚರಿತ್ರ, ತರುವಾಯ ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಹಾಕ್ಯಾರ್ಡ್ ಯೂನಿವರ್ಸಿ ಟೆಗೆ ಪ್ರಸಿಡೆಂಟರಾಗಿದ್ದ ಡಾಕ್ಟರ್ ಕಾರ್ಕ್ ಲೇಡ್ ಎಂಬ ಪಂಡಿತರು ಎದ್ದು ನಿಂತು ಹೇಳಿದ ಉಪನ್ಯಾಸಗಳ ಅಂಶಗಳನ್ನು ದೃಢಪಡಿಸುತ್ತಾ, ಕೊನೆಯಲ್ಲಿ 14 ಅಮೇರಿಕಾ ಖಂಡದಲ್ಲಿ ಈ ರಾಯರವರ ಪ್ರಸಿದ್ಧಿಯು ಎಲ್ಲಾ ಕಡೆಯಲ್ಲಿಯೂ ಹಬ್ಬಿಕೊಂಡಿರುವ ಸಂಗತಿಯನ್ನು ಅವರು ಈ ಮಹಾತ್ಮನ ದರ್ಶನವನ್ನಪೇಕ್ಷಿಸಿ, ಎದುರುನೋಡುತ್ತಲಿರುವ ಅಂಶವನ್ನೂ ನೀವೆಲ್ಲರೂ ತಿಳಿ ದೇ ಇರುವಿರಿ, ಅದುದರಿಂದ ನೀವೆಲ್ಲರ ಪಕ್ಷವಾಗಿ ಒಂದು ಸಾರಿ ಆ ಖಂಡಕ್ಕೆ ಬಿಜಯಮಾ ಡಿಸಬೇಕು ಎಂದು ಸವಿನಯದಿಂದ ಈ ಮಹಾತ್ಮನಾದ ರಾಜಾ ರಾಮಮೋಹನರಾಯನನ್ನು ಪ್ರಾರ್ಥಿಸುತ್ತೇನೆ ” ಎಂದು ನುಡಿದನು. ಈ ಉಪನ್ಯಾಸಕ್ಕೆ ಉಪಬಲವಾಗಿ ಫಾದಿರಿ ಫಾಕ್ಸ್ ಎಂಬಾತನು ಮಾತನಾಡಿದನು, - ಹೀಗೆಲ್ಲರೂ ಹೇಳಿದ ಬಳಿಕ ಅಗ್ರಾಸನಾಧಿಪತಿಯು ಸಭೆಯಲ್ಲಿದ್ದವರನ್ನೆಲ್ಲ ನೋಡಿ, “ನಾವೆಲ್ಲರೂ ಆತನ ಗೌರವಾಧ ವಾಗಿ ಒಂದುಸಾರಿ ಎದ್ದು ನಿಲ್ಲಬೇಕೆಂದು ಕೋರುತ್ತೇನೆ' ಎಂದು ಹೇಳಿದನು, ಆ ಪ್ರಾರ್ಥನೆಯನ್ನು ಎಲ್ಲರೂ ಮನಃಪೂರ್ವಕವಾಗಿ ಅಂಗೀಕರಿಸಿ, ಎದ್ದು ನಿಂತುಕೊಂಡುದಲ್ಲದೆ ರಾಮಮೋಹನರಾಯನಿಗೆ ಈಶ್ವರನು ದೀರ್ಘಾಯುವನ್ನು ದಯ ಪಾಲಿಸಿ ! ಜಯವನ್ನಿಯಲಿ ! ಎಂದು ದಿಕ್ಕುಗಳು ಪ್ರತಿಧ್ವನಿ ಕೊಡುವಂತೆ ಧ್ವನಿಮಾಡಿ ಕೈತಪ್ಪಾಳೆಯನ್ನು ಮೊಳಗಿಸಿದರು. ಆಗ ರಾಮಮೋಹನನು ಎದ್ದು ನನ್ನ ದೇಹಕ್ಕೆ ಸ್ವಲ್ಪ ಅಸ್ವಸ್ಥವಾಗಿರುವುದರಿಂದ ಹೆಚ್ಚು ಸಂಗತಿಗಳನ್ನು ಹೇಳಲಾರದೆ ಹೋದುದಕ್ಕಾಗಿ ನಿಮ್ಮಗಳ ಕ್ಷಮೆ ಬೇಡುವೆನು, ನೀ ವೆಲ್ಲರೂ ನನ್ನನ್ನು ಇಷ್ಟು ಮಟ್ಟಿಗೆ ಗೌರವಿಸಿದುದಕ್ಕೂ ವಿದೇಶೀಯನಾದ ನನ್ನನ್ನು ನಿಮ್ಮ ಸಮಾಜದವನಾಗಿ ಭಾವಿಸಿ ಸ್ನೇಹಿತನೆಂತಲೂ, ಆಪ್ತನೆಂತಲೂ, ಸಹೋದರನೆಂತಲೂ ಸಂಬೋ ಧಿಸಿ ಹೇಳಿದುದಕ್ಕೂ ನಿಮ್ಮೆಲ್ಲರಿಗೂ ಮನಃಪೂರ್ವಕವಾಗಿ ಕೃತಜ್ಞತಾಸೂಚಕವಾದ ವಂದನೆ ಗಳನ್ನು ಅರ್ಪಿಸುವೆನು. ಆದರೆ ನಿಮ್ಮಿಂದ ಏತಕ್ಕೋಸ್ಕರ ನಾನು ಇಷ್ಟರಮಟ್ಟಿಗೆ ಗೌರ ವಿಸಲ್ಪಟ್ಟಿನೋ ಮತ್ತು ಯಾವ ಕಾರಣದಿಂದ ನಿಮ್ಮೆಲ್ಲರಿಂದಲೂ ಹೀಗೆ ಸೌಹೃದವನ್ನು ಪಡೆ ದೆನೋ ಆ ಹೇತುವನ್ನು ಮಾತ್ರ ತಿಳಿಯಲಾರೆದೆ ಚಿಂತಿಸುತ್ತ, ನಿಮ್ಮಗಳನ್ನೇ ಕೇಳಬೇಕೆಂದು ಅಪೇಕ್ಷಿಸಿರುವೆನು, ನಾನು ಒಬ್ಬ ದೇವನನ್ನೇ ನಂಬತಕ್ಕವನು ಮತ್ತು ನಿಮ್ಮೆಲ್ಲರಿಂದ ಅನು ವಿ ಸಲ್ಪಡುವ ಪ್ರಾರ್ಥನ ಪದ್ಧತಿಗಳನ್ನು ಸ್ವಲ್ಪ ಹೆಚ್ಚು ಕಡಿಮೆ ನಾನೂ ಒಪ್ಪಿಕೊಳ್ಳುವೆನು. ಆದರೆ ಅವುಗಳನ್ನೆಲ್ಲ ಕೇವಲ ಮುಕ್ತಿಗೆ ಸಾಧನಗಳೆಂತಲೂ, ಅವುಗಳನ್ನು ನನ್ನ ಸೌಖ್ಯಕ್ಕಾಗಿ ಮಾತ್ರವೇ ಆಚರಿಸುತ್ತಿರುವೆನೆಂತಲೂ ನನ್ನ ಅಭಿಪ್ರಾಯವು ಇಷ್ಟು ಮಾತ್ರವಲ್ಲದೆ ನಿಮ್ಮ ಸಮಾಜಕ್ಕೆ ಸಹಾಯಕರಗಳಾಗಿರುವ ಕಾಶ್ಯಗಳು ಯಾವುದನ್ನಾದರೂ ಮಾಡಿ, ನಿಮ್ಮಿಂದ ಸ್ತೋತ್ರಾರ್ಹನೆನಿಸಿಕೊಳ್ಳಲಿಕ್ಕೆ ತಕ್ಕ ಯೋಗ್ಯತೆಯು ನನ್ನಲ್ಲಿ ಯಾವುದೂ ಇಲ್ಲವೆಂದೂ ಒಪ್ಪಿಕೊಳ್ಳುತ್ತೇನೆ. ನಾನು ಹಿಂದೂ ದೇಶದಲ್ಲಿದ್ದು, ಯೂನಿಟೇರಿರ್ಯ ಮತದಲ್ಲಿ ಅಭಿ ಮಾನವನ್ನು ತೋರಿಸುತ್ತಾ, ಬ್ರಹ್ಮ ಸಮಾಜಸ್ಥಾಪನೆ ಮಾಡಿದಾಗ ಹಿಂದೂ ಜನರೂ ಕ್ರಿಸ್ತಿ