ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ ಯರೂ ನನಗೆ ಹಗೆಗಳಾದರು ನನ್ನ ಕೆಲಸಗಳಿಗೆ ಹಲವುಬಗೆಗಳಿಂದ ವಿಘ್ನ ವನ್ನು ಕಲ್ಪಿ ಸಿದರು, ಆದರೆ ಯಾರು ಎಷ್ಟು ವಿಧಗಳಿಂದ ಪ್ರಯತ್ನಿಸಿದರೂ ಸತ್ಯವು ಯಾವ ಪಕ್ಷದಲ್ಲಿರು ವುದೋ, ಆಕಡೆಗೆ ಅಪಜಯವುಂಟಾಗಲಾರದೆಂದು ನನಗೆ ಪೂಣ೯ವಾದ ನಂಬಿಕೆ ಇತ್ತು. ಪವಿತ್ರಗ್ರಂಥಗಳು ನಿಮ್ಮ ಪಕ್ಷದಲ್ಲಿ ಬಲೀಯವಾಗಿವೆ ಎಂದು ನನ್ನ ಅಂತರಾತ್ಮಕ್ಕೆ ತೋ ರಿತು, ಹೀಗೆ ಜ್ಞಾನವೂ ಪವಿತ್ರಗ್ರಂಧಗಳೂ ಒಂದು ಕಡೆಯಲ್ಲಿಯೂ, ಈರ್ಷ್ಠೆಯ, ಪ್ರಜಾಬಲವೂ ಮತ್ತೊಂದು ಕಡೆಯಲ್ಲಿಯೂ ಇದ್ದು ಕೆಲವು ಕಾಲದ ತನಕ ಹೋರಾಡಿದರೂ ಶೀಘ್ರದಿಂದಲೋ ಸಾವಕಾಶದಿಂದ ಜ್ಞಾನಪಕ್ಷವೇ ಜಯವನ್ನು ಪಡೆಯುವದೆಂಬುದೇ ನನ್ನ ಅಭಿಪ್ರಾಯವಾಗಿದೆ ' ಎಂದು ಆತನು ಉಪನ್ಯಾಸ ಮಾಡಿದ ತರುವಾಯ ಬಹುಸಂ ತೋಷದಿಂದ ಸಭೆಯು ಮುಗಿಯಿತು. ಹೀಗೆ ಕ್ರಮವಾಗಿ ರಾಮಮೋಹನನು ಲಂರ್ಡನಲ್ಲಿಯೂ, ಅದರ ಸುತ್ತಣ ಪಟ್ಟ ಣಗಳಲ್ಲಿಯೂ ಇರುವ ಯೂನಿಟೇರಿರ್ಯ ಮಂದಿರಗಳನ್ನೆಲ್ಲ ನೋಡಿ, ಅವುಗಳಲ್ಲೆಲ್ಲ ಒಂದೇ ವಿಧವಾದ ಗೌರವವನ್ನು ಪಡೆದನು, ಮತ್ತು ಕೆಲವು ಸಭೆಗಳಲ್ಲಿ ನಡೆದ ಸಂವತ್ಸರೋತ್ಸವ ಗಳಿಗೂ ಹೋಗಿ ಬರುತ್ತಿದ್ದನು. - ವಿಶಾಲಜ್ಞಾನದಿಂದ ಕೂಡಿದ ನಾಗರಿಕರಲ್ಲಿ ಅಗ್ರಗಣ್ಯರಾದ ಪಾಶ್ಚಾತ್ಯರಲ್ಲಿ ರಾಮ ಮೋಹನನು ಈರೀತಿಯಾಗಿ ವರ್ಣನೀಯನಾಗಿಯೂ, ಗೌರವ್ಯನಾಗಿಯೂ ಹೆಸರುಗೊಂಡು ದಕ್ಕೆ ಆತನ ಮತವ್ಯಾಪನೆಯಲ್ಲಿಯ ಶ್ರದ್ದೆಯ ಗ್ರಂಥರಚನೆಯೂ, ಜ್ಞಾನ ಮಾತ್ರವೇ ಕಾರಣಗಳಾಗಿರಲಿಲ್ಲ, ಅವುಗಳ ಜತೆಗೆ ಆತನ ಸುಗುಣಸಂಸತ್ತಿಯ ಮುಖ್ಯ ಕಾರಣವಾಗಿ ದಿತು, ಪ್ರತಿಯೊಬ್ಬರ ಸಂಗಡಲೂ ನಗೆಮೊಗದಿಂದ ಮಾತನಾಡುವಿಕೆಯ, ಮಾತನಾಡು ವಾಗ ಎದುರಾಗಿರುವವರ ಮನಸ್ಸನ್ನು ಮೆಚ್ಚಿಸುವುದಕ್ಕಾಗಿ ಪ್ರಯತ್ನಿಸುವಿಕೆಯು, ಅವರ ಸುನಸ್ಸಿಗೆ ಅಹಿತವನ್ನಾಗಲಿ ಜಿರಾಸೆಯನ್ನಾಗಲಿ ಉಂಟುಮಾಡುವ ಮಾತುಗಳನ್ನು ಉಚ್ಚ ರಿಸದೆ ಇರುವಿಕೆಯು, ಅವರೊಡನೆ ಸಂಭಾಷಿಸುತ್ತಿರುವಿಕೆಯ:ು, ತನ್ನ ಮನಸ್ಸಿನ ಯೋಚನೆಗ ಇನ್ನು ಹೊರಕ್ಕೆ ಕಾಣಬರದಂತೆ ಇಟ್ಟಿರುವಿಕೆಯು, ಎಂಬೀಸುಗುಣಗಳಿಂದ ಬಹು ಸ್ವಲ್ಪಕಾ ಲದಲ್ಲಿಯೇ ಆತನಿಗೆ ಅನೇಕರು ಸ್ನೇಹಿತರಾದರು. ಇದರಿಂದ ಈತನು ವಿದ್ವಾಂಸರಲ್ಲಿಯ ಮತಸಮಾಜಗಳಲ್ಲಿಯೂ ಮಾತ್ರವಲ್ಲದೆ ಸಾಂಘಿಕ ಸಭೆಗಳಲ್ಲಿಯೂ ಕೂಡ ಸತ್ವ ಜನಪ್ರಿಯನೆಂ ತಲೂ, ನಿಗರ್ವಿಯೆಂತಲೂ, ಸ್ನೇಹಪಾತ್ರನೆಂತಲೂ, ಹೊಗಳಲ್ಪಡುತ್ತಿದ್ದನು, ಮತ್ತು ಆ ಕಾಲದಲ್ಲಿ ಪ್ರತ್ಯಕ್ಷವಾಗಿ ನೋಡಿದವರು ದೊಡ್ಡ ಸ್ಥಳಗಳಲ್ಲಿದ್ದ ತಮ್ಮ ಸ್ನೇಹಿತರಿಗೆ ಈತನ ಒಳ್ಳೆ ನಡತೆಯನ್ನೂ ವಿದ್ಯಾವಿಶೇಷಗಳನ್ನೂ ಕುರಿತು ಬರೆದ ಪತ್ರಿಕೆಗಳೂ ತನಗೆ ಹೊಸದಾ ಗಿ ಸ್ನೇಹಿತರಾದವರಿಗೆ ರಾಮಮೋಹನನು ಬರೆದ ಪತ್ರಗಳೂ ಈ ವಿಷಯವನ್ನು ದೃಢಪಡಿ ಸುತ್ತವೆ. ರಾಮಮೋಹನನು ತನ್ನ ಸಾಕುಮಗನಾದ ರಾಜಾರಾಮನು ತನ್ನ ಬಳಿಯಲ್ಲಿದ್ದರೆ ಕ್ರಮವಾದ ವಿದ್ಯಾಭಿವೃದ್ಧಿ ಪಡೆಯಲಾರನೆಂದು ತಿಳಿದು ಡೇವಿಸ೯ ಎಂಬ ತನ್ನ ಸ್ನೇಹಿತ