ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೨] ಜಯಸಿಂಹ ೮೬ ಇನ್ನು ಮೇಲೆ ತಾನು ನಿಶ್ಚಯವಾಗಿ ಸಾಯುತ್ತೇನೆಂದು ಜಯ ಸಿಂಹನು – “ ಮಹಾರಾಜಾಧಿರಾಜರೆ ನನಗೆ ಜೀವದಾನ ಕೊಡಿರಿ. ಶರಣು ಬಂದಿದ್ದೇನೆ... ” ರಜಪೂತವೀರನು ಎತ್ತಿದ ಭಾಲೆಯನ್ನು ಕೆಳ ಗಿಟ್ಟು “ ಮರಣಕ್ಕೆ ಹೆದರುವದೇಕೆ? ” ಎಂದು ಕೇಳಿದನು
- ಜಯಸಿಂಹನು- 14 ಮಹಾರಾಜ, ನಿಮಗೆ ಹೇಳುವದೇನು? ಇನ್ನೂ ನಾನು ಚಿಕ್ಕವನು ಜಗತ್ತಿನಲ್ಲಿ ಕೀರ್ತಿಯನ್ನು ದೊರಕಿಸಿ ಸಾಯಬೇಕೆಂದಿರುವೆನು ಕಳ್ಳರ ಗೆಳೆತನದಿಂದ ಕಳ್ಳನಾಗಿರುತ್ತೇನೆ ಅಲ್ಲದೆ ನಾನು ರಜಪೂತ ಕುಲೋತ್ಪನ್ನ ನು ದುರ್ಜನ ಸಹವಾಸದಿಂದ ಸಜ್ಜನರೂ ಕೆಟ್ಟು ಹೋಗುವದಕ್ಕೆ ನಾನೇ ಸಾಕ್ಷಿಯು, ಸ್ವಾಮಿ ಈ ನೀಚ ಕೆಲಸಕ್ಕೆ ನನ್ನ ಸ್ವಂತ ಬುದ್ದಿಯಿಂದ ಉದ್ಯುಕ್ತನಾದವನಲ್ಲ, ಜನರ ಜುಲುಮೆ ಯಿಂದ ಈ ಉದ್ಯೋಗವನ್ನು ಕೈಕೊಳ್ಳ ಬೇಕಾಯಿತು ಈ ಹೊತ್ತಿ ನಿಂದ, ಈ ಕ್ಷಣದಿಂದ, ಇನ್ನು ಮೇಲೆ ಮುಂದೆ ಎಂದೂ ಕಳವು ಮಾಡುವದಿಲ್ಲೆಂದು ತಮ್ಮ ಪಾದಸಾಕ್ಷಿಯಾಗಿ ಹೇಳುತ್ತೇನೆ. ಈ ಶರೀರ ದಲ್ಲಿ ಪ್ರಾಣವಿರುವವರೆಗೂ ತಮ್ಮ ದಾಸ್ಯವನ್ನು ಸ್ವೀಕರಿಸುವೆನು. ತಾವೀಗ ಕೊಡುವ ಪ್ರಾಣದಾನದ ಪ್ರತೀಕಾರವನ್ನು ಒಂದಿಲ್ಲೊಂದು ದಿವಸ ತೀರಿಸುವೆನು,
“ ನನ್ನನ್ನು ಗುರ್ತಿಸುವಿಯಾ ? ? • ಮಹಾರಾಣಾ ರಾಜಸಿಂಹನನ್ನು ಯಾರು ಗುರ್ತಿಸಲಿಕ್ಕಿಲ್ಲ? ರಾಜಸಿಂಹ_ ಹೋಗು ನಿನಗೆ ಜೀವದಾನ ಕೊಟ್ಟಿರುತ್ತೇನೆ. ಆದರೆ ಬ್ರಾಹ್ಮಣನನ್ನು ಕಷ್ಟಪಡಿಸಿದ್ದಕ್ಕೆ ಏನಾದರೂ ಅವಶ್ಯ ಶಿಕ್ಷೆಯ ಗಬೇಕು ನಿನ್ನನ್ನು ಶಿಕ್ಷಿಸದೆ ಹೋದರೆ ನಾನು ನನ್ನ ರಾಜಧರ್ಮಕ್ಕೆ ತಪ್ಪಿದಂತಾಗುವದು-' ಜಯಸಿಂಹ- “ ಮಹಾರಾಜಾಧಿರಾಚಾ, ಈ ಪಾಪಕರ್ಮದಲ್ಲಿ ನಾನು ಈಗೀಗ ಪ್ರವೇಶಿಸಿರುತ್ತೇನೆ ಆದ್ದರಿಂದ ನನಗೆ ಬಹಳ ಸ್ವಲ್ಪ ಶಿಕ್ಷಯಾಗಬೇಕು ಅದೇಕೆ ? ತಮ್ಮ ಸಮಕ್ಷವಾಗಿ ನಾನು ಶಿಕ್ಷೆಯನ್ನು ಅನುಭೋಗಿಸುವೆನು” ಎಂದು ತನ್ನ ಟೊಂಕ