ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦] | ತಂದೆಯ ಸಮ್ಮತಿಯು ಬೇಕೇಬೇಕು ೧೧೯' \ vv V \ \ V & \ \ \ VV # ಅಧವಾ ಆಕೆಯ ತಂದೆಯಕಡೆಗೆ ರೂಪನಗರಕ್ಕೆ ಕಳಿಸಬೇಕೊ ಎಂಬ ದನ್ನು ನಿಶ್ಚಯಿಸುವುದು ಆತನಿಗೆ ಕಠಿಣವೆನಿಸಿತು ಹಾಗು ಮನೋನಿಲ್ಲ ಯವಾಗುವವರೆಗೆ ಚಂಚಲಕುಮಾರಿಗೆ ಆತನು ಭೇಟಿ ಸಹ ಆಗಲಿಲ್ಲ ಇತ್ತ ಚಂಚಲಕುಮಾರಿಯ ಮನಸು ಎರಡು ಕಡೆಗೆ ಹರಿಯು ತಿತ್ತು ರಾಣಾನ ಈ ವರ್ತನವು ಅವಳಿಗೆ ಆಶ್ಚರ್ಯವೆನಿಸಿತು. ಆತನ ಮನಸಿನಲ್ಲಿ ನನ್ನನ್ನು ಅಗ್ನವಾಗಬೇಕೆಂಬ ಬಯಕೆ ಇದ್ದರೆ ಹೀಗೆ ಮೌನ ವನ್ನು ಧರಿಸುತ್ತಿದ್ದಿಲ್ಲ ಹಾಗಿದ್ದರೆ ನಾನು ಈ ಅಂತಃಪುರದಲ್ಲಿರುವುದು ನಾಚಿಕೆಗೇಡಿತನವು ಇನ್ನು ಮೇಲೆ ಇಲ್ಲಿ ಇರದೆ ಎಲ್ಲಿಹೋಗಲಿ ಎಂದು ಚಿಂತೆಯಲ್ಲಿ ಮುಳುಗಿದ್ದಳು ರಾಣಾನಮನಸ್ಸಿನಲ್ಲಿ ಯಾವದೂ ನಿಶ್ಚಯವಾಗಲೊಲ್ಲದು, ಚಂ ಚಲಕುಮಾರಿಯ ಭಾವವನ್ನು ತಿಳಿಯುವುದಕ್ಕೆ ತಾನೆ ಅವಳಲ್ಲಿಗೆ ಹೋ ಗಬೇಕಾಯಿತು ಹೋಗುವಕಾಲಕ್ಕೆ ಅನಂತಮಿತ್ರನು ತಂದಿದ್ದ ಚಂಚಲ ಕುಮಾರಿಯ ಸ್ವಹಸ್ತಲೇಖವನ್ನು ತೆಗೆದುಕೊಂಡನು. ರಾಣಾನು ಬಂದು ಆಸನದ ಮೇಲೆ ಕುಳಿತನು. ಚಂಚಲಕುಮಾ ರಿಯು ಎದ್ದು ರಾಣಾನಿಗೆ ನಮಸ್ಕರಿಸಿದಳು ನಮಸ್ಕರಿಸಿ ಆತನ ಸಮಿಾ ವದಲ್ಲಿ ತಲೆಬೊಗ್ಗಿಸಿಕೊಂಡು ನಿಂತಳು. ಚಂಚಲಕುಮಾರಿಯ ಸೌಂದರ್ಯ ವನ್ನು ಕಂಡೊಡನೆಯೆ ರಾಣಾನ ಮನಸ್ಸು ತೃಣಬಿಂದುವಿನಂತೆ ಚಂಚಲ ವಾಯಿತು. ಗಾಳಿಗೊಡ್ಡಿದ ದೀವಿಗೆಯಂತಿ ಹೊಯ್ದಾಡತೊಡಗಿತು. ಕೆಲಹೊತ್ತಿನಮೇಲೆ ಚದರಿಹೋದ ಮನಸನ್ನೆಲ್ಲ ಆತ್ಮಸಂಯಮನದಿಂದ ಆಕಲನಮಾಡಿಕೊಂಡನು. ತರುವಾಯ ಚಂಚಲಕುಮಾರಿಯನ್ನು ಕುರಿತು ಇನ್ನು ಮೇಲೆ ನಿಮ್ಮ ಮನಸ್ಸು ರೂಪನಗರಕ್ಕೆ ಹೋಗಬೇಕೆಂದಿರು ವುದೊ?ಇಲ್ಲಿಯೇ ಇರಬೇಕೆಂದಿರುವರೋ ?” ಎಂದನು. ಈ ಪ್ರಶ್ನೆಯನ್ನು ಕೇಳಿ ಚಂಚಲಕುಮಾರಿಯ ಅಂತಃಕರಣದಲ್ಲಿ ವೇದನೆಯುಂಟಾಯಿತು. ಆಕೆಯ ಬಾಯಿಂದ ಮಾತುಗಳು ಹೊರಡ ಲೊಲ್ಲವು ಸುಮ್ಮನೆ ನಿಂತುಬಿಟ್ಟಳು