Ivv \ ೧೩೪ ರಾಣಾ ರಾಜಸಿಂಹ [ಪ್ರಕರಣ •v 4 vs vs vvvvvvv •v » v/ ವಾಗಿ ಮಾಡಿಕೊಂಡು ಹೋಗುವದೂ, ದುಸ್ತರವಾಗಿತ್ತು ಯಾಂಕದರೆ ಹಾಗೆ ಮಾಡಬಹುದಾದಿಲ್ಲಿ, ರಜಪೂತರು ಹಿಂದಿನ ದಾರಿಯನ್ನು ಬಂದು ಮಾಡಿಬಿಟ್ಟರೆ ತಮಗೆ ಅನ್ನ ನೀರುಗಳನ್ನು ದೊರಕಿಸುವ ಉಪಾಯವಿಲ್ಲ ದಂತಾಗಿ ಸೇನೆಯು ಉಪವಾಸಬಿದ್ದು ಸಾಯಬೇಕಾಗುತ್ತಿತ್ತು ನಿಜ ವಾದ ಸೇನಾಪತಿಯು ಮೊದಲು ತನ್ನ ಸೇನೆಯ ಅನ್ನ ಸಾಮಗ್ರಿಯ ವ್ಯವಸ್ಥೆ ಯನ್ನು ನೋಡುತ್ತಿರುತ್ತಾನೆ, ಸೇನೆಯನ್ನು ಪ್ರಸಂಗಕ್ಕೆ ಒಟ್ಟು ಗೂಡಿಸುವದು ಉತ್ತಮ ಸೇನಾಪತಿತ್ವ ವ ರಾಜಸಿಂಹನು ತನ್ನ ಸೇನೆಯ ಯೋಚನೆಯನ್ನು ಬಹಳ ಚನ್ನಾಗಿ ಮಾಡಿದ್ದನು, ಅದರಿಂದ ಬಂಗಾಲ, ಹಾಗು ದಕ್ಷಿಣದಿಂದ ಬರುವ ಮುಸಲ್ಮಾನರ ಸೇನೆಯು ಉಲುಕಾಡದೆ ಸುಮ್ಮನೆ ನಿಂತು ಬಿಟ್ಟಿರುವಂತೆ ಮಾಡಿದ್ದನು ಆಗಲೇ ಮುಲ್ತಾನದ ಸೇನೆಯ ಧೂಳು ಹಾರಿ ಹೋಗಿತ್ತು ಈಗ ಒರೆ ಬಾದಶಹನೊಬ್ಬನು ಮಾತ್ರ ಉಳಿದನು. ೨೪ ನೆಯ ಪ್ರಕರಣ, ಪ್ರತಾಪರಾಯರೇ, ನಾನು ನಿಮ್ಮವಳು. - ದಿಲ್ಲೀಶ್ವರನನ್ನು ಇಲ್ಲಿಯೆ ಬಿಟ್ಟು ನಾವು ದಿಲ್ಲಿಗೆ ತೆರಳೋಣ, ನಮ್ಮ ಪೂರ್ವ ಪರಿಚಿತ ಪರ್ಣಕುಟಿಯಲ್ಲಿ ಪರಮಹಂಸ, ತಪಸ್ವಿನಿಯರ ಸ್ಥಿತಿಯು ಏನಾಗಿದೆ ನೋಡೋಣ. ರಾತ್ರಿಯ ಕಾಲ, ಕಣ್ಣಲ್ಲಿ ಬೆರಳು ಚುಚ್ಚಿದರೆ ಕಾಣಿಸದಷ್ಟು ದಟ್ಟಿತ್ತಾದ ಕತ್ತಲೆ, ಪ್ರಕೃತಿಯೆಲ್ಲವೂ ಮಸಿಯಿಂದ ತೊಡೆದು ಕೊಂಡಂ ತಿದೆ. ಇಂಧ ಸಮಯದಲ್ಲಿ ಪರ್ಣಕುಟಿಯಲ್ಲಿ ಆಗ್ನಿ ಕುಂಡದ ಬಳಿಯಲ್ಲಿ ತಪಸ್ವಿನಿಯು ಜಪಮಾಡುತ್ತ ಕುಳಿತಿರುವಳು ಜಪಮಾಡುತ್ತ ಅಗ್ನಿಕುಂಡ ದಲ್ಲಿ ಎಡಗೈಯಿಂದ ಕಟ್ಟಿಗೆಗಳನ್ನು ಸರಿಸುತ್ತಿರುವಳು, ಒಂದು ಮಗ
ಪುಟ:ರಾಣಾ ರಾಜಾಸಿಂಹ.djvu/೧೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.