೨೬] ಪ್ರ ತಾಪರಾಯರೇ, ನಾನು ನಿಮ್ಮವಳು ೧೩೫ 1 1 1 1 1 1 1 1110 1•r ಲಿಗೆ ಸಣ್ಣದೊಂದು ದೀವಿಗೆಯು ಮಿಣಿಮಿಣಿಯಾಗಿ ಉರಿಯುತ್ತಿದೆ. ಈ ಹೊತ್ತ ತಪಸ್ವಿನಿಯ ಚಿತ್ರವು ಸ್ವಸ್ಥ ವಿದ್ದಂತೆ ಕಾಣಿಸುವದಿಲ್ಲ, ಕಾರ ಣವೇನಿರಬಹುದು ? ಕ್ಷಣಕ್ಕೂಮ್ಮೆ ಮಾರ್ಗದ ಕಡೆಗೆ ಲಕ್ಷ್ಯಗೊಟ್ಟು ಯಾವನೋ ಬರುವದನ್ನು ನಿರೀಕ್ಷಿಸುತ್ತಿದ್ದಳು ಮಧ್ಯರಾತ್ರಿಯ ಸಮು ಯವಾಗುತ್ತ ಬಂತು ಅವಳ ವೃತ್ತಿಯು ಹೊಯ್ದಾಡಹತ್ತಿತು. ಹೊತ್ತು ಹೆಚ್ಚಾದಂತೆ ಚಿತ್ರವು ಹೆಚ್ಚು ಅಸ್ವಸ್ಥವಾಗ ತೊಡಗಿತು. ಇಸ್ಥಿತಿಯಲ್ಲಿ ಅವಳ ಬಾಯಿಂದ 'ಜಯಮಾತೆ, ಎಲ್ಲ ಭರವಸೆಯ ನಿನ್ನ ಮೇಲುಂಟು. ನೀನೇ ಯಶಕೊಡುವವಳು ನಿನ್ನ ಮಕ್ಕಳ ಕಲ್ಯಾಣಕ್ಕೆ ನಮ್ಮ ಈ ಪ್ರಯ ತ್ನವು ನಮ್ಮ ಎಲ್ಲ ಆಶೆಯ ಈ ಪ್ರಧಮಪ್ರಯತ್ನವನ್ನು ಅವಲಂಬಿಸಿರು ವದು, ಈ ಪ್ರಯತ್ನದಲ್ಲಿ ಯಶದೊರೆದರೆ ನಮ್ಮ ಸಾಹಾಯಕನಿಗೆ ಸ್ಟು ರಣ ಬರುವದು ಆದರೆ ಈವರೆಗೆ ಯಾವುದೂ ಗೊತ್ತಾಗಲಿಲ್ಲ, ಈಹೊ ತಿಗೆ ಆರು ದಿವಸಗಳಾದವು ಪ್ರತಾಪನ ಆಗಮನವನ್ನು ಒಂದೇ ಸವನೆ ನೋಡುತ್ತಿರುವೆನು ಆತನಾ ಬರಲಿಲ್ಲ ವೇಕೆ? ಯಾರೋ ಬರುವಂತಿದೆ. ಕುದುರೆಯ ಗೊರಸಿನಧ್ವನಿಯು ಕೇಳಬರುವರು. ಅವರು ಯಾರಿರಬ ಹುದು? ಹೌದು, ಆತನು ನಮ್ಮ ಸವಾರನೆ ಇರಬಹುದು. ತಾಯಿ, ಭವಾನಿ ಈಗಾದರೂ ಶುಭ ಸಮಾಚಾರವನ್ನು ನುಡಿಸು ಅಶುಭ ಸಮಾಚಾರ ಳನ್ನು ಕೇಳಿ ಕೇಳಿ ಕಿವಿಗಳು ದಡಸಿಕ್ಕಿಹೋಗಿವೆ. ” ಅವಳು ಸ್ವಲ್ಪ ಹೂತ್ತು ಸ್ತಬ್ದಳಾದಳು. ಇಷ್ಟರಲ್ಲಿ ಅಲ್ಲಿಗೆ ಇಬ್ಬರು ಸವಾರರುಬಂದರು. ಬಂದವರು ಕುದುರೆಯಿಂದಿಳಿದು ತಪಸ್ವಿನಿಗೆ ನಮಸ್ಕರಿಸಿದರು. ವಿಜಯ ಮದದಿಂದ ಪ್ರಫುಲ್ಲಿತವಾದ ಅವರ ನೇತ್ರಮುಖಗಳನ್ನು ನೋಡಿದಳು. ಶುಭಸಮಾಚಾರವೆಂದು ತಪಸ್ವಿನಿಗೆ ಗೊತ್ತಾಯಿತು, ಕೂಡಲೆ ಅವಳು ಬಾಳಾ, ಪ್ರತಾಪ, ಜಯವೊ ಅಪಜಯವೊ?” ಎಂದು ಕೇಳಿದಳು. “ಮಾತಾಜಿ, ತಮ್ಮ ವೀರಪುತ್ರರು ಅಪಯಶದಿಂದ ಕಪ್ಪಾದ ಕಲಂ ಕಿತ ಮುಖವನ್ನು ತೋರಿಸುವುದಕ್ಕೆ ಪುನಃ ಇಲ್ಲಿಗೆ ಎಂದಾದರೂ ಬರುವ ದುಂಟೆ? ” ಎಂದನು.
ಪುಟ:ರಾಣಾ ರಾಜಾಸಿಂಹ.djvu/೧೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.