ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮] ೨೮] ಪಂಜರದೊಳಗಿನ ಸಿಂಹ ೧೫೫ wwwy ಇದು ಅವರ ಮೊದಲನೆ ಹಸ್ತೆಯು , ಅದನ್ನು ತೀರಿಸಿ ಪಾವತಿ ತೆಗೆದು ಕೊಳ್ಳುವದಕ್ಕೆ ನಿಮ್ಮನ್ನು ಇಲ್ಲಿಗೆ ಕರೆಸಿರುವರು ? ಬ- ಆದರೆ ಈವರೆಗೆ ನೀವು ಬಾದಶಹನ ಪರಾಕ್ರಮ ವನ್ನು ನೋಡಿರುವಿರೆಲ್ಲಿ? ಇನ್ನು ಯಾವದೂ ಇಲ್ಲದ, ಆಕಾಶಕ್ಕೆ ನಿಚ್ಚ ಣಿಕೆಯನ್ನು ಹಚ್ಚಲೆತ್ನಿ ಸಿರುವಿರಿ? ಚಂಚಲೆ-« ನಾವು ಆಕಾಶಕ್ಕೆ ನಿಚ್ಚಣಿಕೆಯನ್ನು ಹಚ್ಚುವದು ನಿಮ್ಮ ತಂದೆಗೆ ಗೊತ್ತಿದೆ ನೀವೂ ಬೇಗಮ್ಮ ಸಾಹಒರೂ ನನ್ನ ದಾಸಿ ಯರಾದದ್ದು ನಿಮ್ಮ ಲಕ್ಷದಲ್ಲಿ ಬರಲಿಕ್ಕಿಲ್ಲ ? ” ಉದೇಪುರಿ- ಆಲಮಗೀರ ಬಾದಿಶಹನ ಬೇಗಮ್ಮಳು ನಿನ್ನ ದಾಸಿಯ! ಚಂಚಲೆ-ic ನಿಜ ಝಬ– ಈ ಮಾತು ನಿನಗೆ ಪೂರಾಜ್ಞಾಪಕವಿರಲಿ, ಸ್ವಲ್ಪ ಹೊತ್ತಿನಲ್ಲಿ ಈ ನಿಮ್ಮ ಶಬ್ದವನ್ನು ನಾನೇ ಹೇಳುವೆನು ” ಚಂಚಲೆ ಅದೆಲ್ಲ ಸ್ವಪ್ನ ಸೃಷ್ಟಿಯಲ್ಲಿ ' ಉದೇಪುರಿ- ಒಳ್ಳೇದು, ಆಗಲಿ, ನಿಮ್ಮ ಸೊಕ್ಕಾದರೂ ಎಷ್ಟ ದೆ ನೋಡುತ್ತೇನೆ ? ಚಂಚಲೆ- ಮುಂದೆ ನೀವು ನೋಡುವದೇನು? ಈಗ ಸದ್ಯಕ್ಕೆ ಔರಂಗಜೇಬನು ಪಂಜರದಲ್ಲಿ ಸಿಕ್ಕಿರುತ್ತಾನೆ; ಅದನ್ನು ನೋಡಿರಿ, ನಾಳೆ ಬೆಳಿಗ್ಗೆ ತಹ ಮಾಡಿಕೊಳ್ಳದಿದ್ದರೆ ಆತನು ಅನ್ನ ನೀರಿಲ್ಲದೆ ಸಾಯುವನು'? ಇದನ್ನು ಕೇಳಿ ಇಬ್ಬರೂ ಸ್ತಬ್ಧರಾದರು, ಅವರ ಬಾಯಿಂದ ಶಬ್ದಗಳು ಹೊರಡಲೊಲ್ಲವು, ತಮ್ಮ ಸ್ಥಿತಿಯ ಸ್ವರೂಪವು ತಮಗೆ ತಿಳಿದು ಬಂತು. ಇಬ್ಬರ ಕಣೋಳಗಿಂದ ಆಶ್ರಸ್ರಾವವಾಗಹತ್ತಿತು. ನಾವು ಸಮ್ರಾಟನ ಬೇಗಮ್ಮ ಹಾಗು ಮಗಳಿದ್ದು ನಮ್ಮ ದೈವದಲ್ಲಿ ದಾಸ್ಯವೆ ? ಇದು ಎಂಧ ಅಪಮಾನವು! ಬಾದಶಹನ ಐಶ್ವರ್ಯದಿಂದ ಇತರರನ್ನು ತುಚ್ಛವಾಗಿ ಎಣಿಸುವ ಆಸ್ತ್ರೀಯರಿಗೆ ಈ ದುಃಖವು ಅಸಹ್ಯವಾಯಿತು.