೧೮೪ ರಾಣಾ ರಾಜಸಿಂಹ [ಪ್ರಕರಣ M೨ ಆಮೇಲೆ ಸವಿಾಪದಲ್ಲಿರುವ ಆಸನದಮೇಲೆ ಕುಳಿತುಬಿಟ್ಟರು ಕೆಲಹೂ ನಮೇಲೆ ಆ ಸುಂದರಿಯು ತನ್ನಷ್ಟಕ್ಕೆ ಈವರೆಗೆ ಆದದ್ದೆಲ್ಲ ಸರಿ ಯಾಯಿತು ವನಶ್ರೀಯ ಅವಲೋಕನದಲ್ಲಿ ತಲೆಮಟ್ಟ ಮುಳುಗಿ ಹೋಗಿ ದ್ದರೂ ಮನಸ್ಸಿಗೆ ತೃಪ್ತಿಯಿಲ್ಲ, ಈವರೆಗೆ ಅಪ್ಪನು ಒರಲಿಲ್ಲ ವೇಕೆ ? ತಪಸ್ವಿನೀ ಮಾತೆಯು ಈ ಕಾಲಕ್ಕೆ ನಿನ್ನ ತಾಯಿತಂದೆಗಳ ಸಂಗತಿಯನ್ನು ಹೇಳಿ ಅವರನ್ನು ತೋರಿಸಿಕೊಡುವೆನೆಂದು ಆಶ್ವಾನಕೊಟ್ಟವಳು ಇನ್ನೂ ಬರಲಿಲ್ಲ ” ಹೀಗಂದು ಆಕೆ ಮರಳಿನೋಡಿದಳು. ಪರಮಹಂಸ, ತಪಸ್ವಿ ನಿಯರು ಕುಳಿತುಕೊಂಡಿದ್ದರು ಅವರನ್ನು ಕಂಡು ಅವಳಿಗೆ ಆಶ್ಚರ್ಯ ವಾಯಿತು ಅದರೊಡನೆ ಸ್ವಲ್ಪ ಲಜ್ಜೆ ಯ ಉತ್ಪನ್ನವಾಯಿತು ಅರಳ ಬಾಯಿಂದ ಶಬ್ದ ಗಳು ಸಹ ಹೊರಡಲೊಲ್ಲವು, ಅದನ್ನು ಕಂಡು ಪರಮ ಹಂಸನು -'ಮಗಳೆ, ಇತ್ತಬಾ, ನೀನು ನಿನ್ನ ಮಾತಾಪಿತರನ್ನು ನೋಡು ವದಕ್ಕೆ ಇಷ್ಟು ತತ್ಪರಳಾದದ್ದು ನನಗೆ ಈವರೆಗೂ ಗೊತ್ತಿರಲಿಲ್ಲ ಈಹೊತ್ತು ನಿನ್ನ ಆತ್ಮಗತ ಸಂಭಾಷಣೆಯ ಮೇಲಿಂದ ತಿಳಿದು ಕೊಂಡೆನು. ಅವರ ಭೆಟ್ಟಿಗಾಗಿ ಹಗಲು ರಾತ್ರಿಯ ಉತ್ಸುಕಳಾಗಿ ವ್ಯಸನಪಡುವಂತೆ ಕಾಣುತ್ತದೆ ತರುಣಿ-ಪಿತಾಜಿ, ನನಗೆ ಕೆಲಸವಿಲ್ಲದ ವೇಳೆಯಲ್ಲೆಲ್ಲಾ ಬಹಳ ಮಾಡಿ ಇದೇ ವಿಚಾರದಲ್ಲಿರುವೆನು, ನಾನು ಮೇಲೆಮೇಲೆ ಆನಂದ ವುಳ್ಳವಳಂತೆ ಕಾಣಿಸುತ್ತಿದ್ದಾಗ್ಯೂ ಅಂತರಂಗದಲ್ಲಿ ಇದೇ ವಿಚಾರವು ನೆಲೆಗೊಂಡಿರುತ್ತದೆ ನೀವು ವಚನ ಕೊಟ್ಟಂದಿನಿಂದಲೂ ಈಹೊತ್ತಿನ ದಿವ ಸವು ಎಂದು ಬರುವದೆಂತಲೆ ದಾರಿಯನ್ನು ನೋಡುತ್ತಿದ್ದನು ಅಹಾ, ಹಾ, ಮಾತೆ, ಮಾತೆ, ನಿನ್ನ ಪ್ರೇಮ ಪಾತ್ರಳಾದ ಈ ಬಾಲಿಕೆಯು ಒಂದಾ ವರ್ತಿ ಆತ್ಮಾರ್ಪಣ ಮಾಡುವದಕ್ಕೆ ಸಿದ್ಧಳಾಗಿದ್ದಳು. ಆದರೆ ತಪಸ್ವಿನೀ ಮಾತೆಯು ಆ ದಿವಸ ನನ್ನನ್ನು ಆತ್ಮಘಾತದಿಂದ ಪರಾವೃತ್ತಳನ್ನಾಗಿ ಮಾಡಿದಳು ಆಹೊತ್ತಿನಿಂದಲೂ ತಾಯಿತಂದೆಗಳನ್ನು ಸ್ಮರಿಸುತ್ತಿರುವೆನು. ಅಪ್ಪಾ, ಈ ಹೊತ್ತಿನವರೆಗೆ ತಮ್ಮ ನ್ನು ತಂದೆಯಂತೆಯ ಭಾವಿಸುತ್ತಿದ್ದೆನು!
ಪುಟ:ರಾಣಾ ರಾಜಾಸಿಂಹ.djvu/೨೦೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.