ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣಾ ರಾಜಸಿಂದ ೧ ೧ ೧ ೧ ೧ [ಪ್ರಕರಣ n ಎರಡನೆಯ ಪ ಕರಣ. << ಚಿತ್ರ ಮಾರುವವಳು ಒಳ್ಳೇ ಮಧ್ಯಾನ್ನದ ಸಮಯ ಸೂರ್ಯನು ನೆತ್ತಿಯಮೇಲೆ ತನ್ನ ಉಜ್ವಲವಾದ ಕಿರಣಗಳಿಂದ ಪ್ರಜ್ವಲಿಸುತ್ತಿರುವನು ಮಾನವ ಪ್ರಾಣಿಯತ್ತಟ್ಟಿಗಿರಲಿ, ಪಶುಪಕ್ಷಿಗಳು ತಮ್ಮ ತಮ್ಮ ಉದರಪೋಷಣೆ ಯನ್ನು ಬಿಟ್ಟು ವೃಕ್ಷಗಳ ನೆರಳಲ್ಲಿ ಸ್ವಸ್ಸ ಕುಳಿತಿರುತ್ತವೆ ಈ ಸಮಯ ದಲ್ಲಿ ರೂಪನಗರದ ರಾಜಮಾರ್ಗದಲ್ಲಿ ಒಬ್ಬ ಮುಸಲ್ಮಾನ ಜಾತಿಯ ವೃದ್ಧೆಯು ಒಗಲಲ್ಲಿ ಗಂಟಿಟ್ಟು ಕೊಂಡು ತ್ವರಯಿಂದ ರಾಜಮಹಾಲಿನ ಕಡೆಗೆ ನಡೆದಿರುತ್ತಾಳೆ ಏಳು ತಾಸು ಹೊತ್ತೇರಿದ್ದರಿಂದ ಕಾಲುಗಳು ಹುರಪಳಿಸುತ್ತಿದ್ದವು ಆದರೆ ಕಾಲಲ್ಲಿ ಜೋಡು ಇದ್ದದ್ದರಿಂದ ಆಕೆಗೆ ಅದರ ಅನುಭವವಾಗುತ್ತಿದ್ದಿಲ್ಲ ಪ್ರಖರವಾದ ಸೂರ್ಯತಾಪದಿಂದ ಮೈಯಲ್ಲಿ ಬೆವರು ಸುರಿಯುತ್ತಿರುವುದರಿಂದ ಅರಿವಗಳಲ್ಲಿ ಮಾತ್ರ ಒದ್ದ ಯಾಗಿದ್ದವು , ಮತ್ತು ಮುಖಮುದ್ರೆಯಿಂದ ಆಕೆಯು ಬಹುದೂರದಿಂದ ನಡೆದು ಒಂದಿರಬೇಕಂದ ಆಕೆಗೆ ಎಶಾಂತಿಯು ಬೇಕಾಗಿತ್ತೆಂದೂ ಸಹಜ ಕಂಡುಬರುತ್ತಿತ್ತು ಸುಗೈವದಿಂದ ರಾಜವಾಡಯು ಸವಿಾಪಿಸಿದ್ದರಿಂದ ಅವಳಿಗೆ ಬಹಳ ಆನಂದವಾಯಿತು ಆದಷ್ಟು ತೀವ್ರವಾಗಿ ನಡೆದು ಅರಮ ನೆಯ ಹೆಬ್ಬಾಗಿಲಿಗೆ ಬಂದು ಮುಟ್ಟಿದಳು | ರೂಪನಗರವು ಸಣ್ಣ ಊರಿದ್ದಾಗ್ಯೂ ಅರಮನೆಯ ಸೌಂದರ್ಯವ ನೋಡತಕ್ಕಂಧದಿತ್ತು ಎಷ್ಟೋ ಕಲಾಕೌಶಲ್ಯದ ಕಲಸಗಳು ಅಲ್ಲಿ ಶೋಭೆ ಸುತ್ತಿದ್ದುವು, ಅದರೊಳಗೂ ದಿವಾಣಖಾನಯ ಶೃಂಗಾರವು ಪ್ರೇಕ್ಷ £ಪೀಯವಾಗಿತ್ತು. ವಾಚಕರೆ, ನಿಮ್ಮ ಆಯುಷ್ಯದಲ್ಲಿ ಒಮ್ಮೆಯಾದರೂ ಅದನ್ನು ಕಂಡು ನಿಮ್ಮ ಜನ್ಮವನ್ನು ಸಾರ್ಧಕಮಾಡಿಕೊಳ್ಳಿರಿ.