೬೦ YY * * • • • • ••• ರಾಣಾ ರಾಜಸಿಂಹ [ಪ್ರಕರಣ - • ~ .. ಕುಳಿತು ಕೊಳ್ಳಿರಿ ಒಳಗಿನಿಂದ ಯಾರಾದರೂ ಹೊರಬಿದ್ದ ಕೂಡಲೆ ಅವರನ್ನು ಕೈದು ಮಾಡಿ ನನ್ನ ಕಡೆಗೆ ತೆಗೆದು ಕೊಂಡು ಬನ್ನಿರಿ ಪಟ್ಟಣಕ್ಕೆ ಹೋಗಿ ನಿಮ್ಮ ಸಹಾಯಕ್ಕಾಗಿ ಬೇರೆಯವರನ್ನು ಕಳಿಸುತ್ತೇನೆ ರಮ ಜಾನ, ಹಾಗೂ ಸಮಶೇರ, ನೀವಿಬ್ಬರೂ ಇಲ್ಲಿ ಪಹರೆಗೆ ನಿಲ್ಲಿರಿ, ಲಕ್ಷಎಡಿರಿ, ಎಚ್ಚರದಿಂದ ನಿಲ್ಲಿರಿ ” ಎಂದು ಆಜ್ಞಾಪಿಸಿ, ಕುದುರೆ' ಮೇಲೆ ಕುಳಿತು, ಉಳಿದಿಬ್ಬರು ಸ್ವಾರರೊಡನೆ ದಿಲ್ಲಿಗೆ ಹೊರಟು ಹೋದನು ಜಯಸಿಂಹನು ಸ್ವಲ್ಪ ದೂರ ಹೋದ ಮೇಲೆ ರಮಜಾನನು ಸಮಶೇರನನ್ನು ಕುರಿತು ನಮ್ಮ ಪೂರ್ವದ ವಾಪ, ಈ .ಶಾಚಿಯ ಕೈಯ್ಯಲ್ಲಿ ಸಿಕ್ಕು ಬಿದ್ದೆವು. ಇಲ್ಲದೆ ಹೋದರೆ ಇಷ್ಟು ಹೊತ್ತಿಗೆ ಮನೆಗೆ ಹೋಗಿ ಆರಾಮ ಉಂಡು ಮಲಗುತ್ತಿದ್ದೆವು. ಎಂದನು | ಆಮೇಲೆ ಸುಶರನು, ಗೆಳೆಯಾ, ನನಗಂತೂ ಅತಿಶಯ ಹಸಿವೆಯಾ ಗಿದೆ ಈ ಗುಡಿಸಲಿನಲ್ಲಿ ತಿನ್ನುವ ಪದಾರ್ಥವೇನಾದರೂ ಅದೆಯೋ ಹ್ಯಾಗೆ ನೋಡು ? ” ಎಂದನು, ರಮಜಾನನು ಒಳಗೆ ಹೊಕ್ಕು ಹೊರಗೆ ಬಂದು ಸಮ ಶೇರನನ್ನು ಕುರಿತು, ಒಳಗೆ ಯಾರೂ ಇಲ್ಲ, ನಾವು ಪಹರೆಯನ್ನು ಯಾಕೆ ಮಾಡಬೇಕು' ಎಂದನು ಅದಕ್ಕೆ ಸಮಶೇರನು ಏನಂದಿ' ಒಳಗೆ ಯಾರೂ ಇಲ್ಲ ವೇ ” ನೋಡೋಣನಡೆ ? ಎಂದು ಇಬ್ಬರೂ ಒಳಗೆ ಹೋದರು ರಮಜಾನನು ಏನೋ ಹೇಳುವವನಿದ್ದನು ಸಮಶೇರನು ಅವನನ್ನು ನಿಲ್ಲಿ ಸಿದನು. ಇಬ್ಬರೂ ಆಗ್ನಿ ಕುಂಡದ ಕಡೆಗೆ ನೋಡಹತ್ತಿದರು ಸಮಶೇರನು ರಮಜಾನನ್ನು ನೋಡ ಹತ್ತಿದನು, ರಮಜಾನನು ಬೆರಳುಹಿಡಿದು ಸುಮ ನಿರಲಿಕ್ಕೆ ಸನ್ನೆ ಮಾಡಿದನು. ಅಗ್ನಿ ಕುಂಚದ ಕೆಳಭಾಗದಲ್ಲಿ ಸುಸ್ವರವಾದ ಗಾಯನದಧ್ವನಿಯು ಕೇಳಬರಹತ್ತಿತು ಅಗ್ನಿಕುಂಡದ ಕೆಳಭಾಗದಲ್ಲಿ ಗಾಯನವೆ ? ಇದೊಳ್ಳೆ ಆಶ್ಚರ್ಯವಾದದ್ದು ಅವರಿಬ್ಬರೂ ಗಾಬರಿಯಾದರು. ಮೊದಲು ಅವರಿಬ್ಬರ ಮನಸ್ಸಿನಲ್ಲಿಯ ಪಿಶಾಚಿಯ ಸಂಬಂಧದ ವಿಚಾರಗಳು ಬರಹತ್ತಿದವ ಆದರೆ ಅವರಿಬ್ಬರೂ ಧೈರ್ಯವಂತರಿದ್ದದರಿಂದ ನಿಶ್ಚಯ ಮಾಡಿಕೊಳ್ಳುವದ
ಪುಟ:ರಾಣಾ ರಾಜಾಸಿಂಹ.djvu/೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.