ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಯಸಿಂಹ ೮೫ • ••• SV• • • • • • •••••• • • • • • GC ಒಂದು ಮುತ್ತಿನಹಾರ, ಐದು ಮೊಹರು, ಎರಡು ಪತ್ರಗಳು “ ಒಳ್ಳೇದು, ನೀವು ಇಲ್ಲಿಯ ನಿಲ್ಲಿರಿ, ಅವರು ಹೋದದ್ದನ್ನು ನಾನು ನೋಡಿದೆನು ನಾನು ಈಗ ಬರುತ್ತೇನೆ ಮರಳಿ ಬರುವ ವರೆಗ ಎಲ್ಲಿಗೂ ಹೋಗಬೇಡಿರಿ.' « ಆದರೆ ನೀವು ಒಬ್ಬರು, ಅವರು ನಾಲ್ಕು ಜನರು ? “ ಸ್ವಾಮಿ, ನಾನು ರಜಪೂತನು. ಯಾರೆಂಬದು ನಿಮಗೆ ತಿಳಿ ದೀತು ” ಆ ಸವಾರನು ಪ್ರತಾಪಶಾಲಿಯಾದ ಯೋದ್ದನಂತಿದ್ದನು ಆತನ ನಡುವಿನಲ್ಲಿದ್ದ ಕತ್ತಿ ಪಿಸ್ತೂಲು, ಕೈಯ್ಯಲ್ಲಿ ಮೊನೆಯಾದ ಭಾಲೆ ಇವುಗಳನ್ನು ನೋಡಿ ಅನಂತ ಮಿತ್ರನು ಸ್ತಬ್ಧನಾದನು ಸವಾರನು ಕಳ್ಳರು ಹೋದ ಮಾರ್ಗದಿಂದ ಹೊರಟು ಹೋದನು. ಗಿಡಗಳ ಗುಂಪಿನಲ್ಲಿ ದಾರಿ ಗೊತ್ತಾಗಲಿಲ್ಲ. ಪೂನಃ ಶಿಖರದ ಮೇಲೇರಿ ದನು, ಕಳ್ಳರು ಅಡ್ಡಡ್ಡಾಗಿ ಹೋಗುವದು ಕಂಡುಬಂತು ಅವರು ಎಲ್ಲಿಯ ವರೆಗೆ ಹೋಗುತ್ತಾರೋ ನೋಡಬೇಕೆಂದು ಅಲ್ಲಿ ನಿಂತನು. ಕಡೆಗೆ ಒಂದು ಕಂಟಿಯ ಬಳಿಗೆ ಅವರು ಕುಳಿತಂತೆ ಕಂಡಿತು, ಅದನ್ನು ಗುರ್ತಿ ಟ್ಟು ಕೊಂಡು ಮೆಲ್ಲ ಮೆಲ್ಲನೆ ಅಲ್ಲಿಗೆ ಬಂದನು. ಆ ಪೊದೆಯ ಸಮಿಾಪಕ್ಕೆ ಬಂದಕೂಡಲೆ ಅವರು ಮಾತಾಡುವಂತೆ ಕೇಳಿಸಿತು ಈವರೆಗೆ ಬಂದಮೇಲೆ ಅವರು ನಾಲ್ವರು, ನಾನು ಒಬ್ಬನೆಂಬ ವಿಚಾರವು ಅವನಿಗೆ ಉಂಟಾಯಿತು. ಎಂಧ ಪ್ರಸಂಗವು ಬರುವದೋ? ಒಳಗೆ ಹೋಗುವದು ಸಂಕಟದ ಕೆಲಸ, ಈ ರೀತಿ ಸ್ವಲ್ಪ ಹೊತ್ತು ಚಿಂ ತಿಸಿ ಕಡೆಗೆ “ ರಜಪೂತನಿಗೆ ಸಾವಿನಭಯವೆ? ವ ರಣದ ಅಂಜಿಕೆಯಿಂದ ರಜಪೂತನು ಕೈಕೊಂಡ ಕೆಲಸವನ್ನು ಕೊನೆಗಾಣಿಸದಿರುವದೆ? ಎಂದಂ ದುಕೊಂಡು ಮೆಲ್ಲ ಮೆಲ್ಲನೆ ಆ ಕಂಟಿಯ ಬಾಗಿಲಿಗೆ ಬಂದನು, ಒಂದು ವೇಳೆ ಅವರು ಕಳ್ಳರಲ್ಲದಿದ್ದರೆ ಅನ್ಯಾಯವಾಗುವದೆಂದು ಮೊದಲು ಕಿವಿಕೊಟ್ಟು ಅವರ ಮಾತು ಕೇಳಹತ್ತಿದನು, ಕಳವಿನ ಒಡವೆಗಳ ಪಾಲು ನಡೆದಿತ್ತು. ಅವರೇ ಕಳ್ಳರೆಂದು ನಿಶ್ಚಯವಾಯಿತು. ತಟ್ಟನೆ ಪೊದೆಯನ್ನು 4 ೩೩೦ 441°