ಈ ಪುಟವನ್ನು ಪ್ರಕಟಿಸಲಾಗಿದೆ
೧೨
ರಾಮಚಂದ್ರಚರಿತಪುರಾಣಂ


ಕಂ|| ತನು ನಾಲ್ಸಾಸಿರ ವಿಲ್ನಿಡಿ
ದೆನಿಕ್ಕುಮಾಯುಷ್ಯಮೆರಡು ಪಳಿತೋಪಮಮಂ
ದಿನ ಮನುಜರಕ್ಷ ಫಲದನಿ
ತೆನಿಪ ರಸಾಯನಮನೆರಡು ದಿವಸಕ್ಕುಣ್ಬರ್||೬೭||

ಮತ್ತಮಾಕಾಲಂ ಮೂರು ಕೋಟಿ ಕೋಟಿ ಸಾಗರೋಪಮಂ ಕಳಿದಿಂಬಳಿ
ಯಂ ಸುಷಮದುಷ್ಷಮಮೆಂಬ ಮೂರನೆಯ ಕನಿಷ್ಠಭೋಗ ಭೂಮಿಸ್ಥಿತಿಯಾದು
ದಂದಿನ ಮಿಥುನಂಗಳ್---

ಕಂ||ಅಳವಿಯ ಲೆಕ್ಕಂ ತಮ್ಮೊಳ್
ಪಳಿತೋಪಮಮಾಗೆ ದೇಹಮಿರ್ಛಾಸಿರ ವಿಲ್||
ಬಳೆಯೆ ಸುಧಾಸಾರಮನಾ
ಮಳಕಫಲ ಪ್ರತಿಮಮಂ ದಿನಾಂತರಮುಣ್ಬರ್

ಮತ್ತಮಾ ಜಘನ್ಯ ಭೋಗ ಭೂಮಿಪ್ರವರ್ತನಮೆರಡು ಕೋಟಿ ಕೋಟಿ ಸಾಗ
ರೋಪಮದ ಕಡೆಯ ಪಳಿತೋಪಮದೆಂಟನೆಯ ಭಾಗಮುಳಿಯೆ ಬಳಿಯಂ ಕುಲ
ಧರಾವತಾರಮಕ್ಕುಮದೆಂತೆನೆ---

ಕಂ||ಅಜ್ಞಾನತ್ರಯ ರಹಿತರ್
ತ್ರಿಜ್ಞಾನ ಧರರ್ ವಿದೇಹದಿಂ ಬಂದಧಿಕ
ಪ್ರಜ್ಞ‌ರ್ ಪುಟ್ಟುವರೀ ನೆಲ
ನಾಜ್ಞಾಮುದ್ರಿತಮೆನಲ್ ಚತುರ್ದಶ ಮನುಗಳ್

ಅಲ್ಲಿ ಮೊದಲ ಕುಲಧರಂ ಪ್ರತಿಶ್ರುತಿಯೆಂಬಂ---
ಕಂ!! ಬಲವರ್ಪ ಕಾಲಪುರುಷನ
ಕಲಧೌತ ವಿಶಾಲ ಕರ್ಣಕುಂಡಲ ಯುಗಮಂ ||
ಗೆಲೆವಂದು ಸೂರ್ಯ ಶಶಿ ಮಂ
ಡಲಮಾಸುರಮಾಗೆ ಗಗನದೆರಡುಂಕೆಲದೊಳ್||೭೦||

ಅವಂ ಕಾಣಲೊಡಮಂದಿನ ಯುಗಳಮುತ್ಪಾತ ಯುಗಳಮೊಗೆದುದೆಂದು
ಭೀತಮಪ್ಪುದುಂ ಜ್ಯೋತಿರಂಗ ತರು ತೇಜೋಭಂಗದಿಂ ಕಾಣಲಾದುವಿವು ಚಂದ್ರಾ
ದಿತ್ಯ ವಿಮಾನಂಗಳೆಂದುಮೊಳವಿಲ್ಲಿಂದಿತ್ತಲಿಂತೆ ತೋರ್ಕುಮಿವರ್ಕೆ' ಬೆರ್ಚದಿರಿ
ಮೆಂದವರ ಮನದ ಸಂಕೆಯಂ ಕಳೆದನಾತನಿಂ ಬಳಿಯಮೆರಡನೆಯ ಕುಲಧರಂ
ಸನ್ಮತಿಯೆಂಬಂ