ಕಂ||ಕಿಸುಸಂಜೆ ೧ಪರ್ವೆ,ಮರ್ವ
ರ್ವಿಸೆ,ತಾರಾನಿಕರಮೊಗೆಯೆ,ಬೆಳ್ಕುತ್ತರ್ ಬೆ ॥
ಕಸಮುತ್ತರ್,ಭಯರಸದಿಂ
ದೆಸೆಗೆಟ್ಟರ್ ಕಂಡದೃಷ್ಟ ಪೂರ್ವಮನಾರ್ಯರ್ ||೭೧||
ಅ೦ತು ಭಯಸ್ಥರಾದಾರ್ಯರಂ ಕಂಡು ಸೂರ್ಯ ಕಿರಣಮಸ್ತಮಯ ಸಮಯ
ದೊಳ್ ತಪ್ತ ತಪನೀಯಮಯಮೆನಿಪ್ಪ ನಿಷಧ ನಗದ ನೆಗೆದ ಕೆ೦ಬೊಳಪಿನೊಳ್
ಪಳಂಚೆ ರಂಜಿಸಿದ ಸಂಜೆ, ಪರೆಯೆ ಕವಿದ ಕಳ್ತಲೆಯೊಡನೆ ತಾರಾ ಗ್ರಹ ನಕ್ಷತ್ರಂ
ತಲೆದೋಳುಗುಮಿಲ್ಲಿಂದಿತ್ತಲಹೋರಾತ್ರ ಭೇದಮಕ್ಕುಮೆಂದವರ ಮನೋವಿಷಾದ
ಮಂ ಕಳೆದನಾತನಿಂ ಬಳಿಯಂ ಮೂರನೆಯ ಕುಲಧರಂ ಕ್ಷೇಮಂಕರನೆಂಬಂ
ಸಿಂಹ ಶರಭ ಶಾರ್ದೂಲ ವ್ಯಾಳ ಮೃಗ ಮಿಥುನಂಗಳ್ ಕಾಲಸ್ವಭಾವದಿಂ
ಋಜುಸ್ವಭಾವಮಂ ಪತ್ತುವಿಟ್ಟು ವಿಷಮ ಸ್ವಭಾವಮನಪ್ಪು ಕೆಯ್ವುದುಂ--
ಕಂ||ವಿಪರೀತಮಾದ ಮೃಗಕುಲ
ದುಪದ್ರವಂ ನಿಮಗೆ ದಂಡ ಪಾಶಾದಿಗಳಿ೦||
ದಪಹರಿಸುಗುಮೆಂದಾರ್ಯ
ರ್ಗುಪದೇಶಂಗೆಯ್ದು ಕಳೆದನವರೆರ್ದೆವರಲಂ||೭೨||
ಆತನಿಂ ಬಳಿಯಂ ನಾಲ್ಕನೆಯ ಕುಲಧರಂ ಕ್ಷೇಮಂಧರನೆಂಬನಂಧಕಾರ
ಮಪ್ಪುದುಂ ಪ್ರಜೆಗುಪದ್ರವಮಂ ಕ್ಷುದ್ರ ಪಶುಮೃಗ ಯುಗಂಗಳೊಡರಿಸೆ--
ಕಂ||ರವಿರಶ್ಮಿಗಳಿ೦ ಪುಟ್ಟಸಿ
ರವಿಕಾಂತೋಪಲ ಕೃಶಾನುವಂ ಕೋರ್ಮಿಗಮಂ||
ದಿವಸದವಸಾನ ಸಮಯದೊ
ಳವನಂಜಿ೨ಸುವೊಂದುಪಾಯಮಂ ಪ್ರಜೆಗಿತ್ತಂ||೭೩||
ಆತನಿಂ ಬಳಿಯಮಯ್ದನೆಯ ಕುಲಧರಂ ಸೀಮಂಕರನೆಂಬಂ ಕಲ್ಪತರುಗಳಲ್ಪ
ಫಲದಂಗಳಾಗೆ ಭೋಗಭೂಮಿಜರ್ ತಮತಮಗೆ ನೆರೆಯವೆಂಬ ಸಂಕಲ್ಪದಿಂ--
ಕಂ॥ಓರೊರ್ವರ ಸುರ ತರುಗಳ
ನೋರೊರ್ವರಿವೆಮ್ಮ ವೆಂಬುದುಂ ಪೂರ್ವ ಸ್ವೀ||
ಕಾರ ವ್ಯವಸ್ಥೆ ನಿಲೆ,ಸಾ
ಧಾರಣ ಸೀಮಾವಿವಾದಮಂ ಬಾರಿಸಿದಂ
||೭೪||
1. ಪೆರ್ಚಿಮರ್ವಿಸೆ. ಕ. ಖ. ; ಪೆರ್ಚಿನುರ್ವಿಸೆ | ನಿಸಿ
2. ಸಿಮಂ , ಕ, ಖ, ಗ, ಘ,