ಮ||ಸ್ರ|| ಇನನಂ ಶೀತಾಂಶುವಂ ಮಂಜಿನ ಮುಗಿಲ ಪೊಡರ್ಪಿಂ,ಜನಂ ಕಾಣದಾಕ೦|
ಪನಮಂ ಕೈಕೊಳ್ವುದುಂ,೧ಬೆಳ್ಳನೆ ಬೆಳಗಲೊಡಂ ತೋರುಗುಂಕರ್ಮಭೂ ವ||
ರ್ತನಮತ್ಯಾಸನ್ನಮೆಂದಾ ಸ್ಥಿತಿಯನರಿಪಿ ಸಂತೈಸಿ ಸಂತಾಪ ವಿಚ್ಛೇ|
ದನಮಂ ತಂದಂ ಯಶಶ್ಚಂದ್ರಿಕೆಗೆ ನೆರೆಯದೆಂಬನ್ನಮಾಶಾಂತರಾಳಂ ||೮೦||
ಆತನಿಂ ಬಳಿಯಂ ಪನ್ನೆರಡನೆಯ ಕುಲಧರಂ ಮರುದ್ದೇವನೆಂಬಂ--
ಕ೦||ಸರಿ ಸುರಿಯೆ,ಮಿಂಚು ಮಿಳ್ಳಿಸೆ:
ಸುರಚಾಪಂ ನೆಗೆಯೆ ಬೆಗಡುಗೊಂಡವರಂ ಸಂ||
ವರಿಸಿ ಘನಾಘನ ಸಮಯ-
ಸ್ವರೂಪಮಂ ತಿಳಿಸಿ ಕಳೆದನವರುಮ್ಮಳಮಂ ||೮೧||
ಆತನಿಂ ಬಳಿಯಂ ಪದಿಮೂರನೆಯ ಕುಲಧರಂ ಪ್ರಸೇನಜಿತ್ತೆಂಬನಾ ಕಾಲ
ದೊಳ್ ದರಿಯುಮಳ್ದರಿಯುಂ ಕುಳಿಯುಂ ಕುತ್ತುರುಂ ಬೆಟ್ಟಮುಂ ಘಟ್ಟಮು
ಮುಪನದಿಯುಮುಪಸಮುದ್ರಮುಂ ಪುಟ್ಟ ಸಲಿಲ೨ಸಂಘಾತದಿನಪಮೃತ್ಯು ಪುಟ್ಟಿ
ಮಾನಸರಸಹ್ಯ ಶೋಕಾನಲ ದಂದಹ್ಯಮಾನ ಮಾನಸರಾಗೆ--
ಕಂ||ತವೆ ತೈಲಂ ದೀಪಂ ನಂ
ದುವಂತೆ ಗಳಿಯಿಸೆ ನಿಷೇಕಮಳಿವರ್ ಮುನ್ನಂ
ಪವನ ಪ್ರಹಾರದಿಂ ತೈ
ಲವುಳ್ಳೊಡಂ ನಂದುವಂತೆ ಪೊಂದುವರೀಗಳ್
ಬಡಿಕೊಳೆ ಕಾಯುಂ ಪಣ್ಣುಂ
ತೊಡ೦ಬೆ ಪಳಿದುದಿರ್ವ ಮಾಳ್ಕೆಯಿಂ,ಕಿಳಿವಿರಿಯರ್||
ಮಡಿವರನುಕ್ರಮದಿ೦|ಸಾ
ವೊಡರಿಸದೊಡರಿಸುವುದಲ್ತೆ ಕದಳೀಘಾತಂ ||೮೩||
ಉದಯಿಸಿ,ನಡುವಗಲಪ್ಪುದು
ಮುದಿತೋದಿತನಾಗಿ|ಸೂರ್ಯನಸ್ತಮಿಸುವವೋಲ್||
ಉದಯಿಸಿ,ಜೌವನಮಂ ತಳೆ
ದೊದವಿದ ಮುಪ್ಪಿನೊಳೆ ಕಳಿವರಿಲ್ಲಿಂ ಬಳಿಯಂ ||೮೪||
1. ಬೆಳ್ಪನೆ. ಕ, ಖ, ಗ, ಘ,.
2. ಸಂಪಾತದಿನಪಮೃತ್ಯು ಮರಣಮಾಗೆ; ಚ.