ಈ ಪುಟವನ್ನು ಪ್ರಕಟಿಸಲಾಗಿದೆ



೧೬
ರಾಮಚಂದ್ರ ಚರಿತಪುರಾಣಂ

ಎಂದು ಕಾಲಸ್ವರೂಪ ನಿರೂಪಣಂಗೆಯ್ದವರ ಶೋಕ ಪ್ರತ್ಯನೀಕಮನದಿರ್ಪಿದಂ
ಈ ಪೇಳ್ದಿ ಕುಲಧರ ಸಂಕುಲಕ್ಕೆ--

ಕಂ॥ಒ೦ದು ಪಳಿತದ ದಶಾಂಶದೊ
ಳೊಂದಂಶ೦ ಮೊದಲ ಮನುಗೆ ಪದಿಮೂವರೊಳಂ||
ಪಿಂದಣವರ್ಗಳ ದಶಾಂಶದೊ
ಳೊಂದಂಶಂ ಮುಂದಣವರ್ಗೆ ಪರಮಾಯುಷ್ಯಂ||೮೫||

ಸಾಸಿರಮುಮೆಂಟುನೂಳು ಶ
ರಾಸನವೊರ್ವಂಗೆ| ಪಂಚಶತ ಹೀನಂ ಬಾ||
ಣಾಸನಮಿರ್ವರ್ಗುಳಿದ
ರ್ಗೋಸರಿಕುಂ ಕ್ರಮದಿನುದ್ದಮಿರ್ಪತ್ತೈವಿಲ್||೮೬||

ಮನು ಚ೦ದ್ರಾಭಂ ಪಾಂಡುರ
ತನುವೆ ಯಶಸ್ವಿ ಪ್ರಸೇನಜಿಚ್ಚಕ್ಷುಷ್ಮರ್
ವನಜ ದಳಚ್ಛವಿಗಳ್ ಕಾಂ
ಚನ ರೋಚಿಷುಗಳೆ ಮಿಕ್ಕ ಕುಲಧರರೆಲ್ಲಂ ||೮೭||

ಮಂತಣಮೇನಾದಿಯ ಮ
ಸ್ವಂತರದೊಳಶೀತಿಭಾಗಿ ಪಲ್ಯದೊಳಾವ:
ನ್ವಂತರ ದಶಮಾಂಶಂ ಮ
ನ್ವಂತರಮಕ್ಕುಂ ಪ್ರಸೇನಜಿತ್ಪರ್ಯತಂ ||೮೮||

ಕ್ರಮದಯ್ವರಿಂದೆ ಹಾ ದಂ
ಡಮಯ್ವರುಂ ಮನುಗಳಿ೦ದೆ ಹಾಮಾದಂಡಂ
ಸಮನಿಸೆ ಹಾಮಾ ಧಿಗ್ದಂ
ಡಮಯ್ವರಿ೦ದಾಯ್ತು ಭರತನಿಂ ತನುದಂಡ ||೮೯||

ತದನಂತರಂ ಪದಿನಾಲ್ಕನೆಯ ಕುಲಧರಂ ನಾಭಿರಾಜನೆಂಬಂ ಪಂಚವಿಂಶ
ತ್ಯುತ್ತರ ಪಂಚಶತ ಶರಾಸನೋತ್ಸೇಧನುಂ ಪೂರ್ವಕೋಟಿ ಪರಮಾಯುಷ್ಯನುಮೆನಿಸಿ

ಕಂ||ಮುನ್ನಿನ ಜನ್ಮದ ಸುಕೃತಮೆ
ಸನ್ನಿದಮಾಯ್ತೆನೆ ಮತಿ ಶ್ರುತಾವದಿಬೋದಂ||
ತನ್ನೊಡನೆ ಪುಟ್ಟಿ|ಪುಟ್ಟದ
ನೇನ್ನಾಭಿ ಯಶಸ್ಸನ್ನಾಭಿಯೋ ಕುಲಧರರೊಳ್||೯೦||


1. ಭಾಗ, ಚ, 2. ದಶಮಾಸಂ, ಕ, ಖ.