ಈ ಪುಟವನ್ನು ಪ್ರಕಟಿಸಲಾಗಿದೆ
Vii

ತನಯ.' 'ಜಿನಾಕ್ಷರಮಾಲೆ' ಮೊದಲಾದ ಇತರ ಗ್ರಂಥಗಳನ್ನೂ ರಚಿಸಿರುವಂತೆ ದೇವ ಚಂದ್ರನು ರಾಜಾವಳೀ ಕಥೆಯಲ್ಲಿ ಹೇಳಿರುತ್ತಾನೆ. ಅಭಿನವ ಪಂಪನ ದೇಶ, ಕಾಲ, ವಂಶ ಮೊದಲಾದುವು ಯಾವುವೂ ಇವನ ಗ್ರಂಥಗಳಿಂದ ತಿಳಿಯಬರುವುದಿಲ್ಲ. ಆದರೆ ಅವನು ವಿಜಯಪುರದಲ್ಲಿ ಮಲ್ಲಿನಾಥ ಜಿನಾಲಯವನ್ನು ಕಟ್ಟಿಸಿ ಮಲ್ಲಿ ನಾಥಪುರಾಣವನ್ನು ಬರೆದಂತೆ ಆ ಪುರಾಣದಲ್ಲಿ ಹೇಳಿದೆ. ಈ ವಿಜಯಪುರವು ಈಗಿನ ಬಿಜಾಪುರವಾಗಿರಬಹುದು; ಇವನ ಊರೂ ಇದೇ ಇದ್ದಿರಬಹುದು. ಇವನು ಐಶ್ವರ್ಯವಂತನಾಗಿಯೂ ಉನ್ನತಸ್ಥಿತಿಯಲ್ಲಿದ್ದಂತೆಯೂ ತಿಳಿಯಬರುತ್ತದೆ, ಇವನ ಬಿರುದುಗಳು :-ಕವಿತಾಮನೋಹರ, ಭಾರತೀಕರ್ಣಪೂರ, ಸಾಹಿತ್ಯ ವಿದ್ಯಾಧರ, ಮೊದಲಾದುವು. ಇವುಗಳಲ್ಲೊಂದನ್ನು ರಾಮಚಂದ್ರಚರಿತ ಪುರಾಣದ ಪ್ರತಿ ಆಶ್ವಾ ಸದ ಕೊನೆಯ ಪದ್ಯದಲ್ಲಿ ಕವಿಯು ಕಥಾನಾಯಕನ ಪರವಾಗಿ ಉಪಯೋಗಿಸುತ್ತಾನೆ.
* ಕವಿಯ ಕಾಲ - ಈ ಕವಿಯ ಕಾಲವನ್ನು ಗೊತ್ತು ಮಾಡುವುದಕ್ಕೆ ಕೆಲವು ಆಧಾರಗಳಿರುವುವು : —
(೧) ಎರಡನೆಯ ನಾಗವರ್ಮನು (ಸುಮಾರು ಕ್ರಿ. ಶ. ೧೧೪೫) ತನ್ನ ಕರ್ಣಾಟಕ ಭಾಷಾಭೂಷಣದಲ್ಲಿ “ದ್ವಿತೀಯಾರ್ಥ ಚತುರ್ಥಿ ” ಎಂಬ ಸೂತ್ರಕ್ಕುದಾಹರಣವಾಗಿ “ ಬಹುತಾಪಕ್ಕೆ ಬಿಗುರ್ತ ವಿಷ್ಣು ಪಡೆವಂ ಮತ್ತಾವತಾರಕ್ಕೆ ” ಎಂಬ ರಾಮಚಂದ್ರಚರಿತ ಪುರಾಣದ ಪದ್ಯ (೭-೯೮) ಭಾಗವನ್ನು ಕೊಟ್ಟರು ವುದರಿಂದ ಅಭಿನವಪಂಪನು ಈ ನಾಗವರ್ಮನ ಕಾಲಕ್ಕೆ ಹಿಂದೆಯೇ ಪ್ರಸಿದ್ದಿಗೆ ಬಂದಿರಬೇಕು.
(೨) ಕರ್ಣಪಾರ್ಯನು (ಸು. ೧೧೪೦) ತನ್ನ ನೇಮಿನಾಥಪುರಾಣದಲ್ಲಿ-

        ಕಂ|| ಅದ್ಯತನನಾಗಿಯುಂ ನೆಗ |
              ಟ್ರಾದ್ಯರ ದೊರೆಯೆನಿಸಿ ಮೆರೆದು ಸಾಹಿತ್ಯ ಕಳಾ ||
              ಹೃದ್ಯತೆಯಿನೆಸೆದನಾ ನಿರ |
              ವದ್ಯ ಗುಣಂ ಸಂದ ನಾಗಚಂದ್ರ ಕವೀಂದ್ರಂ ||

ಎಂದು ಹೊಗಳಿರುತ್ತಾನೆ; ಆದುದರಿಂದ ಪಂಪರಾಮಾಯಣವು ೧೧೪೦ ಕ್ಕೆ ಮೊದಲೇ ಹುಟ್ಟಿರಬೇಕು.
(೩) “ಮುನಿನಾಥಂ ದಶಧರ್ಮ ಧಾರಿ-ಎಂಬ ರಾಮಚಂದ್ರಚರಿತಪುರಾಣದ ಪದ್ಯವು (೧-೨೦) ಶ್ರವಣಬೆಳೊಳದ ೪೭ ನೆಯ ಶಾಸನದಲ್ಲಿ ದೊರೆಯುತ್ತದೆ. ಈ


  • ಕರ್ಣಾಟಕ ಕವಿಚರಿತೆ, ೧-೮೦-೮೨