೫೬
ಅನಂತರಂ ನಿಜಿಪ್ರಿಯನ ನಿಯಮದಿನರ್ಧಾಸನದಿನೆಳ್ದು ಪೂಮಾಲೆಯು
ಮನವನಿಪತಿಯ ನಯನಕುವಲಯ ಮಾಲೆಯುಮನಾಂತು, ಬಳಲ್ಮುಡಿ ಚೆಲ್ವಿಂಗೆ
ಮುಡಿಗವಿದಂತೆ ಸೊಗಯಿಸೆಯುಂ, ಕೊರಲೊಳಿಕ್ಕಿದೆಕ್ಕಸರದ ಕೆಂಬಟ್ಟೆಯ ತೊಂಗಲ
ನಂಗ ಜಂಗಮಲತೆಯ ತಳಿರ ತೊಂಗಲಂತೆ ಪೊಳೆಯೆಯುಂ, ಮೇಲುದರ ಸೆರಂಗ
ನುರೆ ಸೆರೆಗೆಯ್ದು ಪೊರಪೊಣ್ಮುವ ಪರಭಾಗದ ಶರೀರಕಾಂತಿ ಲಾವಣ್ಯರಸದ ತಂದ ಲನಗುಂದಲೆಮಾಡೆಯು೦, ಘನನಿತಂಬಬಿಂಬಮಂ ಬಳಸಿದ ೧ನೂಲತೊಂಗಲ ಮಧುರಧ್ವನಿ ಮನುಜ ಮಕರಧ್ವಜನ ಮನಮನೊಡನೊಡನೆ ಕರೆವಂತಡಿಗಡಿಗೆ
ಪೊಣ್ಮೆಯುಂ, ಮನೋಜರಾಜನ ನೀರಾಜನ ದೀಪಕಳಿಕೆಯಂತೆ ಕೈಕೆ ನಿಜ ನಿವಾಸಕೆ ಬಿಜಯಂಗೆಯ್ವುದುಂ--
ಚ|| ನೆನೆಯಿಸೆ ಪೂವಿನ೦ಬನಪರಾಜಿತೆ ಕಣ್ಗೆ ಸುಮಿತ್ರೆ ಮೈತ್ರಿಯಂ|
ಜನಿಯಿಸೆ ಬೀರೆ ಸುಪ್ರಭೆ ತನುಪ್ರಭೆಯಂ ಗೆಲೆ ಕೈಕೆ ಕಂತುರಾ||
ಜನ ಜಯಲಕ್ಷ್ಮಿಯಂ,ನಿಜಕುಲಾಂಗನೆಯರ್ಪೆಸರ್ವೆತ್ತ ನಾಲ್ವರಿ೦|
ಜನಪನ ರಾಜಲೀಲೆ ಗೆಲೆವಂದುದು ಮನ್ಮಥರಾಜ ಲೀಲೆಯಂ||೬೮||
ಅಂತು ದಶರಥಮಹೀನಾಥನಿಷ್ಟ ವಿಷಯಸುಖ ಸಂತುಷ್ಟನಾಗಿರ್ಪುದುಂ
ಕಂ|| ಅಪರಾಜಿತಾ ಮಹಾದೇ
ವಿ ಪತಿವ್ರತೆ ಶೀಲ ಗುಣ ಕಳಾ ಪರಿಣತಿಯಿಂ||
ನೃಪನ ಮನಂಬಡೆದುಂ ಧ
ರ್ಮಪತ್ನಿಯೆನೆ ಪಡೆದಳಗ್ರಮಹಿಷೀ ಪದಮಂ||೬೯||
ಅಂತಾ ಕಾಂತೆ ದಶರಥನ ಮನೋರಥ ಜನ್ಮಭೂಮಿಯೆನಿಸಿರ್ದೊಂದುದಿವಸಂ-
ಚ|| ಋತುಮತಿ ದೇವಿ ರನ್ನದ ವಿತ್ತರ್ದಿಕೆಯೊಳ್ನೆಲಸಿರ್ದು ಮಾಧವೀ|
ಲತೆಯ ಬೆಡಂಗುವೆತ್ತ ಸೆಳೆಯಂ ಪಿಡದಂಗಜ ಮೋಹಪಾಶಮಂ||
ರತಿ ಪಿಡಿದಂತೆ ದೇಸೆವಡೆದಲ್ ಪಡೆವಂತು ಮದಾಲಸಂಗಳಾ|
ಯತನಯನಂಗಳಾತ್ಮ ರುಚಿ ಮಂಜರಿಯಿಂ ಕುಸುಮೋಪಹಾರಮಂ||೭೦||
ಕಂ|| ಕಮಳಾನನೆಗೆ,ದರಸ್ಮಿತ
ಕುಮುದಾಕ್ಷಿಗೆ ಕರ್ಣಿಕಾರಕೋಮಳೆಗೆ ವಿಚಿ||
ತ್ರಮೆ ಪುಷ್ಪವತಿಗೆ ನೇತ್ರ
ಭ್ರಮರಾಕರ್ಷಣ ವಿಲಾಸಮೆನೆ ಸೊಗಯಿಸಿದಳ್||೭೧||
೨. ಮೇಖಲಾವೃತ ಮಣಿಕಿಂಕಿಣೀ. ಗ. ಘ.