ಈ ಪುಟವನ್ನು ಪರಿಶೀಲಿಸಲಾಗಿದೆ

೫೭

ತೃತಿಯಾಶ್ವಾಸಂ


ಅನಂತರಂ ಕೌಶಲ್ಯೆ ಚತುರ್ಥಸ್ನಾನ ಮಾಂಗಲ್ಯಮನಪ್ಪು ಕೆಯ್ದು-

ಚ|| ಮಳಯಜದಣ್ಪು ಮಲ್ಲಿಗೆಯ ಸೋರ್ಮುಡಿ ನಿಪ್ಪೊಸತಪ್ಪ ಮೌಕ್ತಿಕಂ|
     ಗಳ ತೊಡವುಟ್ಟ ಪಟ್ಟಳಿಗೆ ದಂತಮರೀಚಿಗಳಿಂ ಬೆಳರ್ತ ಬಾ||
     ಯ್ಪಳಿಕಿನ ಪೆಣ್ಗೆ ಪಾಸಟಿಯೆನಿಪ್ಪ ವಿಲಾಸಮನೀಯೆ ಪುಷ್ಪಕೋ|
     ಮಳೆ ವಧು ಕೊಂಡ ಬೆಳ್ವಸದನಂ ಸೆರೆಗೊಂಡುದನಂಗನಾಜ್ಞೆಯಂ||೭೨||

     ಅ೦ತು ಕೈಗೆಯ್ದು--

ಮ|| ಕಡೆಗಣ್ಕಾಮಶರಂಗಳಂ ಕೆದರೆ ಭೃಂಗಾಕೃಷ್ಟಿಯಂ ಮಾಡೆ ಸೋ|
      ರ್ಮುಡಿ ಲಾವಣ್ಯ ರಸ ಪ್ರವಾಹ ಭರಮಂ ತುಂಗಸ್ತನಂ ತಾಳೆ ಕ್ತೇ||
      ಸಡಿಗಳ್ಕೇಸರ ಪಾಂಸುವಂ ಕೆದರೆಬಂದಳ್ ದೋರ್ಲತಾಂದೋಳನಂ|
      ಪಡೆವನ್ನ೦ ಮಣಿಪಾರಿಹಾರ್ಯ ರವದಿಂ ಕರ್ಣಾಮೃತಾಸಾರಮಂ||೭೩||

      ಕಂ|| ಶಶಿಲೇಖೆ ಬಂದು ಪುಗುವಂ
           ತೆ ಶರದ್ಘನ ಕೂಟ ಸದನಮಂ ಲೀಲೆಯಿನಾ||
           ಶಶಿವದನೆ ಬಂದು ಪೊಕ್ಕಳ್
           ವಿಶಾಲ ಶಶಿಕಾಂತ ಕಾಂತ ಶಯ್ಯಾಗೃಹಮಂ||೭೪||

      ಅಂತುಪೊಕ್ಕು--

      ಕಂ|| ಪಳಿಕಿನ ಪಳಿವಾವುಗೆಯಿಂ
           ತೊಳಗುವ ಹಂಸೋಪಧಾನ ಕಲ್ಪಿತ ತಲ್ಪ||
           ಸ್ಥಳದಿಂ ರಂಜಿಪ ರನ್ನದ
           ಸೆಳೆಮಂಚದಮೇಲೆ ಲೀಲೆಯಿಂ ಕುಳ್ಳಿರ್ದಳ್||೭೫||

      ಆಗಳಾ ಗೃಹಾಧಿದೇವತೆಯಧರಮಣಿಯಂತೆ ಜಲಜಲಿಸುವ ಮಾಣಿಕದ
ಸೊಡರ್ಗುಡಿಗಳುಂ, ಇಕ್ಷುಚಾಪ ಶರಮೋಕ್ಷ ಹುಂಕಾರದಂತೆ ಶಿಲೀಮುಖ ಝಂ
ಕಾರ ಮುಖರಂಗಳೆನಿಸುವುಪಹಾರ ಕುಸುಮಂಗಳುಂ ಸ್ಮರ ಗುರುಶಿಷ್ಯರಂತೆ ಸಮ್ಮೋ
ಹನ ಮಂತ್ರಮಂ ಪದಂಗುಟ್ಟುವ ಶುಕಶಾರಿಕೆಗಳುಂ, ಸಂಭೋಗ ರಸತರಂಗಿಣಿಯ ತೆರೆಯುಲಿಪದಂತೆ ಮಧುರವಾದ ಪಾರಿವದುಲಿಪಂಗಳುಂ, ಮದನಮೋಹನ ಮೂ
ರ್ಛಯಂ ಬೀರುವಂತೆ ದಂತಿದಂತದಿಂ ಕಂಡರಿಸಿದಂಚೆವಿಂಡನೇಳಿಸಿ ಸುಳಿವ


1. ನೀರ್ಪೊಸ. ಘ.
2. ಪೊಳೆ, ಕ, ಖ; ಪಾವುಗೆಯಿಂದ೦. ಗ, ಫ.