ಈ ಪುಟವನ್ನು ಪರಿಶೀಲಿಸಲಾಗಿದೆ

೬೧

ತೃತಿಯಾಶ್ವಾಸಂ



ಉ|| ಒಂದೆಲೆವೋದಶೋಕೆಯೆರ1ಡಳ್ಗುಡಿಬಾಲತಮಾಲ ಷಂಡದೊಳ್|
     ಮಂದ ಸಮೀರನಿಂ ಪೊಳೆವವೋಲ್ ತಳಮು೦ ನಳಿತೋಳುಮಂದಮಂ||
     ಮುಂದಿಡೆ ಪಿಕ್ಕಿಪಿಕ್ಕಿ ಪುಡಿಗತ್ತುರಿಯಂ ತಳಿದಳ್ಪೆರಳ್ ಲತಾ|
     ಸುಂದರಿ ಕಾಮಪಾಶದವೊಲಿರ್ದ ಲತಾಂಗಿಯ ಕೇಶಪಾಶದೊಳ್||೮೮||

     ಅ೦ತು ಕೈಗೆಯು ಮಣಿದರ್ಪಣಮನವಲೋಕಿಸುತಿರ್ಪುದುಮಾ ಪ್ರಸ್ತಾವ
ದೊಳ್

ಉ|| ಚಿತ್ರಲಯ ಪ್ರಗಲ್ಭ ಹಯವಲ್ಗನದಿ೦ ಮಣಿಕುಂಡಲಾಂಶುಗಳ್
     ಚಿತ್ರಿಸೆ ಗಂಡಭಿತ್ತಿಯನುರಸ್ಥಳ ರಂಗದೊಳಂಗಹಾರಮಂ||
     ಸೂತ್ರಿಸೆ ತಾರಹಾರ ರುಚಿ ಮಂಜರಿಗಳ್ ನಿಜರೂಪಮಂಗನಾ|
     ನೇತ್ರ ವಿಕಾಸಮಂ ಪಡೆಯ ಪೊಕ್ಕನಿಳಾಧಿಪನಾ ನಿವಾಸಮಂ||೮೯||

     ಅಂತು ಪೊಕ್ಕು ಪರಿಮಿತ ಪರಿಜನಂ ದಶರಥ ಮಹೀನಾಯಕನುಚ್ಚೈಶ್ಯವ್ರದಿ
ನಿಳಿವ ನಿಳಿ೦ಪ ನಾಯಕನಂತೆ ವಾಹನದಿನಿಳಿದು ಬಂದು ನಿಜಸತಿಯಂಗಮಂ
ಸೋ೦ಕಿ ಕುಳ್ಳಿರ್ಪುದುಂ--

     ಕಂ|| ಅರಸಿ,ಸುಲಿಪಲ್ಲ ಪಸರಿಪ
           ಮರೀಚಿ ಮನಸಿಜನ ಜಸಮಿದೆನಲಮರ್ದಿನ ಬ||
           ಲ್ಸರಿ ಸುರಿದಪುದೆನಲವನೀ
           ಶ್ವರಂಗಿರುಳ್ ತನ್ನ ಕಂಡ ಕನಸಂ ಪೇಳ್ದಿಳ್||೯೦||

     ಆಗಳವನೀಪತಿ ನಿಜಮನೋವಲ್ಲಭೆಯ ಶುಭಸ್ವಪ್ನದರ್ಶನಕ್ಕೆ ಹರ್ಷಚಿತ್ತನಾಗಿ-

ಮ|| ಸತತಂ ದಾನಿ ಮದೇಭದಿಂ, ಸಕಲ ಭೂಭೃನ್ಮಸ್ತಕನ್ಯಸ್ತ ಪಾ|
      ದತಳಂ ಕೇಸರಿಯಿಂ, ಪ್ರತಾಪನಿಲಯಂ ತಿಗ್ಮಾಂಶುವಿಂ ಸತ್ಕಲಾ|
      ಚತುರಂ ಚ೦ದ್ರನಿನಾದಪಂ ನಿನಗೆ ನೇತ್ರಾನಂದನಂ ನಂದನಂ|
      ಸತಿ ನೀನಲ್ಲದರಿನ್ನವಪ್ಪ ಕನಸಂ ಕಾಣ್ಬಂತು ಮುಂ ನೋ೦ತರಾರ್||೯೧||

      ಎಂದು ತತ್ಫಲ ಸ್ವರೂಪ ನಿರೂಪಣಂ ಮಾಳ್ಪುದುಂ-

      ಕಂ|| ಶ್ರುತಿಪಥಮಂ ಸಾರ್ತರೆ ಘನ
            ರುತಿ ರಾಗಮನಪ್ಪುಕೆಯ್ವವೋಲ್ ಸೋಗೆನವಿಲ್‌||
            ಸುತ ಲಾಭವಾರ್ತೆಯಂ ಕೇ
            ಳ್ದು ತನೂದರಿ ರಾಗರಸ ತರಂಗಿತೆಯಾದಳ್||೯೨||


೧. ಡೊಲ್ಗುಡಿವೋದ. ಗ, ಘ.