೬೨
ಅನಂತರಮವನಿಪತಿ ಸತಿಗೆ ಸಮಯೋಚಿತ ಪರಿಚರ್ಯಾಚತುರೆಯರಂ ನಿಯೋಜಿಸಿ ಬಿಜಯಂಗೆಯ್ವುದುಂ ಕತಿಪಯ ದಿವಸಂಗಳ್ ನಿರತಿಶಯ ಸುಖಸ್ವರೂಪ೦ಗಳಾಗಿ
ಪೋಗೆ--
ಕಂ|| ಎಳವಸಿಳೊಳ್ ಸತಿಯ ಮೊಗಂ,
ಬೆಳರ್ತುದನ್ವರ್ಥಮಾಯ್ತು ಚಂದ್ರಾನನೆಯೆಂ||
ದಿಳೆ ಪೊಗಳ್ವಿ ಮಾತು ನೀುಳ್ದುದು
ಲಳಿತಾಳಕಮಾಳೆ ಸುಯ್ಗೆ ೧ಸಾರ್ವಳಿಗಳವೋಲ್||೯೩||
ಮಕರಾಂಕ ದ್ವಿಪಮದ ಪ
ಟಿಕೆಯೆನಿಸಿ ಕಪೋಲಮಾಲಮಂ ಮುಟ್ಟಿದುವಾ||
ಚಕಿತಾಕ್ಷಿಯ ಹರಿನೀಳಾ
ಳಕಂಗಳಾನನ ಸರೋಜಿನೀ ಮಧುಪಂಗಳ್||೯೪||
ತೋರಮೊಲೆಗಳ ಮೊಗಂಗಳ್
ರಾರಾಜಿಸಿ ಕರ್ಪುವೆತ್ತು ಮೋಹನ ಧೂಮೋ||
ದ್ಗಾರಿಗಳಂ ಕಾಂಚನ ಭೃಂ
ಗಾರಿಗಳಂ ಪೋಲ್ತುವರಸಿಗಂದೆಳವಸಿರೊಳ್||೯೫||
ಬಟ್ಟಿದುವೆನಿಪ್ಪ ಮೊಲೆಗಳ
ತೊಟ್ಟು ಕರಂಗುವುದುಮೊಡನೆ ಸರ್ವಸ್ವಮುಮಂ||
ಕೊಟ್ಟು ಕರಂಗಿದರಹಿತರ್
ಕೆಟ್ಟುವು ವಳಿಯೊಡನೆ ವೈರಿವಂಶಾವಳಿಗಳ್||೯೬||
ಚ|| ಉದರದೊಳಿರ್ದ ಬಾಲಕನಶೇಷ ಕಲಾನಿಧಿ ತಪ್ಪದಪ್ಪನ|
ಲ್ಲದೊಡೊಗೆದೊಂದೆ ನಾಳದೊಳೆ ಹೇಮಸರೋಜಮಮಳ್ಗಳಾಗಿಪು||
ಟ್ಟಿದುವವರೊಳ್ ಮದಾಳಿ ನೆಲಸಿರ್ದಪುವೆಂ೨ತೆನೆ ನೀಳ್ದಬಾಸೆ ಬೀ|
ಗಿದಮೊಲೆ ನೀಳಚೂಚಕಮಿವೇಂ ಬಗೆಗೊಂಡುವೊ ಲೋಲನೇತ್ರೆಯಾ||೯೭||
ಕಂ|| ಉದರದೊಳಿರ್ದ ತನೂಭವ
ನುದಾರತಾ ಗುಣದ ಪೆರ್ಮೆಯಂ ಪೇಳ್ವಿವೊಲಾ||
ಸುದತಿಗೆ ನಿರಂತರಂ ಪಾ
ತ್ರದಾನಮಂ ಮಾಳ್ಪಿ ಬಯಕೆ ಪುಟ್ಟಿತ್ತಾಗಳ್||೯೮||
1 ಪಾರ್ವ. ಗ ಘ.
2.ದೆನೆ. ಕ, ಖ