ಈ ಪುಟವನ್ನು ಪರಿಶೀಲಿಸಲಾಗಿದೆ
ತೃತೀಯಾಶ್ವಾಸಂ



      ಕಂ|| ಉಭಯ ಶ್ರೇಣಿಯ ಖಚರ
            ಪ್ರಭುಗಳ ಸಿಂಹಾಸನಂಗಳೊಳ್ ಕುಳ್ಳಿರಲ೦||
            ದಿಭ ಗಮನೆ ಬಯಸಿದಳ್ ಸಾ
            ರ್ವಭೌಮನೀ ತನಯನೆಂಬುದಂ ಸೂಚಿಪವೋಲ್||೯೯||

            ಪರ ಭೂಪಾಲದ್ವೀಪಾಂ
            ತರಾಳ ಕೇಳೀವನಂಗಳಂ ಕಿಳ್ತು ತ||
            ತುರಮನುರಿಪುವುದನೀಕ್ಷಿಸ
            ಲರವಿಂದಾನನೆಗೆ ಬಯಕೆಯಾಯ್ತೆಳವಸಿರೊಳ್||೧೦೦||

            ಕುಲ ಕುಧರಮನೇರಿ ದಿಶಾ
            ವಲೋಕನಂ ಮಾಡುವಖಿಲಕುಲವಾಹಿನಿಯೊಳ್||
            ಜಲಕೇಳಿಯನಾಡುವ ಬಯ
            ಕೆ ಲತಾಕೋಮಲೆಗೆ ಪುಟ್ಟಿದತ್ತೆಳವಸಿರೊಳ್||೧೦೧||

            ಬಸಿರ ಆ ಮಗಂಗಿಲ್ಲಿವರಂ
            ವಸುಧಾತಳಮೇಕ ಭೋಗ್ಯಮೆಂದರಿಪುವವೋಲ್||
            ವಸುಧೆಯ ನಾಲ್ಕುಂಕಡೆಯೆಡೆ
            ಯ ಸುರಭಿ ಮೃತ್ತಿಕೆಯನಳ್ತಿಯಿಂ ಸೇವಿಸುವಳ್||೧೦೨||

            ಅವನೀಶ್ವರನಾಗಳ್ ಪುಂ
            ಸವನಂ ಮೊದಲಾದ ಸಕಲ ಮಾಂಗಲ್ಯ ಮಹೋ||
            ತೃವಮಂ ಮೆರೆದಂ ತಣಿವ
            ನ್ನವಿತ್ತು ವಸುಮತಿಗೆ ವಸ್ತ್ರಭೂಷಾವಳಿಯಂ||೧೦೩||

     ಅಂತು ನೆಗಳ್ದಿ ಮಹೋತ್ಸವಂಗಳೊಡನೆ ಗರ್ಭಮುಂ ಬಂಧುಜನ ಹರ್ಷ ಗರ್ಭಮುಂಪರಿಪೂರ್ಣಮಾಗೆ--

ಚ|| ಮರಕತ ರಂಗದೊಳ್ ರಮಣಿ ತೀವಿದ ಗರ್ಭದ ಬಿಣ್ಪಿನಿಂ ನಯಂ|
     ಬೆರಸೆಡೆಯಾಡುವಾಗಳಡಿಯೂಡಿದ ಮೆಲ್ಲಡಿವಜ್ಜೆಗಳ್ ಮನೋ|| `
     ಹರಮೆನೆಸಿರ್ದುವೀ ಸತಿಯ ಗರ್ಭದೊಳಿರ್ದ ತನೂಜನಾದಪಂ|
     ವರನೆನಗೆಂದಿಳಾವಧುಗೆ ಪಲ್ಲವಿಸಿತ್ತನುರಾಗಮೆಂಬಿನಂ||೧೦೪||


1. ಇದು ಚ, ಪುಸ್ತಕದಲ್ಲಿಲ್ಲ.