ಈ ಪುಟವನ್ನು ಪ್ರಕಟಿಸಲಾಗಿದೆ

೯೦

ರಾಮಚಂದ್ರಚರಿತಪುರಾಣಂ

ಗಳಿಂದರ್ಚಿಸಿ ಜನಕಂ ಕತಿಪಯ ಪ್ರಯಾಣಂಗಳಿಂ ಕಳಿಪುವುದುಂ ರಾಮಲಕ್ಷ್ಮಣ
ರಯೋಧ್ಯೆಯಂ ಪೊಕ್ಕು ಸುಖದಿನಿರ್ಪುದುಮೊಂದುದಿವಸಂ--
     ಕ೦||ಜನಕಂ ತನುಜೆಯನಿತ್ತಂ
          ಮನುವಂಶ ಲಲಾಮನಪ್ಪ ರಾಮಂಗೆಂಬೀ||
          ಜನವಾರ್ತೆಗೇಳ್ದು ನಾರದ
          ಮುನಿಗಾದುದು ನೋಳ್ಪಿ ಕೌತುಕಂ ಜಾನಕಿಯಂ||೮೦||

ಉ|| ಪೆಂಡಿರ ಲೀಲೆಯಂ ಯತಿಗೆ ನೋಳ್ಪುದು ಪಾಳಿಯೆ ಮುಂಜಿ ಕಚ್ಚಟಂ|
     ಗುಂಡಿಗೆ ಬೋಳಮಂಡೆ ಮಣಿದ೦ಡಮಿವೀಕ್ಷಣ ಸೌಖ್ಯ ಹೇತುವೇ||
     ಕಂಡೊಡೆ ಬಾಲೆಯರ್ ತಮಗೆ ಪೇಸದೆ ಮಾಣ್ಬರೆ ನಾರದಂ ಮರು|
     ಳ್ಗೊಂಡವೊಲಾಗಸಕ್ಕೆ ನೆಗೆದಂ ವೃಥೆಯಲ್ತೆ ಸರಾಗ ಸಂಯಮಂ||೮೧||

     ಅಂತು ನಾರದಂ ಗಗನವೀಧಿಯಿಂ ಮಿಥಿಲೆಗೆ ಬಂದು ಕನ್ನೆವಾಡದ ಬಾಗಿ
ಲ್ವಡಮಂ ಪುಗುವಾಗಳ್--

     ಕಂ||ಬಿರಿಮುಗುಳಿಂ ತುರುಗಿದ ತಾ
          ವರೆಗೊಳದೊಳಗಾಡುವ೦ಚೆವೆಣ್ಣನದೇಂ ಚ||
          ಪ್ಪರಿಸಿದಳೊ ಸೀತೆ ಕನ್ಯಾ
          ಪರೀತ ವೈಡೂರ್ಯ ರತ್ನಮಯವೇದಿಕೆಯೊಳ್ ||೮೨||

     ಆಗಳದೃಷ್ಟಪೂರ್ವಮಂ ನಾರದನ ವಿಕೃತಾಕಾರಮಂ ಕಂಡು ತರುಣಿ ಹರಿಣಿ
ಯಂತೆ ಬೆರ್ಚಿ ಬಿರುತೋಡುವುದುಂ--

      ಕಂ||ತತ್ತರುಣಿಯ ಬಳಿವಳಿಯಂ
           ಪತ್ತಿ ಹಿತಾಹಿತ ವಿವೇಕ ವಿಕಲಂ ಪಳಿಯಂ||
           ಪೆತ್ತಾಮುನಿಪಂ ಭ್ರಾಮಕ
           ದತ್ತೆಳಸುವ ಪಚ್ಚೆಗರ್ಬುನಕ್ಕೆಣೆಯಾದಂ||೮೩||
    
           ನಾರದನೇಂ ತಳೆದನೊ ಕ
           ನ್ಯಾರತ್ನಮನೆಳಸಿ ಪರಿವ ಪರಿಣತಿಯಿಂ ನಿ||
           ಸ್ವಾರಮನಂ ನೀಲ ಶಲಾ
           ಕಾರತ್ನಮನೆಳಸಿ ಪರಿವ ತೃಣ ಪರಿಣತಿಯಂ||೮೪||

ಅಂತು ಬಳಿವಳಿಯನುಳಿಯದೆಯ್ತರ್ಪುದುಂ--